ಬಾಗಲಕೋಟೆ: ಭ್ರೂಣ ಲಿಂಗ ಪತ್ತೆ (Fetal gender detection) ಮಾಡುವುದು ಹಾಗೂ ಹತ್ಯೆ ಮಾಡುವುದು (Feticide) ಶಿಕ್ಷಾರ್ಹ ಅಪರಾಧ. ಆದರೂ ಇತ್ತೀಚೆಗೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇಲ್ಲೊಂದು ಘಟನೆಯಲ್ಲಿ ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಗಲಕೋಟೆ (Bagalkot) ಜಿಲೆಯಲ್ಲಿ ಈ ಘಟನೆ ನಡೆದಿದೆ. ಮಹಾಲಿಂಗಪುರದ (Mahalingapur) ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿರುವುದು ಬಯಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಗರ್ಭಿಣಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿ (33) ಎಂಬುವರು ಮಹಾರಾಷ್ಟ್ರದ ಮಿರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಒಳಗಾದವರು. ಈ ವೇಳೆ ಅವರಿಗೆ ಹೆಣ್ಣು ಮಗು ಇರುವುದು ಕಂಡು ಬಂದಿದೆ. ಸೋನಾಲಿ ದಂಪತಿಗೆ ಈಗಾಗಲೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ರನೆಯದ್ದೂ ಹೆಣ್ಣು ಮಗು ಅಂತ ಗೊತ್ತಾಗುತ್ತಿದ್ದಂತೆ, ಸೋನಾಲಿ ಕುಟುಂಬಸ್ಥರು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದಾರೆ. ಆಗ, ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿದ್ದ ಕವಿತಾ ಎಂಬ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಗರ್ಭಪಾತ ಬಳಿಕ ರಕ್ತಸ್ರಾವವಾಗಿ ಸೋನಾಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದ್ದು, ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.