ಮುಂಬೈ ;ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಚಿತ್ರ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಇರ್ಫಾನ್ ನಿನ್ನೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಮುಂಬೈನ ಧೀರುಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಅವರ ಪುತ್ರ ಬಾಬಿಲ್ ಹಾಗೂ ಆಯಾನ್ ಖಾನ್ ಮತ್ತು ಪತ್ನಿ ಸುತಾಪಾ ಸಿಕ್ದರ್ ಜೊತೆಗಿದ್ದರು.
ಕಳೆದ ವಾರವಷ್ಟೇ ಅವರ ತಾಯಿ ನಿಧನರಾಗಿದ್ರು. ಲಾಕ್ ಡೌನ್ ನಿಂದಾಗಿ ತಮ್ಮ ತಾಯಿಯ ಅಂತ್ಯಕ್ರಿಯೆಗೆ ಹೋಗಲಾಗದೇ ವಿಡಿಯೋ ಕಾಲ್ ಮೂಲಕ ಇರ್ಫಾನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
53 ವರ್ಷದ ಇರ್ಫಾನ್ ಖಾನ್, 2018ರಲ್ಲಿ ಲಂಡನ್ ನಲ್ಲಿ ಟ್ಯೂಮರ್ ಗೆ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗಷ್ಟೇ, ಅವರ ಅಂಗ್ರೆಜಿ ಮೀಡಿಯಂ ಸಿನಿಮಾ ಬಿಡುಗಡೆಯಾಗಿತ್ತು.