ಯುಪಿಯಲ್ಲಿ ಮರ್ಯಾದಾ ಹತ್ಯೆ : ಮುಸ್ಲಿಂ ಯುವಕನ ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ಕುಟುಂಬ..!
ಉತ್ತರ ಪ್ರದೇಶ: ಅಪರಾಧಗಳು ಹೆಚ್ಚು ನಡೆಯುವ ಪ್ರದೇಶ ಯಾವುದು ಅಂದ್ರೆ ಯೋಚಿಸೋಕೆ ಸಮಯ ತೆಗೆದುಕೊಳ್ಳದೇ ಪಟ್ ಅಂತ ಎಲ್ಲರ ಬಾಯಲ್ಲೂ ಬರುತ್ತಿರುವ ಹೆಸರು ಉತ್ತರಪ್ರದೇಶ. ಅಷ್ಟರ ಮಟ್ಟಿಗೆ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೋಷಣೆ, ಮಹಿಳೆಯರು, ಯುವತಿ – ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯ , ಜಾತಿ ವಿವಾದ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಅದರಂತೆ ಮತ್ತೊಂದು ಹೇಯ ಕೃತ್ಯ ಯೋಗಿ ಆದಿತ್ಯ ನಾಥ್ ರಾಜ್ಯದಲ್ಲಿ ನಡೆದಿದ್ದು, ಇಡೀ ರಾಜ್ಯದ ಜನರನ್ನ ಬೆಚ್ಇ ಬೀಳಿಸಿದೆ.
ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನಕಲಿ ನರ್ಸ್ ಮಾಡಿದ್ದೇನ್ ನೋಡಿ..!
ಯುವತಿಯೊಬ್ಬಳು ಮುಸ್ಲಿಂ ಯುವಕನನ್ನ ಪ್ರೀತಿಸಿದಕ್ಕೆ ಆಕೆಯನ್ನ ಇಡೀ ಕುಟುಂಬ ಸದಸ್ಯರೇ ಸೇರಿ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮುಸ್ಲಿಂ ವ್ಯಕ್ತಿಯೊಂದಿಗಿನ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡಿದ್ದ ಕುಟುಂಬಸ್ಥರು ಮಹಿಳೆಯನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನಿಗೆ 1.5 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು ಎಂದು ತಿಳಿಸಿದ್ದಾರೆ.
VIDEO : ಮಹಿಳೆಗೆ ಇದೆಂಥಾ ಶಿಕ್ಷೆ : ಮೈದುನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳೆ..!
ಈ ಸಂಬಂಧ ಸಂತ್ರಸ್ತೆಯ ತಂದೆ ಕೈಲಾಶ್ ಯಾದವ್, ಅಣ್ಣ ಅಜಿತ್ ಯಾದವ್, ಮಾವ ಸತ್ಯಪ್ರಕಾಶ್ ಯಾದವ್ ಮತ್ತು ಸೀತಾರಾಮ್ ಯಾದವ್ ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಪೆಟ್ರೋಲ್ ಕಂಟೈನರ್ ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸುಪಾರಿ ಕಿಲ್ಲರ್ ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 4 ರಂದು ಧಂಗಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಗಿನಾ ಗ್ರಾಮದಲ್ಲಿ ಯುವತಿಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿ, ಕ್ಷೇತ್ರ ಘಟಕ ಮತ್ತು ಶ್ವಾನ ದಳದ ಸಹಾಯದಿಂದ ಶವವನ್ನು ಗೋರಖ್ಪುರದ ಬೆಲ್ಘಾಟ್ ಪ್ರದೇಶದ ರಂಜನಾ ಯಾದವ್ ಎಂದು ಗುರುತಿಸಲಾಗಿದೆ.
ತನ್ನ ಅಕ್ರಮ ಸಂಬಂಧ ತಿಳಿದ ಪತ್ನಿ ಕೊಲೆಗೆ ಸುಪಾರಿ ಕೊಟ್ಟ ನೀಚ..!
ಸಂತ್ರಸ್ತೆಯ ತಂದೆಯು ಪೊಲೀಸರೊಂದಿಗೆ ನೀಡಿರುವ ಮಾಹಿತಿ ಪ್ರಕಾರ, ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಅವಳು ತನ್ನ ಪ್ರೇಮಿಯನ್ನು ಬಿಡಲು ಸಿದ್ಧವಿಲ್ಲದಿದ್ದಾಗ, ಆತ ತನ್ನ ಮಗ ಮತ್ತು ಅಳಿಯನೊಂದಿಗೆ ಸೇರಿ ಮಾಹುಲಿಯಿಂದ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿರುವುದಾಗಿ ತಿಳಿಸಿದ್ದಾನೆ. ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬರು ಫೆಬ್ರುವರಿ 3 ರಂದು ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಮೋಟಾರ್ ಸೈಕಲ್ನಲ್ಲಿ ಯುವತಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಇತರ ಆರೋಪಿಗಳು ಅವರೊಂದಿಗೆ ಸೇರಿಕೊಂಡು ಮಹಿಳೆಯ ಕೈ ಮತ್ತು ಬಾಯಿಯನ್ನು ಕಟ್ಟಿದ್ದಾರೆ. ನಂತರ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.