ಹಣಕ್ಕಾಗಿ 1 ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿದ ತಂದೆ!
ಹೈದರಾಬಾದ್ : ತಂದೆಯೋರ್ವ ಕೇವಲ 70 ಸಾವಿರಕ್ಕಾಗಿ 1 ತಿಂಗಳ ಹೆಣ್ಣುಮಗುವನ್ನ ಮಾರಾಟ ಮಾಡಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.
ಈ ಮಗುವಿನ ತಂದೆತಾಯಿ ಪುಟ್ ಪಾತ್ ನಲ್ಲಿ ವಾಸಿಸುತ್ತಿದ್ದರು. ಇದನ್ನ ಗಮನಿಸಿದ್ದ ದಂಪತಿಯೊಂದು ಮಗುವನ್ನ ತಮಗೆ ನೀಡುವಂತೆ ಕೇಳಿದ್ದಾರೆ.
ಇದಕ್ಕೆ ಒಪ್ಪಿದ ತಂದೆ, ತಾಯಿಗೆ ತಿಳಿಯದಂತೆ ಮಗುವನ್ನು 70ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಇದೀಗ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ ಬಳಿಕ , ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಮಗುವನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









