ಜಿಲ್ಲಾಧಿಕಾರಿಗಳ ಹೆಸರಲ್ಲಿ ಮತ್ತೆ ನಕಲಿ ಫೇಸ್ ಬುಕ್ ಅಕೌಂಟ್ – ಹಣ ವಸೂಲಿಗೆ ಮಾಸ್ಟರ್ ಪ್ಲಾನ್
ಚಿಕ್ಕಬಳ್ಳಾಪುರ : ಇತ್ತೀಚೆಗೆ ಸೋಷಿಯಲ್ ಮೀಡಿಯಾ ಖಾತೆಗಳ ಹ್ಯಾಕಿಂಗ್ ಹಾವಳಿ ಗಹೆಚ್ಚಾಗಿದೆ. ಅದ್ರಲ್ಲೂ ಗಣ್ಯ ವ್ಯಕ್ತಿಗಳು ಸೆಲೆಬ್ರಿಟಿಗಳ ಅಕೌಂಡ್ ಗಳೇ ಹ್ಯಾಕ್ ಆಗುತ್ತಿದೆ. ಫೇಕ್ ಅಕೌಂಟ್ ಗಳ ಹಾವಳಿ ಹೆಚ್ಚಾಗಿದೆ. ಈ ನಡುವೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಲತಾ ಅವರ ಹೆಸರಲ್ಲಿ ನಕಲಿ ಪೇಸ್ ಬುಕ್ ಖಾತೆ ಸೃಷ್ಟಿಯಾಗಿರತುವುದು ಕಂಡುಬಂದಿದೆ..
ಅನಾಮದೇಯ ವ್ಯಕ್ತಿಗಳಿಂದ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ನಕಲಿ ಅಕೌಂಟ್ ಮೂಲಕ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದೇ ರೀತಿಯಾಗಿ ಈ ದುಷ್ಕರ್ಮಿಗಳು ಜಿಲ್ಲೆಯ ಹಲವು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಇನ್ನೂ ಈ ವರೆಗೆ 2ನೇ ಬಾರಿ ಡಿಸಿ ಹೆಸರಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಎಸ್ಪಿ ಮಿಥುನ್ ಕುಮಾರ್ ಗೆ ದೂರು ಸಲ್ಲಿಸಿದ್ದು, ಇಂತಹ ಷಡ್ಯಂತ್ರಕ್ಕೆ ಒಳಗಾಗಬಾರದೆಂದು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಖಾತೆಗೆ ಯಾರು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಫ್ಟ್ ಮಾಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.