ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup 2026- ಇಂಗ್ಲೆಂಡ್ ಕನಸನ್ನು ಭಗ್ನಗೊಳಿಸಿದ ಮೆಸ್ಸಿ..! ಕ್ಲೈಮ್ಯಾಕ್ಸ್ ಫೈಟ್‍ನಲ್ಲಿ ಗೆದ್ದ ಅರ್ಜೆಂಟಿನಾ ಫೈನಲ್‍ಗೆ ಎಂಟ್ರಿ..!

admin by admin
July 16, 2026
in Newsbeat, Sports, ಕ್ರೀಡೆ
Argentina celebrate reaching back-to-back final

Argentina celebrate reaching back-to-back final

Share on FacebookShare on TwitterShare on WhatsappShare on Telegram

Related posts

saakshatv-coursera-project-helix-ai-job-skills-iimb-bengaluru

ಎಐ ಆಧಾರಿತ ಉದ್ಯೋಗ ಕೌಶಲ್ಯ: ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್ ಹೆಲಿಕ್ಸ್’ ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಒಪ್ಪಂದ

October 15, 2026
saakshatv-hubballi-hunters-kannada-movie-release-december-11

ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ ಬರಲಿದೆ ‘ಬೆಲ್‌ ಬಾಟಮ್’ ನಿರ್ಮಾಪಕರ ‘ಹುಬ್ಬಳ್ಳಿ ಹಂಟರ್ಸ್’!

October 15, 2026

ಗೆಟ್‍ರೆಡಿ..!
ಜುಲೈ 19/20, 2026..! ಫಿಫಾ ವಿಶ್ವಕಪ್‍ನ ಸೂಪರ್ ಸಂಡೆ/ಮಂಡೆಯ ಅಲ್ಟಿಮೇಟ್ ಫೈನಲ್ ಮ್ಯಾಚ್..! ಇಂತಹ ಪಂದ್ಯ ಈ ಹಿಂದೆ ಬಂದಿಲ್ಲ. ಮುಂದೆ ಬರುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ.

ಯಾಕಂದ್ರೆ ಇದು, ಫಿಫಾ ಫುಟ್‍ಬಾಲ್ ಇತಿಹಾಸದ ಮಹೋನ್ನತ ಸಂಗ್ರಾಮ. ಫಿಫಾ ಫುಟ್‍ಬಾಲ್ ಪರಂಪರೆಯನ್ನು ಹಸ್ತಾಂತರ ಮಾಡುವ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗುವ ಮಹಾಸಮರ..! ಇಲ್ಲಿ ಯಾರು ಗೆಲ್ತಾರೆ ಅನ್ನೋದು ಮುಖ್ಯವಲ್ಲ. ಯಾರು ಗೆದ್ರೂ, ಯಾರು ಸೋತ್ರೂ,. ಅದೊಂದು ಚರಿತ್ರೆ ಸೃಷ್ಟಿಸುವ ಸಮಯ..!

ಹೌದು, ಇದು ಆಧುನಿಕ ಫುಟ್‍ಬಾಲ್ ಮಹಾರಾಜನ ಫಿಫಾ ವಿಶ್ವಕಪ್‍ನ ಕಟ್ಟಕಡೆಯ ಪಂದ್ಯ..! ಇನ್ನೊಂದೆಡೆ ಫಿಫಾ ವಿಶ್ವಕಪ್‍ನ ಭವಿಷ್ಯದ ಮಹಾರಾಜನ ಮೊದಲ ಫೈನಲ್ ಮ್ಯಾಚ್..!.

ಇದೆಂಥಾ ಕಾಕತಾಳಿಯ ಅಲ್ವಾ..? ಅಂದು ಆತ ಫುಟ್‍ಬಾಲ್ ಜಗತ್ತಿನ ಯುವರಾಜನಾಗಿದ್ದ. ಐದು ತಿಂಗಳ ಪುಟಾಣಿ ಮಗುವಿನ ಹಣೆಗೆ ಮುತ್ತಿಟ್ಟು ಆಶೀರ್ವಾದ ಮಾಡಿದ್ದ. ಆತನ ಕೈಯಿಂದಲೇ ಬಾತ್ ಟಬ್‍ನಲ್ಲಿ ಸ್ನಾನ ಮಾಡಿಸಿದ್ದ. ಇಂದು ಅದೇ ಮಗು ಜಾಗತಿಕ ಫುಟ್‍ಬಾಲ್‍ನ ಯುವರಾಜನಾಗಿದ್ದಾನೆ. ಅಂದು ಅನುಗ್ರಹ ಮಾಡಿದ್ದ ಯುವರಾಜ ಇಂದು ಫುಟ್‍ಬಾಲ್ ಲೋಕದ ಮಹಾರಾಜನಾಗಿದ್ದಾನೆ.

