ರೈಲು ಹತ್ತುವ ವೇಳೆ ಆಯತಪ್ಪಿ ತಂದೆ ಹಾಗೂ ಮಗಳು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ನಲ್ಲಿ ನಡೆದಿದೆ.
ಭೀಮರಾವ್ ಹಾಗೂ 5 ವರ್ಷದ ಮಗಳು ಮೋನಿಕಾ ಸಾವನ್ನಪ್ಪಿರುವ ದುರ್ದೈವಿಗಳು. ಭೀಮಾರಾವ್ ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಪಾಲಿ ಜಿಲ್ಲೆಯ ಫಲ್ನಾಗೆ ತೆರಳುವುದಕ್ಕಾಗಿ ಹೋಗಿದ್ದರು. ಆದರೆ, ಸಬರಮತಿ-ಜೋಧ್ ಪುರ ಪ್ಯಾಸೆಂಜರ್ ರಶ್ ಆಗಿದ್ದ ಹಿನ್ನೆಲೆಯಲ್ಲಿ ರೈಲು ಹತ್ತುವ ವೇಳೆ ಮಗಳು ಮೋನಿಕಾ ಜೊತೆಗೆ ಕಳೆಗೆ ಬಿದ್ದಿದ್ದಾರೆ.
ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿತ್ತಲಾದರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.








