ಮದುವೆಗೆ ಅರ್ಜೆಂಟ್ ಮಾಡಿದ ಪುತ್ರ ತಂದೆಯಿಂದಲೇ ಕೊಲೆಯಾದ…
ಚೆನ್ನೈ : ಮಗನೊಬ್ಬ ಮದುವೆಗಾಗಿ ಅವಸರ ಮಾಡಿದ್ದ ಕಾರಣಕ್ಕೆ ತಂದೆ ಮಗನ ನಡುವೆ ನಡೆದ ಗಲಾಟೆಯೂ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.. ಇಂತಹದೊಂದು ಘಟನೆ ನಡೆದಿರುವುದು ತಮಿಳುನಾಡಿನಲ್ಲಿ..
30 ವರ್ಷದ ಶಿವಮಣಿ ಎಂಬಾತನೇ ತಂದೆಯಿಂದಲೇ ಕೊಲೆಯಾದ ಯುವಕನಾಗಿದ್ದಾನೆ. ಪಾನಮತ್ತರಾಗಿದ್ದ ತಂದೆ-ಮಗನ ನಡುವೆ ಮದುವೆ ವಿಚಾರವಾಗಿ ವಾಗ್ವಾದ ನಡೆದಿದೆ. ಇದೇ ತಾರಕಕ್ಕೇರಿದ್ದು ಮಗನನ್ನ ತಂದೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ..
ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಆದ್ರೆ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಮನೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ಶಿವಮಣಿ ಮನೆಯವರ ಜೊತೆಗೆ ಸದಾ ಕಿತ್ತಾಡಿಕೊಳ್ಳುತ್ತಿದ್ದ ಎನ್ನಲಾಗಿದೆ..
ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದ ಗಲಾಟೆ ಅತಿರೇಕಕ್ಕೆ ಹೋದಾಗ ತಂದೆಯೇ ತನ್ನ ಮಗನಿಗೆ ಚಾಕುವಿನಿಂದ ಇರಿದಿದ್ದು , ಶಿವಮಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಂದೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಮೃತನ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ವಿಚಾರಣೆ ಮುಂದುವರೆಸಿದ್ಧಾರೆ..