ನೆನಪಿಟ್ಟುಕೊಳ್ಳಿ.. ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ಅಂದ್ರೆ ಅದು ಸ್ಪೇನ್ ವರ್ಸಸ್ ಅರ್ಜೆಂಟಿನಾ ಅಲ್ಲ.. ಬದಲಾಗಿ ಮಹಾರಾಜ ವರ್ಸಸ್ ಯುವರಾಜ…! ಲಿಯೋನಾಲ್ ಮೆಸ್ಸಿ ವರ್ಸಸ್ ಲ್ಯಾಮಿನೆ ಯಮಲ್..!

ಫುಟ್‍ಬಾಲ್ ಜಗತ್ತಿನಲ್ಲಿ ಮೆಸ್ಸಿ ನಾಮ ಸ್ಮರಣೆ ಯಾಕೆ..?

ಮೆಸ್ಸಿ.. ಮೆಸ್ಸಿ.. ಮೆಸ್ಸಿ.. ಇದು ಫುಟ್‍ಬಾಲ್ ಜಗತ್ತಿನಲ್ಲಿ ಸದಾ ಮೊಳಗುವ ಮೂರಕ್ಷರದ ಮಂತ್ರ ಘೋಷದ ಪದಗಳು. ಈ ಹೆಸರು ಬರೀ ಅಪ್ಪಟ ಅಭಿಮಾನಿಗಳ ಬಾಯಲ್ಲಿ ನಲಿದಾಡುವ ಹೆಸರಲ್ಲ. ಪ್ರತಿಯೊಬ್ಬ ಫುಟ್‍ಬಾಲ್ ಅಭಿಮಾನಿಯ ಹೃದಯದಿಂದ ಕೇಳಿ ಬರುತ್ತಿರುವ ಉದ್ಗಾರ..!

ಯಾಕಂದ್ರೆ ಮೆಸ್ಸಿ ಬರೀ ಒಬ್ಬ ಆಟಗಾರನಲ್ಲ. ಗೋಲು ದಾಖಲಿಸುವ ಮೆಷಿನ್ ಕೂಡ ಅಲ್ಲ. ಕೌಶಲ್ಯಗಳಿಂದಲೇ ಮೋಡಿ ಮಾಡುವ ಜಾದೂಗಾರನೂ ಅಲ್ಲ. ಕಾಲ್ಚೆಂಡಿನ ಜೊತೆ ನರ್ತಿಸುವ ನಾಟ್ಯಗಾರನೂ ಅಲ್ಲ. ಕೌಶಲ್ಯ ಹಾಗೂ ಅದ್ಭುತ ಆಟದಿಂದಲೇ ಮೈದಾನದಲ್ಲಿ ಚಿತ್ತಾರ ಬಿಡಿಸುವ ಕಲೆಗಾರನೂ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ಟೀಮ್ ಪ್ಲೇಯರ್. ತಂಡಕ್ಕಾಗಿ ಸರ್ವಸ್ವವನ್ನು ಧಾರೆ ಎರೆಯುವ ನಿಸ್ವಾರ್ಥ ಟೀಮ್‍ಮೇಟ್. ಸೋಲಿನ ದವಡೆಗೆ ಸಿಲುಕಿದ್ರೂ ಎದೆಗುಂದದೆ ಗೆಲುವಿನ ದಡ ಸೇರಿಸುವ ಅಪ್ರತಿಮ ನಾಯಕ. ಮೆಸ್ಸಿ ಅಂದ್ರೆ ಬರೀ ಗ್ರೇಟ್ ಪ್ಲೇಯರ್ ಅಲ್ಲ..ಗ್ರೇಟೆಸ್ಟ್ ಲೀಡರ್..!

ಇದಕ್ಕೆ ಅತ್ಯುತ್ತಮ ಉದಾಹರಣೆ.. ಫಿಫಾ ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಮ್ಯಾಚ್. ಇಂಗ್ಲೆಂಡ್ ವಿರುದ್ದ ಅರ್ಜೆಂಟಿನಾದ ನಾಯಕ ಮೆಸ್ಸಿ ಆಡಿದ ರೀತಿಗೆ ಆತನನ್ನು ದ್ವೇಷ, ಟೀಕೆ ಮಾಡಿದವರು ಕೂಡ ಕೊಂಡಾಡಲೇಬೇಕು. ಕೊನೆ ಕ್ಷಣದಲ್ಲಿ ಆಂಗ್ಲರ ವಿರುದ್ಧ ಆಡಿದ ವೈಖರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ತಂಡ ಹಾಗೂ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುವ ಸೈಲೆಂಟ್ ಕಿಲ್ಲರ್ ಈ ಮೆಸ್ಸಿ.!

