ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೆಲೆಬ್ರಿಟಿ ಎಮ್ ಎಸ್ ಧೋನಿ ಯಾಕೆ ರೈತನಾಗಿದ್ದು…!

admin by admin
January 9, 2021
in Newsbeat, Sports, ಕ್ರೀಡೆ
mahendra singh dhoni saakshatv
Share on FacebookShare on TwitterShare on WhatsappShare on Telegram

ಸೆಲೆಬ್ರಿಟಿ ಎಮ್ ಎಸ್ ಧೋನಿ ಯಾಕೆ ರೈತನಾಗಿದ್ದು…!

mahendra singh dhoni saakshatvಆ ಬ್ರಹ್ಮ ಬರೆದ ಹಣೆಬರೆಹವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಹಣೆ ಬರೆಹದಲ್ಲಿ ಏನು ಬರೆದಿದೆಯೋ ಅದೇ ಆಗೋದು. ಆದ್ರೆ ನಂಬಿಕೆ ಮುಖ್ಯ. ಅದೃಷ್ಟ ಚೆನ್ನಾಗಿದ್ರೆ ಎಲ್ಲವೂ ಚೆನ್ನಾಗಿರುತ್ತೆ.. ಹಾಗಂತ ನಂಬಿ ಬದುಕುತ್ತಿರುವವರು ಮಹೇಂದ್ರ ಸಿಂಗ್ ಧೋನಿ.

