ADVERTISEMENT
Wednesday, August 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಒಂದೇ ಸಸ್ಯ ಮದ್ದು ಮಲೆನಾಡಿನ ಕಾಡತ್ತಿ ಅಥವಾ ಗರಗತ್ತ

admin by admin
July 23, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಒಂದೇ ಸಸ್ಯ ಮದ್ದು ಮಲೆನಾಡಿನ ಕಾಡತ್ತಿ ಅಥವಾ ಗರಗತ್ತ:

ಪಶ್ಚಿಮಘಟ್ಟದಲ್ಲಿ ವಿಫುಲವಾಗಿ ಬೆಳೆಯುವ ಸಸ್ಯ ಕಾಡತ್ತಿ ಅಥವಾ ಕಾಡು ಅತ್ತಿ ಅಥವಾ ಗರಗತ್ತ ಸಹ ಹಿತ್ತಿಲ ಗಿಡ ಮದ್ದು. ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಇದನ್ನು ಗರಗತ್ತದ ಮರ ಎಂದೂ ಕರೆಯಲಾಗುತ್ತದೆ. ಇದರ ಎಲೆಗಳನ್ನು ಹಿಂದೆ ಕಾಗದದ ರೂಪದಲ್ಲಿ ಬಳಸಲಾಗುತ್ತಿತ್ತು. ಇದರ ಸಸ್ಯಶಾಸ್ತ್ರದ ಹೆಸರು ಫೈಕಸ್ ಹಿಸ್ಪಿಡಾ (Ficus hispida). ಇಂಗ್ಲೀಷ್ ನಲ್ಲಿ ಇದನ್ನು ಹೈರಿ ಫಿಗ್ (Hairy fig), ಡೆವಿಲ್ ಫಿಗ್ (devil fig) ಎಂದೂ ಕರೆಯಲಾಗುತ್ತದೆ.

Related posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

August 5, 2026
‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

August 5, 2026

ಕಾಡತ್ತಿಯ ಮರದಲ್ಲಿ ಕಾಗೆಗಳು ಹೆಚ್ಚಾಗಿ ಗೂಡು ಕಟ್ಟಿ ಇದರ ಹಣ್ಣುಗಳನ್ನು ತಿನ್ನುತ್ತವೆಯಾದ್ದರಿಂದ ಸಂಸ್ಕೃತದಲ್ಲಿ ಕಾಕೂದುಂಬರ ಎಂದೂ ಮತ್ತು ಇದರ ಕಟ್ಟಿಗೆ ಅತ್ಯಂತ ಗಟ್ಟಿಯಾಗಿರುವುದರಿಂದ ಕಾಷ್ಟೋದುಂಬರ ಎಂದೂ ಸಂಸ್ಕೃತದ ಆಯುರ್ವೇದದ ಗ್ರಂಥದಲ್ಲಿ ಇದರ ಉಲ್ಲೇಖವಿದೆ. ಕಾಡು ಅತ್ತಿಯನ್ನು ಲಘು ಜ್ವರ, ಕೆಮ್ಮು, ಬೆನ್ನು ಮೂಳೆಯ ನೋವು, ಅಸ್ತಮಾದಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಔಷದದ ರೂಪದಲ್ಲಿ ನೀಡಲಾಗುತ್ತದೆ. ಇದರ ಹಣ್ಣು ಹಾಗೂ ತೊಗಟೆಯಿಂದ ಕಷಾಯ ತಯಾರಿಸಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಪಿತ್ತ ಪ್ರಕೋಪ ಉಪಶಮನವಾಗುತ್ತದೆ.

