Fifa World Cup 2022 : ಮೆಸ್ಸಿ ಗೆಲುವಿನ ಗೋಲು – ಅರ್ಜೆಂಟೀನಾ ವಿಶ್ವಕಪ್ ಆಸೆ ಜೀವಂತ…
ಎರಡು ಬಾರಿಯ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಕತಾರ್ ವಿಶ್ವಕಪ್ ಗೆಲ್ಲುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ತಂಡ, ಮೆಕ್ಸಿಕೊ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿ ಪುಟಿದೆದ್ದಿದೆ. ಆದರೆ, ನಾಕೌಟ್‌ಗೆ ಪ್ರವೇಶಿಸಲು ತಂಡವು ಡಿಸೆಂಬರ್ 1 ರಂದು ಪೋಲೆಂಡ್ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಬೇಕಾಗಿದೆ.
ಅರ್ಜೆಂಟೀನಾ ಪರ ಲಿಯೋನೆಲ್ ಮೆಸ್ಸಿ ಮತ್ತು ಎಂಜೊ ಫೆರ್ನಾಂಡೋ ತಲಾ ಒಂದು ಗೋಲು ಗಳಿಸಿದರು. ಇದು ಲಿಯೋನೆಲ್ ಮೆಸ್ಸಿ ಅವರ ವಿಶ್ವಕಪ 21ನೇ ಪಂದ್ಯವಾಗಿತ್ತು. ಇದರೊಂದಿಗೆ ಅರ್ಜೆಂಟೀನಾದ ಸಾರ್ವಕಾಲಿಕ ಶ್ರೇಷ್ಠ ಡಿಯಾಗೋ ಮರಡೋನಾ ಅವರ 21 ಪಂದ್ಯಗಳ ದಾಖಲೆಯನ್ನ ಸರಿಗಟ್ಟಿದ್ದಾರೆ.
ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾ ಸತತ ಭಾರಿ 11 ನೇ ಜಯ ದಾಖಲಿಸಿದೆ. 18 ವರ್ಷಗಳ ಹಿಂದೆ 2004 ಕೋಪಾ ಅಮೇರಿಕಾದಲ್ಲಿ ಮೆಕ್ಸಿಕೋ 1-0 ಗೋಲುಗಳಿಂದ ಗೆದ್ದಿತು.
ಶನಿವಾರ-ಭಾನುವಾರ ರಾತ್ರಿ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ 64ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಮೊದಲ ಗೋಲು ದಾಖಲಿಸಿದರು. 35 ವರ್ಷದ ಸ್ಟಾರ್ ಫುಟ್ಬಾಲ್ ಆಟಗಾರ ಏಂಜೆಲ್ ಡಿ ಮರಿಯಾ ಅವರ ಪಾಸ್‌ನಲ್ಲಿ ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದ ಗೋಲು ಗಳಿಸಿದರು. ಇದು ಮೆಸ್ಸಿ ಅವರ 8 ನೇ ವಿಶ್ವಕಪ್ ಗೋಲು. 87ನೇ ನಿಮಿಷದಲ್ಲಿ ಯಂಗ್ ಎಂಜೊ ಫೆರ್ನಾಂಡೊ ಪಂದ್ಯದ ಎರಡನೇ ಗೋಲು ದಾಖಲಿಸಿದರು. ಮೆಸ್ಸಿಯ ಶಾರ್ಟ್ ಪಾಸ್ ಅನ್ನ ತೆಗೆದುಕೊಂಡು ಅದ್ಭುತ ಗೋಲು ಗಳಿಸಿದರು.
ಮೆಕ್ಸಿಕೋ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಅರ್ಜೆಂಟೀನಾ ವಿರುದ್ಧ ಅತಿ ಹೆಚ್ಚು ವಿಶ್ವಕಪ್‌ಗಳಲ್ಲಿ ಸೋತ ನೈಜೀರಿಯಾಕ್ಕಿಂತ ಹಿಂದಿದ್ದಾರೆ. ನೈಜೀರಿಯಾ 5 ಪಂದ್ಯಗಳಲ್ಲಿ ಅರ್ಜೆಂಟೀನಾ ವಿರುದ್ಧ ಸೋತಿದೆ.
Fifa World Cup 2022, Argentina Vs Mexico, Lionel Messi, Enzo Fernández