Related posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

August 8, 2026
ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

August 8, 2026

ಹಾಗೇ ನೋಡಿದ್ರೆ, ಧೋನಿಯ ಬದುಕಿನಲ್ಲಿ ನಡೆದಿರುವುದು ಎಲ್ಲವೂ ಆಕಸ್ಮಿಕ. ತಾನು ಅಂದುಕೊಂಡಿದ್ದು ಏನೋ ಆಗಿದ್ದೂ ಇನ್ನೇನೋ.. ಅದೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ ಅಂಥರಲ್ಲ ಹಾಗೇ.. ಯಾಕಂದ್ರೆ ಧೋನಿಯ ಬದುಕಿನಲ್ಲಿ ನಡೆದಿರುವ ಘಟನೆಗಳೇ ಇದಕ್ಕೆಲ್ಲಾ ನಿದರ್ಶನ.
ಫುಟ್ ಬಾಲ್ ಗೋಲ್ ಕೀಪರ್ ಆಗಿದ್ದ ಧೋನಿ ಆಗಿದ್ದು ವಿಕೆಟ್ ಕೀಪರ್. ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಆಗಿದ್ದು ವಿಶ್ವದ ಶ್ರೇಷ್ಠ ಕ್ರಿಕೆಟರ್. ಟೀಮ್ ಇಂಡಿಯಾಗೆ ಆಡಬೇಕು ಅಂತ ಆಸೆ ಇದ್ರೂ ಆಡುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ಒಬ್ಬ ಸಾಮಾನ್ಯ ಹೊಡಿಬಡಿ ಆಟಗಾರ ಕಮ್ ವಿಕೆಟ್ ಕೀಪರ್ ಆಗಿ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದ ಧೋನಿ ನಂತರ ನಡೆದಿರುವುದೆಲ್ಲಾ ಇತಿಹಾಸ.. ಎರಡು ವಿಶ್ವಕಪ್ ಕಿರೀಟ.. ನಂಬರ್ ವನ್ ಟೆಸ್ಟ್ ತಂಡದ ನಾಯಕ, ಅದ್ಭುತ ನಾಯಕ, ಅಪ್ರತಿಮ ವಿಕೆಟ್ ಕೀಪರ್, ಗೇಮ್ ಚೇಂಜರ್.. ಕ್ರಿಕೆಟ್ ಗ್ಲ್ಯಾಂಬ್ಲರ್ ಹೀಗೆ ಧೋನಿ ನಡೆದು ಬಂದ ಹಾದಿ ಈಗ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅಧ್ಯಾಯಗಳಾಗಿ ರೂಪುಗೊಂಡಿವೆ.
mahendra singh dhoni saakshatvಮುಖ್ಯವಾಗಿ ಧೋನಿಯಲ್ಲಿ ಸ್ವಂತಿಕೆ ಇತ್ತು. ನಂಬಿಕೆ ಇತ್ತು. ಬದ್ಧತೆ ಇತ್ತು. ಅದಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆ ಮತ್ತು ದೂರದೃಷ್ಟಿ ಇತ್ತು. ಭೂತಕಾಲ, ವರ್ತಮಾನ ಮತ್ತು ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಧೋನಿಗೆ ಚೆನ್ನಾಗಿ ಅರಿವಿತ್ತು. ಹಾಗಾಗಿ ಎಮ್ ಎಸ್ ಡಿ ಅಥವಾ ಧೋನಿ ಅನ್ನೋ ಹೆಸರು ಬ್ರಾಂಡ್ ಆಗುತ್ತಿದೆ.
ನಿಜ, ಧೋನಿ ಅನ್ನೋದು ಬ್ರ್ಯಾಂಡ್ ಎಂಬುದು ಧೋನಿಗೆ ಗೊತ್ತಿಲ್ಲದ ವಿಚಾರವೇನು ಅಲ್ಲ. ಕ್ರಿಕೆಟಿಗನಾಗಿ, ಸೈನಿಕನಾಗಿ ಧೋನಿ ಸಾಕಷ್ಟು ಹೆಸರು ಮಾಡಿದ್ದರು. ಆದ್ರೆ ಇವೆಲ್ಲಾ ಎಷ್ಟು ದಿನ..? ತಾನು ಮೈದಾನದಲ್ಲಿ ಇರುವಷ್ಟು ದಿನ ಧೋನಿ ಅನ್ನೋ ಹೆಸರು ಪ್ರಜ್ವಲಿಸುತ್ತಿರುತ್ತೆ. ಆಮೇಲೆ ಧೋನಿ ಒಬ್ಬ ಮಾಮೂಲಿ ಸೆಲೆಬ್ರಿಟಿಯಷ್ಟೇ.. ಹೆಚ್ಚು ಅಂದ್ರೆ ವೀಕ್ಷಕ ವಿವರಣೆಕಾರ ಅಥವಾ ಕೋಚ್.. ಅಥವಾ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದು ಉನ್ನತ ಹುದ್ದೆ.. ಹಾಗಂತ ಇದು ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದ್ರೂ ಪಟ್ಟ ಅಧಿಕಾರದಿಂದ ಕೆಳಗಿಳಿಯಬಹುದು ಎಂಬ ವಿಚಾರವೂ ಧೋನಿಗೆ ಗೊತ್ತಿತ್ತು.
mahendra singh dhoni saakshatvಬಹುಶಃ ಇದೇ ಕಾರಣದಿಂದ ಧೋನಿ ಭಿನ್ನವಾಗಿಯೇ ಯೋಚಿಸಿದ್ದಾರೆ. ನೇಮ್, ಫೇಮ್, ಯಶಸ್ಸಿನ ಉತ್ತುಂಗದಲ್ಲಿದ್ದ ಧೋನಿ ತನ್ನ ಕೃಷಿಕನಾಗಿ ಹೊಸ ಬದುಕನ್ನು ರೂಪಿಸಿಕೊಂಡ್ರು. ಅದಕ್ಕೆ ವರದಾನವಾಗಿದ್ದು ಕೋವಿಡ್ ಅನ್ನೋ ಮಹಾ ಮಾರಿ.
2019ರ ವಿಶ್ವಕಪ್ ನಂತರ ಧೋನಿಗೂ ಅನ್ನಿಸಿದ್ದು ತಾನು ಇನ್ನು ಮುಂದೆ ಟೀಮ್ ಇಂಡಿಯಾದಲ್ಲಿ ಆಡಲು ಸಾಧ್ಯವಿಲ್ಲ ಅಂತ. ಹೆಚ್ಚು ಅಂದ್ರೆ ಎರಡು ಮೂರು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಬಹುದು. ಆನಂತರ ಏನು ಮಾಡಬೇಕು ಅಂತ ಯೋಚನೆ ಮಾಡುತ್ತಿರುವಾಗಲೇ ಅವರ ಮುಂದಿದ್ದ ಆಯ್ಕೆ ಕೃಷಿಕ..
ಒಬ್ಬ ಕ್ರಿಕೆಟಿಗನಾಗಿ, ಧೋನಿ ಐಶಾರಾಮಿ ಜೀವನವನ್ನು ಸಾಗಿಸುತ್ತಿದ್ದಾರೆ. ರಾಂಚಿಯ ಫಾರ್ಮ್ ಹೌಸ್ ನಲ್ಲಿ ತನ್ನ ಕುಟುಂಬದ ಜೊತೆ ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಹವ್ಯಾಸಕ್ಕೆ ಕಾರು, ಬೈಕ್‍ಗಳಲ್ಲಿ ದೂರದ ಪ್ರಯಾಣ ಮಾಡುತ್ತಾರೆ. ಆದ್ರೆ ತಾನೊಬ್ಬ ಮಾದರಿ ವ್ಯಕ್ತಿಯಾಗಬೇಕು ಅನ್ನೋದು ಧೋನಿಯ ಮಹದಾಸೆಯಾಗಿತ್ತು.
ಕ್ರಿಕೆಟ್ ನಲ್ಲಿ ಬಂದ ಹಣದದಲ್ಲೇ ಧೋನಿ ಎಕರೆಗಟ್ಟಲೇ ಜಮೀನು ಖರೀದಿ ಮಾಡಿದ್ದರು. ಕೋವಿಡ್ ಲಾಕ್ ಡೌನ್ ಟೈಮ್ ನಲ್ಲಿ ಕ್ರಿಕೆಟ್ ಬಿಟ್ಟು ರೈತನಾಗಿ ಕೆಲಸ ಮಾಡಿದ್ದರು. ತನ್ನದೇ ತೋಟವನ್ನು ಬೆಳೆಸಿದ್ರು. ಸಾವಯವ ರಸಗೊಬ್ಬರವನ್ನು ಉತ್ಪನ್ನ ಮಾಡಿದ್ರು. ಸಾವಯವ ಕೃಷಿಯ ಮೂಲಕ ಮಾದರಿ ರೈತನಾಗುತ್ತಿದ್ದಾರೆ.
mahendra singh dhoni saakshatvಇದೀಗ ತನ್ನ ಭೂಮಿಯಲ್ಲಿ ಬೆಳೆದಿದ್ದ ಸ್ಟ್ರಾಬರಿ, ಟೊಮೋಟೊ ಮೊದಲಾದ ಕೃಷಿ ಪದಾರ್ಥಗಳನ್ನು ಮಾರುಕಟ್ಟೆಗೆ ವಿಸ್ತರಿಸಿದ್ದಾರೆ. ಧೋನಿ ಅನ್ನೋ ಬ್ರ್ಯಾಂಡ್ ಮೂಲಕ ತನ್ನ ತೋಟದಲ್ಲಿ ಬೆಳೆದಂತಹ ಪದಾರ್ಥಗಳನ್ನು ಮಾರಾಟ ಮಾಡಿ ಯಶಸ್ವಿ ಹಾಗೂ ಮಾದರಿ ರೈತನಾಗುತ್ತಿದ್ದಾರೆ.
ಅಂದ ಹಾಗೇ ಧೋನಿಯ ಕೃಷಿ ಕೂಡ ವೈಜ್ಞಾನಿಕ ಮಾದರಿಯಲ್ಲಿದೆ. ಅದಕ್ಕಾಗಿ ಬಂಡವಾಳ ಹಾಕಿದ್ದಾರೆ. ತನ್ನದೇ ಆದಂತಹ ತಂಡವನ್ನು ಕಟ್ಟಿಕೊಂಡಿದ್ದಾರೆ. ಆ ಮೂಲಕ ಕೃಷಿಯಲ್ಲೂ ಯಶ ಸಾಧಿಸಬಹುದು ಅನ್ನೋದನ್ನು ತೋರಿಸಿಕೊಡುತ್ತಿದ್ದಾರೆ. ಕೋವಿಡ್, ಲಾಕ್ ಡೌನ್ ಟೈಮ್ ನಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡವರನ್ನು ನೋಡಿದ್ದೇವೆ. ಅದೇ ರೀತಿ ಧೋನಿ ಕೂಡ.

