ಎಫ್ ಐಎಚ್ ಜೂನಿಯರ್ ವಿಶ್ವಕಪ್ ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಭಾರತಕ್ಕೆ ಸೋಲು
ಭುವನೇಶ್ವರ್: ಎಫ್ ಐಎಚ್ ಜೂನಿಯರ್ ವಿಶ್ವಕಪ್ ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಭಾರತ 4-5 ರಿಂದ ಫ್ರಾನ್ಸ್ ವಿರುದ್ಧ ಸೋಲು ಕಂಡಿದೆ.
ಭಾರತದ ಪರ ಸಂಜಯ್ (15, 57, 58ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಸೋಲಿನಲ್ಲಿ ಮಿಂಚಿದರು. ಫ್ರಾನ್ಸ್ ಪರ ಟಿ.ಕ್ಲೆಮೆಂಟ್ (1, 23, 32ನೇ ನಿಮಿಷ) ಸತತ ಮೂರು ಗೋಲು ಬಾರಿಸಿ ಗೆಲುವಿನಲ್ಲಿ ಅಬ್ಬರಿಸಿದರು. ಮಾರ್ಕ್ವೆ ಗೋಲ್ (7ನೇ ನಿಮಿಷ), ಸೆಲಿಯರ್ (57ನೇ ನಿಮಿಷ) ಫ್ರಾನ್ಸ್ ಪರ ಅಂಕದ ಸಂಖ್ಯೆ ಹೆಚ್ಚಿಸಿದರು.
ಮೊದಲಾವಧಿಯ ಆಟದಲ್ಲಿ ಫ್ರಾನ್ಸ್ ಮೊದಲ ಗೋಲಿನ ನಗೆ ಬೀರಿತು. ಅಲ್ಲದೆ ಏಳನೇ ನಿಮಿಷದಲ್ಲಿ ಫ್ರಾನ್ಸ್ ಮತ್ತೊಂದು ಗೋಲು ಬಾರಿಸಿತು.
ಆದರೆ ಭಾರತ ಸಹ ಭರ್ಜರಿ ಆಟದ ಪ್ರದರ್ಶನ ನೀಡಿ 10ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರವನ್ನು ಕಡಿಮೆ ಮಾಡಿತು. ಇದೇ ಅವಧಿಯಲ್ಲಿ ಸಂಜಯ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ಆರ್ಭಟಿಸಿದರು. ಈ ಅವಧಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿತು.
ಎರಡನೇ ಹಾಗೂ ಮೂರನೇ ಅವಧಿಯಲ್ಲಿ ಫ್ರಾನ್ಸ್ ಒಂದು ಗೋಲು ಬಾರಿಸಿತು.
ಕೊನೆಯ ಅವಧಿಯಲ್ಲಿ ಸಂಜಯ್ ಎರಡು ಗೋಲು ಬಾರಿಸಿದರು. ಈ ಅವಧಿಯಲ್ಲಿ ಫ್ರಾನ್ಸ್ ಸಹ ಒಂದು ಗೋಲು ಸಿಡಿಸಿ ಅಂತರವನ್ನು ವೃದ್ಧಿಸಿತು.