VIRAT KOHLI | ದೇವ್ರೇ ಇದೇನಿದು..?

1 min read
fans-troll-kohli-looks-heaven-disbelief-after-getting-out saaksha tv

fans-troll-kohli-looks-heaven-disbelief-after-getting-out saaksha tv

VIRAT KOHLI | ದೇವ್ರೇ ಇದೇನಿದು..?

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 20 ರನ್ ಗಳಿಸಿ ಔಟ್ ಆದರು.

ಒಂದು ಅರ್ಧಶತಕ ಹೊರತು ಪಡಿಸಿ ಈ ಸೀಸನ್ ನಲ್ಲಿ ವಿರಾಟ್ ಘನಘೋರವಾಗಿ ವಿಫಲರಾಗುತ್ತಿದ್ದಾರೆ.

ಅದರಂತೆ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಮರುಕಳಿಸಿದೆ. ಕೊಹ್ಲಿ ರಬಾಡ ಬೌಲಿಂಗ್ ನಲ್ಲಿ ರಾಹುಲ್ ಚಹಾರ್ ಗೆ ಸರಳ ಕ್ಯಾಚ್ ನೀಡಿ ಔಟ್ ಆದರು.

ಈ ವೇಳೆ ಪೆವಿಲಿಯನ್ ಗೆ ತೆರಳುತ್ತಿದ್ದ ಕೊಹ್ಲಿ ಆಕಾಶದತ್ತ ನೋಡುತ್ತಾ ‘ದೇವರೇ ಇದೇನು ಎಂಬಂತೆ ಏನೋ ಹೇಳಿಕೊಂಡು ಪೆವಿಲಿಯನ್ ನತ್ತ ಹೊರಟರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ.

fans-troll-kohli-looks-heaven-disbelief-after-getting-out saaksha tv
fans-troll-kohli-looks-heaven-disbelief-after-getting-out saaksha tv

ಇದು ನಿನಗೆ ಅಭ್ಯಾಸ ಅಲ್ಲವೇ.. ಯಾರನ್ನೋ ಶಪಿಸಿ ಏನು ಪ್ರಯೋಜನ.. ಸೀಸನ್ ಪೂರ್ತಿ ಹೀಗೇ ಆಡ್ತಾ ಇರಿ.. ತಂಡದಲ್ಲಿ ನಿಮ್ಮ ಸ್ಥಾನ ಹೋಗೋದು ಗ್ಯಾರಂಟಿ..

ಪ್ರತಿ ಬಾರಿಯೂ ಆಕಾಶ ನೋಡದೆ ಬ್ಯಾಟಿಂಗ್ ಕಡೆ ಗಮನ ಕೊಟ್ಟರೆ ಒಳ್ಳೆಯದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ರನ್ ಗಳಿಗೆ ಕೇರಾಫ್ ಅಡ್ರೆಸ್ ಆಗಿದ್ದ ಕೊಹ್ಲಿ ಈಗ ಒಂದೊಂದು ರನ್ ಗಾಗಿ ಪರದಾಡುತ್ತಿದ್ದಾರೆ.  ಕೊಹ್ಲಿ 2016ರ ಐಪಿಎಲ್‌ ನಲ್ಲಿ  936 ರನ್ ಗಳಿಸಿದ್ದರು.

ಆದ್ರೆ ಈಗ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸುತ್ತಲೇ ಇಲ್ಲ. ಟೀಂ ಇಂಡಿಯಾದ ನಾಯಕರಾಗಿ, ಆರ್ ಸಿಬಿ ಕ್ಯಾಪ್ಟನ್ ಆಗಿ ವಿರಾಟ್ ಅಬ್ಬರಿಸಿದ್ದರು.

ಆದ್ರೆ ಈಗ ಕ್ಯಾಪ್ಟನ್ಸಿಯಿಂದ ಕೆಳಗಿಳಿದ್ರೂ ವಿರಾಟ್ ಅಬ್ಬರಿಸುತ್ತಿಲ್ಲ. ಸಾಮಾನ್ಯವಾಗಿ ಎಲ್ಲಾ ಆಟಗಾರರು ನಾಯಕತ್ವದ ಒತ್ತಡದಿಂದ ಕೆಳಗಿಳಿದ ಬಳಿಕ ಮೊದಲಿಗಿಂತಲೂ ಪರಿಣಾಮಕಾರಿ ಬ್ಯಾಟ್ ಬೀಸುತ್ತಾರೆ. ಆದ್ರೆ ವಿರಾಟ್ ವಿಚಾರದಲ್ಲಿ ಅದು ರಿವರ್ಸ್ ಆಗುತ್ತಿದೆ.fans-troll-kohli-looks-heaven-disbelief-after-getting-out

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd