ವಯೋಸಹಜ ಕಾಯಿಲೆಯಿಂದಾಗಿ ಕಾಲಿವುಡ್ ನ (Kollywood) ಖ್ಯಾತ ನಟ ಡೆಲ್ಲಿ ಗಣೇಶ್ (Delhi Ganesh) ನಿಧನರಾಗಿದ್ದಾರೆ.
ಡೆಲ್ಲಿ ಗಣೇಶ್ ಅವರಿಗೆ 80 ವರ್ಷ ವಯಸ್ಸಾಗಿದ್ದವು. ಹೀಗಾಗಿ ಅವರ ವಯೋಸಹಜ ಕಾಯಿಲೆಯಿಂದ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ತಮಿಳು ನಟ ಗಣೇಶ್ ಅವರ ಸಾವನ್ನು ಪುತ್ರ ಮಹದೇವನ್ ಅಧಿಕೃತವಾಗಿ ಈ ಮಾಹಿತಿ ನೀಡಿದ್ದಾರೆ. ಗಣೇಶ್ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್ 2 ದೆಹಲಿ ಗಣೇಶ್ ಅವರ ಕೊನೆಯ ಚಿತ್ರವಾಗಿತ್ತು.
1976 ರಲ್ಲಿ ಬಾಲಚಂದರ್ ಅವರ ‘ಪತ್ತಿನ ಪ್ರವೇಶಂ’ ಚಿತ್ರದ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದ ಅವರು, ಆನಂತರ ಬರೋಬ್ಬರಿ 40 ವರ್ಷಗಳಲ್ಲಿ 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.