Dinesh Karthik | ಮುರಳಿ ವಿಜಯ್ ಮುಂದೆ ಡಿಕೆ.. ಡಿಕೆ.. ಎಂದ ಅಭಿಮಾನಿಗಳು
ಟೀಂ ಇಂಡಿಯಾ ಕ್ರಿಕೆಟರ್ ಮುರಳಿ ವಿಜಯ್ ಗೆ ಕೆಟ್ಟ ಅನುಭವ ಎದುರಾಗಿದೆ.
ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರಿಮಿಯರ್ ಲೀಗ್ ನಲ್ಲಿ ರೂಬಿ ಟ್ರಿಕ್ಕಿ ವಾರಿಯರ್ಸ್ ಪರ ಆಡುತ್ತಿರುವ ವಿಜಯ್ ಅವರನ್ನ ಮ್ಯಾಚ್ ನಡೆಯುತ್ತಿರುವ ವೇಳೆ ಅಭಿಮಾನಿಗಳು ಕಾಲೆಳೆದಿದ್ದಾರೆ.
ವಿಜಯ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಡಿಕೆ.. ಡಿಕೆ.. ಎಂದು ಅಭಿಮಾನಿಗಳು ಕೂಗಿದ್ದಾರೆ.
ಇದರಿಂದ ವಿಜಯ್ ಅಭಿಮಾನಿಗಳಿಗೆ ನಮಸ್ಕಾರ ಹಾಕುತ್ತಾ ಕೂಗಬೇಡಿ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಿನೇಶ್ ಕಾರ್ತಿಕ್ ಮೊದಲ ಪತ್ನಿ ನಿಖಿತ ವಂಜರಾ ಅವರನ್ನು ಮುರಳಿ ವಿಜಯ್ ಅನೈತಿಕವಾಗಿ ಮದುವೆ ಮಾಡಿಕೊಂಡಿದ್ದು ಗೊತ್ತೇ ಇದೆ.
ಆ ನಂತರ ದಿನೇಶ್ ಕಾರ್ತಿಕ್ ಪ್ರಮುಖ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಎರಡವೇ ವಿವಾಹ ಮಾಡಿಕೊಂಡರು.
ಪ್ರಸ್ತುತ ಡಿಕೆ ಕೆರಿಯರ್ ಅದ್ಭುತವಾಗಿದ್ದು, ಟೀಂ ಇಂಡಿಯಾಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ವಿಜಯ್ ಸರಿಯಾದ ಅವಕಾಶಗಳು ಸಿಗದೇ ಗಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ.







