ಮಗಳ ಅಪಹರಣ , ಅತ್ಯಾಚಾರ – ತಂದೆಗೆ ಸಾಯುವ ವರೆಗೂ ಜೀವಾವಧಿ ಶಿಕ್ಷೆ..!
ಉತ್ತರಪ್ರದೇಶ : ಬಾಲಕಿಯೊಬ್ಬಳನ್ನ ಅಪಹರಿಸಿ ಆಕೆಯ ಮೇಲೆ ಅತ್ಯಾಚಾರೆವೆಸಗಿದ್ದ ಮಲತಂದೆಗೆ ನ್ಯಾಯಾಲಯವು ಜೀವ ಇರುವವರೆಗೂ ಜೈಲಿನಲ್ಲೇ ಕೊಳೆಯುವಂತೆ ಶಿಕ್ಷೆ ನೀಡಿದೆ. 8 ವರ್ಷಗಳ ಹಿಂದೆ ಬಾಲಕಿಯು ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ತಂದೆ ಆಕೆಯ ಪಾಲಕನಾಗಿದ್ದು, ಇಂತಹ ನೀಚ ಕೃತ್ಯವೆಸಗಿರೋದಕ್ಕೆ ಆತನಿಗೆ ಯಾವುದೇ ಕ್ಷಮೆಯಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ. ಈ ಘಟನೆಯು ಉತ್ತರಪ್ರದೇಶದ ಮಥುರಾದಲ್ಲಿ ನಡೆದಿತ್ತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಅಮರ್ ಸಿಂಗ್ ಅವರು ತೀರ್ಪು ನೀಡಿದ್ದು ಆರೋಪಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಒಂದು ವೇಳೆ ಆತ ದಂಡ ಕಟ್ಟಲು ವಿಫಲನಾದ್ರೆ ಸರ್ಕಾರದಿಂದ ಪರಿಹಾರದ ಹಣ ಕೊಡಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ವಿವರಗಳನ್ನು ಹಂಚಿಕೊಂಡ ಜಿಲ್ಲಾ ಸರ್ಕಾರಿ ಕೌನ್ಸಿಲ್ ಚತುರ್ವೇದಿ ಫೆಬ್ರವರಿ 2, 2013 ರಂದು ಸಂತ್ರಸ್ತೆಯ ತಾಯಿ ಸಂಬಂಧಿಕರ ಮನೆಗೆ ಹೋದ ವೇಳೆ 15 ವರ್ಷದ ಬಾಲಕಿಯನ್ನು ( ಮಲ ಮಗಳು) ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬ್ಲೂ ಫಿಲ್ಮಂ ದಂಧೆ : ರಾಜ್ ಕುಂದ್ರಾಗೆ ಎದುರಾಯ್ತು ಮತ್ತೊಂದು ಸಂಕಷ್ಟ..! ಇತ್ತ ಪತ್ನಿ ಶಿಲ್ಪಾ ಶೆಟ್ಟಿಗೂ ಬಂಧನದ ಭೀತಿ..!
ಸಂತ್ರಸ್ತೆಯ ತಾಯಿ ಹಿಂದಿರುಗಿದಾಗ ವಿಷಯ ತಿಳಿದು ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅಲ್ಲದೇ ಬೈಕ್ , ಚಿನ್ನಾಭರಣಗಳು ಮತ್ತು 1.05 ಲಕ್ಷ ರೂಪಾಯಿ ಹಣ ಕದ್ದು ಪರಾರಿಯಾಗಿರೋದಾಗಿ ದೂರಿನಲ್ಲಿ ಉಲ್ಲೇಳಿಸಿದ್ದರು ಎಂದು ತಿಳಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 363 (ಅಪಹರಣ), 366 (ಅಪಹರಣ, ಅಪಹರಣ ಅಥವಾ ಮಹಿಳೆಯನ್ನು ಮದುವೆಗೆ ಒತ್ತಾಯಿಸಲು ಪ್ರೇರೇಪಿಸುವುದು) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.








