ಭೋಪಾಲ್: ಲುಡೋ ಆಡುವಾಗ ತಂದೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ 24 ವರ್ಷದ ಯುವತಿ ಕೋರ್ಟ್ ಮೆಟ್ಟಲೇರಿಯುವ ಘಟನೆ ಮಧ್ಯಪ್ರದೇಶ ಭೋಪಾಲ್ ನಲ್ಲಿ ನಡೆದಿದೆ.
ಲುಡೋ ಆಟದಲ್ಲಿ ತನ್ನನ್ನು ಮೋಸ ಮಾಡಿ ಸೋಲಿಸಿದ್ದಕ್ಕೆ ತಂದೆ ಮೇಲಿದ್ದ ಗೌರವವನ್ನೇ ಈ ಯುವತಿ ಕಳೆದುಕೊಂಡಿದ್ದು, ದ್ವೇಷ ಸಾಧಿಸಲು ಆರಂಭಿಸಿದ್ದಾಳೆ.
ಆಟದ ಬಳಿಕ ಮಗಳು ತಂದೆ ಎಂದು ಸಂಬೋಧಿಸುವುದನ್ನೇ ಬಿಟ್ಟಿದ್ದಾಳೆ.
ಈ ಕುರಿತು ಭೂಪಾಲ್ ಕೌಟುಂಬಿಕ ನ್ಯಾಯಾಲಯದ ಕೌನ್ಸಿಲರ್ ಸರಿತಾ ಅವರು ಮಾಹಿತಿ ನೀಡಿದ್ದು, 24 ವರ್ಷದ ಮಹಿಳೆಯ ಕಳೆದ ಕೆಲವು ದಿನಗಳ ಹಿಂದೆ ನನ್ನನ್ನು ಸಂಪರ್ಕಿಸಿದ್ದು, ಕುಟುಂಬಸ್ಥರು ಹಾಗೂ ತಂದೆಯೊಂದಿಗೆ ಲುಡೊ ಆಡುವಾಗ ತಂದೆ ನನ್ನ ಒಂದು ಕಾಯಿಯನ್ನು ಹೊಡೆದ.
ನನ್ನ ಜೀವನದಲ್ಲಿ ಎಲ್ಲ ರೀತಿಯ ಸಂತಸವನ್ನು ನೀಡಿದ್ದ ತಂದೆಯೇ ಈ ರೀತಿ ಮಾಡುತ್ತಾನೆ ಎಂದು ನಾನು ಊಹಿಸಿರಲಿಲ್ಲ.
ನಾಳೆ ಎಂದಿನಂತೆ ಬಸ್ ಸಂಚಾರ ; ಡಿಸಿಎಂ ಲಕ್ಷ್ಮಣ್ ಸವದಿ
ಘಟನೆ ಬಳಿಕ ತನ್ನ ಮತ್ತು ಅವಳ ತಂದೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವಳು ನಂಬಲು ಪ್ರಾರಂಭಿಸಿದಳು ಎಂದು ಮಾಹಿತಿ ನೀಡಿದ್ದಾರೆ.
ತನ್ನನ್ನು ಸೋಲಿಸಲು ಬಂದ ನಂತರ ನನ್ನ ತಂದೆಯ ಮೇಲಿನ ಗೌರವವನ್ನು ಕಳೆದುಕೊಂಡೆ.
ನನ್ನ ಸಂತೋಷಕ್ಕಾಗಿ ತಂದೆ ಆಟದಲ್ಲಿ ಸೋಲಬೇಕಿತ್ತು ಎಂದು ಅವಳು ಭಾವಿಸಿದ್ದಾಳೆ.
ನಾವು ಅವಳೊಂದಿಗೆ ನಾಲ್ಕು ಬಾರಿ ಕೌನ್ಸಿಲಿಂಗ್ ಸೆಷನ್ ಗಳನ್ನು ಮಾಡಿದ್ದೇವೆ. ಇತ್ತೀಚೆಗೆ ಅವಳಲ್ಲಿ ಧನಾತ್ಮಕ ಭಾವನೆ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.