ಮಂಗಳೂರು: ಉಡುಪಿ ಶ್ರೀಗಳಿಗೆ ಪಿತೃ ವಿಯೋಗವಾಗಿದೆ.
ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishawa Prasanna Theertha Swamij) ಅವರ ತಂದೆ ವಿಧಿವಶರಾಗಿದ್ದಾರೆ.
ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣಭಟ್ಟ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಹತ್ತಿರದ ಪಕ್ಷಿಕೆರೆಯಲ್ಲಿ ನಿಧನರಾಗಿದ್ದಾರೆ.
ಇವರಿಗೆ 103 ವರ್ಷ ವಯಸ್ಸಾಗಿತ್ತು. ಇವರ ತಂದೆಯವರು ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃಗಳಾಗಿದ್ದರು. ಇವರಿಗೆ ಐವರು ಪುತ್ರರು, ಆರು ಪುತ್ರಿಯರು ಇದ್ದರು. ಸದ್ಯ ಮಕ್ಕಳೊಂದಿಗೆ ಅಪಾರ ಬಂಧು ಬಳಗ ಅಗಲಿದ್ದಾರೆ.








