Faf du plessis | ವಿರಾಟ್ ಕೊಹ್ಲಿಗೆ ನನ್ನ ಬೆಂಬಲ  

1 min read
faf-du-plessis backs virat kohli ipl 2022 saaksha tv

faf-du-plessis backs virat kohli ipl 2022 saaksha tv

Faf du plessis | ವಿರಾಟ್ ಕೊಹ್ಲಿಗೆ ನನ್ನ ಬೆಂಬಲ  

ಬೆಂಗಳೂರು :  ‘ಕೊಹ್ಲಿಗೆ ನನ್ನ ಬೆಂಬಲವಿದೆ. ಆತ ಕೆಟ್ಟ ಟೈಮ್ ನಲ್ಲಿರೋದು ನಿಜ, ಆದ್ರೆ ಆತನಿಗೋಸ್ಕರ ದೊಡ್ಡ ಇನ್ನಿಂಗ್ಸ್ ಕಾಯುತ್ತಿದೆ ಎಂದು ಬ್ಯಾಡ್ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿಗೆ ಆರ್ ಸಿಬಿ ನಾಯಕ ಫಾಫ್ ಡುಪ್ಲಸಿಸ್ ಬೆಂಬಲ ಸೂಚಿಸಿದ್ದಾರೆ.

ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಡು ಆರ್ ಡೈ ಪಂದ್ಯದಲ್ಲಿ ಪಂಜಾಬ್ ತಂಡ ಆರ್ ಸಿಬಿ ವಿರುದ್ಧ 54 ರನ್ ಗಳಿಂದ ಜಯ ಸಾಧಿಸಿ ಪ್ಲೇ ಆಫ್ಸ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 209ರನ್ ಗಳಿಸಿತ್ತು. ಪಂಜಾಬ್ ಪರ ಲಿಯಾಮ್ 70,ಜಾನಿ ಬೈರ್ ಸ್ಟೋ 66 ರನ್ ಗಳಿಸಿದ್ದರು. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರು.

faf-du-plessis backs virat kohli ipl 2022 saaksha tv
faf-du-plessis backs virat kohli ipl 2022 saaksha tv

210 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಹತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ ನಷ್ಟಕ್ಕೆ 155 ರನ್ ಗಳಿಸಿ ಸೋಲಿಗೆ ಶರಣಾಯಿತು. ಈ ಸೋಲಿನೊಂದಿಗೆ ಆರ್ ಸಿಬಿ ತಂಡದ ಪ್ಲೇ ಆಫ್ಸ್ ಹಾದಿ ಮತ್ತಷ್ಟು ಕಠಿಣವಾಗಿದೆ.

ಪಂದ್ಯದ ಸೋಲಿನ ನಂತರ ಆರ್‌ಸಿಬಿ ನಾಯಕ ಡುಪ್ಲೆಸಿಸ್ ಕೊಹ್ಲಿ ಕೆಟ್ಟ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಕೊಹ್ಲಿಗೆ ನನ್ನ ಬೆಂಬಲವಿದೆ. ಆತ ಕೆಟ್ಟ ಟೈಮ್ ನಲ್ಲಿರೋದು ನಿಜ, ಆದ್ರೆ ಆತನಿಗೋಸ್ಕರ ದೊಡ್ಡ ಇನ್ನಿಂಗ್ಸ್ ಕಾಯುತ್ತಿದೆ. ಅದನ್ನು ವಿರಾಟ್ ಕೊಹ್ಲಿ ಪಡೆಯುತ್ತಾನೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಸುಲಭವಾದ ಆಟವಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ  ಟೈಮ್ ಕೈ ಕೊಡುತ್ತಿದೆ. ಇದು ಆಟದಲ್ಲಿ ಈ ರೀತಿ ನಡೆಯುವುದು ಸಹಜ. ಏನಾದ್ರೂ ಸರಿ ಪಾಸಿಟಿವ್ ಆಗಿ ಕಷ್ಟಪಟ್ಟರೇ ಫಲಿತಾಂಶ ಕಟ್ಟಿಟ್ಟಬುತ್ತಿ ಎಂದಿದ್ದಾರೆ ಫಾಫ್.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd