ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ..!
ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ.. ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಇತ್ತೀಚೆಗೆ ಸಿಎಂ ಬೊಮ್ಮಾಯಿ ಅವರು ಸಸರ್ಕಾರಿ ಕಾರ್ಯಕ್ರಮಗಳಿಗೆ ಪೇಟ , ಶಾಲು , ಹಾರ , ಹೂಗುಚ್ಚ ಇತ್ಯಾದಿಗಳನ್ನ ತರದಂತೆ ಸೂಚಿಸಿದ ಬಳಿಕ ಮೌಖಿಕವಾಗಿ ಈ ಸಂಬಂಧ ಆದೇಶ ಹೊರಡಿಸಲಾಗಿತ್ತು,.. ಆದ್ರೆ ಈ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಹೂವು ಹರಾಜು ಕೇಂದ್ರದ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೂಗುಚ್ಛ, ಹಣ್ಣಿನ ಬುಟ್ಟಿ, ನೆನಪಿನ ಕಾಣಿಕೆ ಸೇರಿದಂತೆ ಹಲವು ಉಡುಗೊರೆ ಹಿಂದೆ ಸಾಕಷ್ಟು ಜನರ ಬದುಕು ಇದೆ. ಹೂವಿನ ವ್ಯಾಪಾರಿಗಳು, ಕರಕುಶಲಕರ್ಮಿಗಳ ಜೀವನವಿದೆ. ಸರ್ಕಾರ ಏಕಾಏಕಿ ಹಾರ, ತುರಾಯಿ ಬ್ಯಾನ್ ಮಾಡಿದ್ರೆ ಕಷ್ಟ. ಹೀಗಾಗಿ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಆಗಸ್ಟ್ 10ಕ್ಕೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬಾಗಿಯಾಗಿದ್ದ ಸಿಎಂ ಬೊಮ್ಮಾಯಿ ಅವರು ಹೂಗುಚ್ಚ ಸ್ವೀಕರಿಸಲು ನಿರಾಕರಿಸಿದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಮುಖ್ಯಮಂತ್ರಿ ತಿಳಿಸುತ್ತಿದ್ದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶವನ್ನು ಜಾರಿಗೊಳಿಸಿದ್ದರು. ಆದ್ರೆ ಸರ್ಕಾರದ ನಡೆ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.. ಅಲ್ಲದೇ ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.
ಸರ್ಕಾರದ ವಿರುದ್ಧ ಏಕಾಂಗಿ ಹೋರಾಟಕ್ಕಿಳಿದ ಎಂ.ಪಿ ಕುಮಾರಸ್ವಾಮಿ..!
ಶಾಲಾ-ಕಾಲೇಜು ಆರಂಭ ವಿಚಾರ : ಸಿಎಂ ಪ್ರತಿಕ್ರಿಯೆ
74ನೇ ವಸಂತಕ್ಕೆ ಕಾಲಿಟ್ಟ ಸಿದ್ದರಾಮಯ್ಯ : ಕೈ ನಾಯಕರ ಶುಭಾಶಯ
ಟ್ವಿಟ್ಟರ್ ನಲ್ಲಿ `ರಾಜ’ಹುಲಿ ದಾಖಲೆ : ರಾಜ್ಯದ ಮೊದಲ ರಾಜಕಾರಣಿ