ಇದರ ಹಣ್ಣನ್ನು ನುಣ್ಣಗೆ ಅರೆದು ಗಾಯಗಳಿಗೆ ಲೇಪಿಸುವುದರಿಂದ ಗಾಯ ವಾಸಿಯಾಗುತ್ತದೆ ಮತ್ತು ಚರ್ಮಕ್ಕೆ ಈ ಲೇಪನ ಹಚ್ಚಿಕೊಳ್ಳುವುದರಿಂದ ಹುಳುಕಡ್ಡಿಯಂತಹ, ತುರಿಕೆಯಂತಹ ಚರ್ಮರೋಗಗಳು ದೂರವಾಗುತ್ತವೆ. ಕಾಡು ಅತ್ತಿಯ ತೊಗಟೆಯನ್ನು ಕಾಯಿಸಿ ಕಷಾಯವನ್ನಾಗಿ ಸೇವಿಸುವುದರಿಂದ ವಿಷಮ ಶೀತ ಜ್ವರ ವಾಸಿಯಾಗುತ್ತದೆ. ಇದರ ಬೇರಿನ ಚೂರ್ಣ ಮತ್ತು ಹರಳೆಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚುವುದರಿಂದ ಇಸುಬಿನಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಜಾಂಡೀಸ್, ಫೈಲ್ಸ್ ಮುಂತಾದ ಸಮಸ್ಯೆಗಳಿಗೂ ಇದರ ಕಷಾಯ ರಾಮಭಾಣವಾಗಿದೆ. ಇದರ ಹಣ್ಣು ಶಕ್ತಿವರ್ಧಕವೂ ಹೌದು. ಸ್ತ್ರೀಯ ರಕ್ತಸ್ರಾವ ನಿಯಂತ್ರಣಕ್ಕಾಗಿ ಕಾಡು ಅತ್ತಿಯ ಹಣ್ಣಿನ ಪಾನೀಯದಲ್ಲಿ ಜೇನು ಬೆರೆಸಿ ಕುಡಿಸಲಾಗುತ್ತದೆ. ಕಾಡತ್ತಿಯ ಬೇರಿನ ಚೂರ್ಣವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಅತಿಸಾರ, ರಕ್ತಬೇಧಿ, ಹೊಟ್ಟೆಯುಬ್ಬರ, ಸುಸ್ತು, ಸಂಕಟ ಮುಂತಾದ ಸಮಸ್ಯೆಗಳಿಗೂ ಇದರ ಬೇರಿನ ಚೂರ್ಣ, ತೊಗಟೆಯ ಕಷಾಯ ಅದ್ಭುತ ಔಷದವಾಗಿದೆ.

-ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು

Tags: AyurvedaDevil fig.Ficus hispidaHairy figmalnaduwestern ghats
ShareTweetSendShare
Join us on:

Related Posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

by Shwetha
August 5, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

by Shwetha
August 5, 2026
0

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತ-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಎಂದು ಹೇಳಿದ್ದಾರೆ....

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

by Shwetha
August 5, 2026
0

ನೂತನ ಸಚಿವ ಸಂಪುಟ ರಚನೆಯ ಬಳಿಕ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಶಾಸಕರ ಅಸಮಾಧಾನದ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ....

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

by Shwetha
August 5, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರಿಗೆ ಹಿರಿಯ ಮುಖಂಡ, ಮಾಜಿ ಸಚಿವ...

ದೇಶದ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: 1413 ಕೋಟಿ ಒಡೆಯ ಡಿ ಕೆ ಶಿವಕುಮಾರ್ ನಂಬರ್ 1, ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅತೀ ಬಡ ಸಿಎಂ

ಶಿಸ್ತು ಮೀರಿದರೆ ಮುಂದಿನ ಚುನಾವಣೆಗೆ ಟಿಕೆಟ್ ಕಟ್- ಬಂಡಾಯ ಎದ್ದರೆ 2 ನಿಮಿಷದಲ್ಲಿ ರಾಜೀನಾಮೆ ಓಕೆ: ಬ್ಲಾಕ್‌ಮೇಲ್ ತಂತ್ರಕ್ಕೆ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

by Shwetha
August 5, 2026
0

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನದ ಕಿಚ್ಚನ್ನು ಆರಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಸಂಪುಟದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram