FIFA World Cup 2022 : ಇಂದು ಇಂಗ್ಲೆಂಡ್ ಮತ್ತು ಇರಾನ್ – ಸೆನೆಗಲ್ ಮತ್ತು ನೆದರ್ಲೆಂಡ್ಸ್ ಮುಖಾಮುಖಿ
ಕತಾರ್ ನಲ್ಲಿ ನಡೆಯುತ್ತಿರುವ 22 ನೇ ಆವೃತ್ತಿಯ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿಂದು ಎರಡು ಪಂದ್ಯಗಳು ನಡೆಯುತ್ತಿದ್ದು, 4 ತಂಡಗಳು ಮುಖಮುಖಿಯಾಗಲಿವೆ.
ಭಾರತೀಯ ಕಾಲಮಾನ ಸಂಜೆ 6.30ಕ್ಕೆ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಇರಾನ್ ತಂಡಗಳು ಮುಖಾಮುಖಿಯಾಗಲಿವೆ. ನಂತರ ರಾತ್ರಿ 9.30ಕ್ಕೆ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಸೆನೆಗಲ್ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣೆಸಲಿವೆ.
ನಿನ್ನೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಈಕ್ವೆಡಾರ್ ತಂಡ 2-0 ಗೋಲುಗಳಿಂದ ಆತಿಥೇಯ ಕತಾರ್ ತಂಡದ ವಿರುದ್ಧ ಜಯಗಳಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು. ‘ ಎ ‘ಗುಂಪಿನ ಈ ಪಂದ್ಯದಲ್ಲಿ ಉತ್ತಮ ಕಾಲ್ ಚಳಕ ತೋರಿದ ಇನರ್ ವೆಲೆನ್ಸಿ 2 ಗೋಲು ಗಳಿಸಿ, ಈಕ್ವೆಡಾರ್ ತಂಡಕ್ಕೆ ನಿರೀಕ್ಷಿತ ಗೆಲುವು ತಂದುಕೊಟ್ಟರು.
ಫಿಫಾ ಪಂದ್ಯಾವಳಿ ಡಿಸೆಂಬರ್ 18ರ ವರೆಗೆ ಕತಾರ್ ನ 8 ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಒಟ್ಟಾರೆ 64 ಪಂದ್ಯಗಳು ಜರುಗಲಿವೆ. ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ಜರ್ಮನಿ, ಪೋರ್ಚುಗಲ್, ಸ್ಪೇನ್ ಸೇರಿದಂತೆ ಒಟ್ಟು 32 ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
FIFA World Cup 2022: England vs Iran vs Senegal vs Netherlands today