Tags: cabbageDHONIFarmerindiaMahendra Singh DhonimsdRanchiSembo villageteam india
ShareTweetSendShare
Join us on:

Related Posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

by Shwetha
August 8, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಡಶಾಲೆಯಲ್ಲಿ ಬಂಡಾಯದ ಬೇಗುದಿ ಜೋರಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಗಳೂರಿನ ಹಿರಿಯ ಶಾಸಕ...

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

by Shwetha
August 8, 2026
0

ಮುಂಬೈ: ಮೀಸಲಾತಿ ಎನ್ನುವುದು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಇರುವ ವ್ಯವಸ್ಥೆಯೇ ಹೊರತು ಅದು ಶಾಶ್ವತವಲ್ಲ. ಈಗಾಗಲೇ ಮೀಸಲಾತಿ ಲಾಭ ಪಡೆದು ಸಮಾಜದಲ್ಲಿ ಸಬಲರಾಗಿರುವವರು ಸ್ವಯಂಪ್ರೇರಣೆಯಿಂದ ಮೀಸಲಾತಿ ಸೌಲಭ್ಯವನ್ನು...

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

by Shwetha
August 8, 2026
0

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮರುಪರಿಶೀಲನೆ (SIR) ಪ್ರಕ್ರಿಯೆ ವೇಳೆ, ತಮ್ಮ ಮಾಹಿತಿ ಮತ್ತು ದಾಖಲೆಗಳನ್ನು ದೃಢೀಕರಿಸದ ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡುವ...

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

by Shwetha
August 8, 2026
0

ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ...

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

by Shwetha
August 8, 2026
0

ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹಾಗೂ ತೀವ್ರ ವಾಕ್ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram