FIFA U17 Womens World Cup 2022 ವೇಳಾಪಟ್ಟಿ ಬಿಡುಗಡೆ
ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್-2022 ವೇಳಾಪಟ್ಟಿಯನ್ನು ಇಂದು (ಜೂನ್ 15) ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 11 ರಿಂದ ಭಾರತ ಎರಡನೇ ಬಾರಿಗೆ (2017, 2022) ವಿಶ್ವಕಪ್ ಗೆ ಆತಿಥ್ಯ ವಹಿಸಲಿದೆ.
ಡಬಲ್ ಹೆಡರ್ ಪಂದ್ಯಗಳೊಂದಿಗೆ ಅಕ್ಟೋಬರ್ 30 ರವರೆಗೆ ನಡೆಯುವ ಈವೆಂಟ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ.
ಒಡಿಶಾ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 32 ಪಂದ್ಯಗಳು ನಡೆಯಲಿವೆ.

ಗ್ರೂಪ್ ಹಂತ (24 ಪಂದ್ಯಗಳು) ಅಕ್ಟೋಬರ್ 18 ರವರೆಗೆ, ಕ್ವಾರ್ಟರ್ ಫೈನಲ್ (4) ಅಕ್ಟೋಬರ್ 21 ಮತ್ತು 22 ರಂದು, ಸೆಮಿಸ್ (2) ಅಕ್ಟೋಬರ್ 26 (ಗೋವಾ) ಮತ್ತು ಅಂತಿಮ ಪಂದ್ಯ (ನವಿ ಮುಂಬೈ) ಅಕ್ಟೋಬರ್ 30 ರಂದು ನಡೆಯಲಿದೆ.
ಭಾರತವು ಗುಂಪು ಹಂತದಲ್ಲಿ ಆಡಲಿರುವ ಮೂರು ಪಂದ್ಯಗಳಿಗೆ (11, 14, 17) ಭುವನೇಶ್ವರದ ಕಳಿಂಗ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.








