ರಾಂಚಿ: ಇದೇ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ಗೆ ಭಾರತದ ಮಹಿಳಾ ರೇಸ್ ವಾಕರ್ ಭಾವನ ಜತ್ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಇಂದು ರಾಂಚಿಯಲ್ಲಿ ಮುಕ್ತಾಯವಾದ 7ನೇ ನ್ಯಾಷನಲ್ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ ಭಾವನಾ ಜತ್ ಅವರು ಒಂದು ಗಂಟೆ 29 ನಿಮಿಷ ಹಾಗೂ 54 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಒಲಿಂಪಿಕ್ಸ್ ಟಿಕೆಟ್ ಸಂಪಾದಿಸಿದ್ದಾರೆ. ಇಂದು ರೇಸ್ ವಾಕ್ ಚಾಂಪಿಯನ್‌ಶಿಪ್ ಮುಕ್ತಾಯವಾಗಿದ್ದು, ಪುರುಷ ವಿಭಾಗಗಳಲ್ಲಿ ಸಂದೀಪ್ ಕುಮಾರ್, ಮಹಿಳಾ ವಿಭಾಗದಲ್ಲಿ ಭಾವನಾ ಜತ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇನ್ನು 20 ಕಿ.ಮೀ ಮುಕ್ತಾಯಗೊಳಿಸಲು ಭಾವನಾ ಅವರು ಒಂದು ಗಂಟೆ 29 ನಿಮಿಷ ಹಾಗೂ 54 ಸೆಕೆಂಡ್‌ಗಳನ್ನು ತೆಗೆದುಕೊಂಡರು. ಆ ಮೂಲಕ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಪ್ರಿಯಾಂಕ ಗೋಸ್ವಾಮಿ ಅವರು ಒಂದು ಗಂಟೆ 31 ನಿಮಿಷ ಹಾಗೂ 36 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.
ನಾಲಿಗೆ ಮೇಲೆ ಹಿಡಿತವಿರಲಿ ನಮ್ಮ ತಂದೆಯ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ,ನಾನು ಬಾಯಿ ಬಿಟ್ಟರೆ ನೀವ್ ಮತ್ತೊಮ್ಮೆ ಹಾರ್ಟ್ ಸರ್ಜರಿ ಮಾಡ್ಕೋಬೇಕಾಗುತ್ತೆ: ಎಚ್ಡಿಕೆಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
ರಾಜ್ಯ ರಾಜಕಾರಣದ ಸ್ಟಿಂಗ್ ಆಪರೇಷನ್ ಕಿಚ್ಚು ಈಗ ಅತ್ಯಂತ ವೈಯಕ್ತಿಕ ಮಟ್ಟದ ವಾಕ್ಸಮರಕ್ಕೆ ತಿರುಗಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ನಾಲಾಯಕ್ ಹೇಳಿಕೆಗೆ...








