Fhathima Sana
‘ದಂಗಲ್’ ಸಿನಿಮಾದಲ್ಲಿ ಕುಸ್ತಿ ಪಟುವಾಗಿ ಮನೆಮಾತಾಗಿದ್ದ ಜನರ ಅಚ್ಚುಮೆಚ್ಚಿನ ನಟಿ ಎನಿಸಿಕೊಂಡ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ ಜೀವನದ ಕರಾಳ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ. ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳುವ ಗ್ಲಾಮರಸ್ ನಟಿ ಫಾತಿಮಾ ಸನಾ ಶೇಖ್.. ಆದ್ರೆ ಇವರು ಸಿನಿಮಾರಂಗದಲ್ಲಿ ಸಾಕಷ್ಉ ಸಮಸ್ಯೆಗಳನ್ನ ಎದುರಿಸಿದ್ದಾರಂತೆ. ಹೌದು ಸಿನಿಮಾ ರಂಗದಲ್ಲಿ ನಟಿಯರು ಅವಕಾಶಕ್ಕಾಗಿ ಅನೇಕ ತ್ಯಾಗಗಳಿಗೆ ಸಿದ್ದವಿರಬೇಕೆಂಬ ಹಲವು ಆರೋಪಗಳನ್ನ ಈ ಹಿಂದೆ ಅನೇಕ ನಟಿಯರು ಮಾಡಿದ್ದಾರೆ. ಅದರಂತೆ ಹಲವು ಮೂದಲಿಕೆಗಳು, ನಿರಾಕರಣೆಗಳು ಜೊತೆಗೆ ಪಾತ್ರಕ್ಕೆ ಪಲ್ಲಂಗ ಏರುವ ಬೇಡಿಕೆಯನ್ನ ಈ ನಟಿ ಸಹ ಎದುರಿಸಿದ್ದಾರಂತೆ.
ಹೌದು ಇಂತಹ ಘಟನೆಗಳ ಬಗ್ಗೆ ಅನೇಕ ನಟಿಯರು ಸಮಾಜದ ಮುಂದೆ ಹೇಳಿಕೊಳ್ಳುವ ಧೈರ್ಯ ಮಾಡಿದ್ರೆ ಇನ್ನೂ ಕೆಲವರು ಈ ಬಗ್ಗೆ ಏನೂ ಮಾತನಾಡದೇ ಮೌನಕ್ಕೆ ಶರಣಾಗ್ತಾರೆ. ಆದ್ರೆ ಫಾತಿಮಾ ಸನಾ ಶೇಖ್ ಈ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ನ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಫಾತಿಮಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ ಸನಾ.
‘ಪಾತ್ರ ಬೇಕೆಂದರೆ ಕಾಂಪ್ರೊಮೈಸ್ ಆಗಬೇಕು, ನಿನಗೆ ಪಾತ್ರ ಸಿಗಬೇಕೆಂದರೆ ಪಲ್ಲಂಗವೇರಲು ಒಪ್ಪಿಕೊಳ್ಳಬೇಕು’ ಎಂದು ಸನಾಗೆ ನೇರವಾಗಿ ಹಲವರು ಹೇಳಿದ್ದರಂತೆ. ಆದರೆ ಇಇದಕ್ಕೆ ಫಾತಿಮಾ ವಿರೋಧವಿದ್ದ ಕಾರಣ ಹಲವು ಸಿನಿಮಾಗಳು ಕೈತಪ್ಪಿಹೋದವು ಎಂದು ಹೇಳಿಕೊಂಡಿದ್ದಾರೆ ಸನಾ.ಅಷ್ಟೇ ಅಲ್ಲ ಸನಾ ಎಷ್ಟೋ ಬಾರಿ ಆಯ್ಕೆ ಆಗಿದ್ದ ಸಿನಿಮಾಗಳಿಂದಲೂ ಹೊರಗೆ ಬಿದ್ದಿರೋದಾಗಿಯೂ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಬಾಲ್ಯದಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿರುವ ಸನಾ ಆಗ ಈ ರೀತಿಯಾದ ವಿಚಾರಗಳನ್ನ ಬಹಿರಂಗವಾಗಿ ಹೇಳಿಕೊಳ್ತಾಯಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಸಮಾಜದ ದೃಷ್ಟಿಕೋನ ಬದಲಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸದ್ಯ ಫಾತಿಮಾ ಸನಾ ಶೇಖ್ ಅವರು ಲೈಫ್ ಇನ್ ಮೆಟ್ರೋ -2, ಲೂಡೊ, ಭೂತ್ ಪೊಲೀಸ್, ಸೂರಜ್ ಪೆ ಮಂಗಲ್ ಭಾರಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Fhathima Sana
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel