RCB ಯ “ಶೇರ್” ಆಗಯಾ..! ಫಾಫ್ ನಮ್ಮ ನಾಯಕ
ಐಪಿಎಲ್ ನ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಶ್ವದಾದ್ಯಂತ ಇದ್ದ ಕೋಟ್ಯಂತರ ಆರ್ ಸಿಬಿಯನ್ಸ್ ನ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಸಿಕ್ಕೇ ಬಿಟ್ಟ.
ಕೋಟ್ಯಾಂತರ ಅಭಿಮಾನಗಳ ನಿರೀಕ್ಷೆಗಳ ತಣಿಸುತ್ತಾ… ಆರ್ ಸಿಬಿ ಹೈಕಮಾಂಡ್ ನೂತನ ನಾಯಕನ ಘೋಷಣೆಯನ್ನು ಮಾಡಿದೆ. RCB ಅನ್ ಬಾಕ್ಸ್ ಅದ್ದೂರಿ ಕಾರ್ಯಕ್ರಮದಲ್ಲಿ ತಂಡದ ಹೊಸ ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು, ದಕ್ಷಿಣ ಆಫ್ರಿಕಾದ ಆಟಗಾರ, ಮಾಜಿ ಸಿಎಸ್ ಕೆ ತಂಡದ ಸ್ಟಾರ್ ಆಟಗಾರ ಫಾಫ್ ಡುಪ್ಲೇಸಸ್ ಅವರು ಆರ್ ಸಿಬಿ ತಂಡದ ನೂತನ ನಾಯಕರಾಗಿದ್ದಾರೆ.
ಮೆಗಾ ಹರಾಜಿನಲ್ಲಿ ಆರ್ ಸಿಬಿ ಫಾಫ್ ಡುಪ್ಲೇಸಸ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಫಾಫ್ ಡುಪ್ಲೇಸಸ್ ಅವರು 115 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 81 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು 40 ಟಿ- 20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದು, 25 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 2020ರಲ್ಲಿ ಫಾಫ್ ಡುಪ್ಲೇಸಸ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು.
ಇನ್ನು ಐಪಿಎಲ್ ನಲ್ಲಿ ಫಾಫ್ ಡುಪ್ಲಸಸ್ ಅವರು 100 ಪಂದ್ಯಗಳನ್ನು ಆಡಿದ್ದಾರೆ. 35ರ ಸರಾಸರಿಯಲ್ಲಿ 2935 ರನ್ ಕಲೆ ಹಾಕಿದ್ದಾರೆ. 22 ಅರ್ಧಶತಗಳನ್ನು ದಾಖಲಿಸಿದ್ದಾರೆ. ಕಳೆದ ಬಾರಿ ಸಿಎಸ್ ಕೆ ತಂಡದ ಪರ ಆಡಿದ್ದ ಡುಪ್ಲೇಸಸ್ ಅವರು ಫೈನಲ್ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.