ಸೊಪ್ಪು ರಸ್ತೆಗೆ ಎಸೆದು ರೈತನ ಆಕ್ರೋಶ Saaksha Tv
ವಿಜಯಪುರ: ಕೊರೊನಾ ನಿಯಂತ್ರಣಕ್ಕೆ ಜಾರಿಯಾಗೊಳಿಸಿರುವ ವಾರಾಂತ್ಯದ ಕರ್ಫ್ಯೂನ ಎರಡನೇ ವಾರದ ಎರಡನೇ ದಿನ ರೈತ ಅಗತ್ಯ ವಸ್ತು ಸೊಪ್ಪನ್ನು ರಸ್ತೆಗೆ ಎಸೆದು ಪ್ರತಿಭಟನೆ ಮಾಡಿದ್ದಾನೆ. ಘಟನೆಯು ಜೆಲ್ಲೆಯ ಅಥಣಿ ರಸ್ತೆಯ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ
ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ಭೀಮನಗೌಡ ಬಿರಾದಾರ್ ಎಂಬ ರೈತ ಸರ್ಕಾರ ಅನುಮತಿ ನೀಡಿದರೂ ನಮಗೆ ಸೊಪ್ಪು ಮಾರಲು ಪೊಲೀಸರು ಕಿರಿಕಿರಿ ನೀಡುತ್ತಾರೆ ಜಮೀನಿನಲ್ಲಿ ಸಾಲ ಸೋಲ ಮಾಡಿ ಬೆಳೆದ ತರಕಾರಿ ಹಾಗೂ ಸೊಪ್ಪನ್ನು ಮಾರಲು ಬಿಡುತ್ತಿಲ್ಲಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ತರಕಾರಿ, ಸೊಪ್ಪು ಮಾರಾಟ ಮಾಡದಿದ್ದರೆ ಹಾಳಾಗುತ್ತದೆ. ಹೀಗಾದರೆ ರೈತರು ಬದುಕುವುದು ಹೇಗೆ ಎಂದು ರೈತ ಭೀಮನಗೌಡ ಪ್ರಶ್ನೆ ಮಾಡಿದ್ದಾರೆ. ಇತರೆ ತರಕಾರಿ ಮಾರಾಟಗಾರರು ಮತ್ತು ಸ್ಥಳೀಯರು ರೈತನಿಗೆ ಬೆಂಬಲ ವ್ಯಕ್ತಪಡಿಸಿದ್ದು ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.