ಅಷ್ಟಕ್ಕೂ ಮೆಸ್ಸಿ ಬರೀ ಕೂಲ್ ಕ್ಯಾಪ್ಟನ್ ಮಾತ್ರವಲ್ಲ. ಸಂಯಮದಿಂದಲೇ ಎದುರಾಳಿ ತಂಡವನ್ನು ಸೋಲಿಸುವ ನಿಪುಣ ಆಟಗಾರ. ಎದುರಾಳಿ ತಂಡದ ಅರ್ಭಟಕ್ಕೆ ಮೆಸ್ಸಿ ಒಂಚೂರು ತಲೆಕೆಡಿಸಿಕೊಳ್ಳುವುದಿಲ್ಲ. ಟೈಮ್ ಬಂದಾಗ ಸರಿಯಾಗಿಯೇ ಚೆಕ್‍ಮೆಟ್ ನೀಡುವ ಗ್ರ್ಯಾಂಡ್ ಮಾಸ್ಟರ್. ಇನ್ನೇನೂ ಸೋಲು ನಿಶ್ಚಿತವಾಗಿದ್ರೂ ಕೊನೆ ಗಳಿಗೆಯಲ್ಲಿ ಗ್ಯಾಂಬಲ್ ಮಾಡುವ ಗ್ಯಾಂಬ್ಲರ್..!

ನಿಜ, ಇಂಗ್ಲೆಂಡ್ ವಿರುದ್ದದ 2ನೇ ಸೆಮಿಫೈನಲ್‍ನಲ್ಲಿ ನಡೆದಿರುವುದು ಸಹ ಮೆಸ್ಸಿಯ ಚಾಣಕ್ಷ ಆಟ ಮತ್ತು ಅರ್ಜೆಂಟಿನಾದ ಟೀಮ್ ಗೇಮ್. ಖಂಡಿತವಾಗಿಯೂ ಇದು ಮ್ಯಾಜಿಕ್ ಆಟವೂ ಅಲ್ಲ. ಅದೃಷ್ಟದಿಂದ ಒಲಿಸಿಕೊಂಡ ಗೆಲುವು ಅಲ್ಲ. ಗೆಲ್ಲಲೇಬೇಕು ಎಂಬ ದೃಢ ಸಂಕಲ್ಪಕ್ಕೆ ಸಿಕ್ಕ ಗೆಲುವು. ಗೆದ್ದೇ ಗೆಲ್ತೀವಿ ಅನ್ನೋ ಆತ್ಮವಿಶ್ವಾಸಕ್ಕೆ ದಕ್ಕಿದ ರೋಚಕ ಜಯ.

ಅಂದ ಹಾಗೇ, ಸೆಮಿಫೈನಲ್ ಪಂದ್ಯ ಅಂದ್ರೆ ಹೇಳಬೇಕಾ..? ಸಹಜವಾಗಿ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ. ಆದ್ರೂ ಇಂಗ್ಲೆಂಡ್ ವಿರುದ್ಧ ಅರ್ಜೆಂಟಿನಾ ಮೇಲುಗೈ ಸಾಧಿಸಿದ್ರೂ ಮೊದಲಾರ್ಧದಲ್ಲಿ ಗೋಲು ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಮಬಲದ ಹೋರಾಟಕ್ಕೆ ತೃಪ್ತಿಪಡಬೇಕಾಯ್ತು.

ಆದ್ರೆ ದ್ವಿತೀಯಾರ್ಧದ ಆರಂಭದಲ್ಲೇ ಮೆಸ್ಸಿ ಟೀಮ್‍ನ ಲೆಕ್ಕಾಚಾರಗಳನ್ನು ಬುಡಮೇಲು ಮಾಡಲು ಬ್ರಿಟಿಷರು ಯಶಸ್ವಿಯಾದ್ರು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್‍ನ ಆಂಟನಿ ಗಾರ್ಡನ್ ಅದ್ಭುತ ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದ್ರು.

ಇದರಿಂದ ಅರ್ಜೆಂಟಿನಾ ಗಲಿಬಿಲಿಗೊಳ್ಳಲಿಲ್ಲ. ಬದಲಾಗಿ ಎಚ್ಚೆತ್ತುಕೊಂಡಿತ್ತು. ಗೋಲು ದಾಖಲಿಸಲು ಆಂಗ್ಲರ ರಕ್ಷಣಾ ಕೋಟೆಯ ಮೇಲೆ ಮೆಸ್ಸಿ ಹುಡುಗರು ಸತತವಾಗಿ ದಾಳಿ ನಡೆಸಿದ್ರು. ಆದ್ರೆ ಯಶಸ್ವಿಯಾಗಲಿಲ್ಲ. ಇಂಗ್ಲೀಷರು ಕೂಡ ಅರ್ಜೆಂಟಿನಾದ ಗೋಲು ಗಳಿಸುವ ಧಾವಂತಕ್ಕೆ ಆಗಾಗ ಠಕ್ಕರ್ ಕೊಡುತ್ತಿದ್ದರು.

ಇನ್ನೇನು, ಅಮೋಘ ಆಟವನ್ನಾಡಿ ಸೋತ ಅರ್ಜೆಂಟಿನಾ…! 60 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್…! ಹೀಗೆ ಅಂದುಕೊಳ್ಳುವಷ್ಟರಲ್ಲಿ ಶುರುವಾಗಿದ್ದು ಮೆಸ್ಸಿಯ ಕಾಲ್ಚಳಕದ ಕರಾಮತ್ತು..!

ನಿಗದಿತ ಪಂದ್ಯ ಮುಗಿಯಲು ಕೇವಲ ಐದು ನಿಮಿಷ ಬಾಕಿ ಇತ್ತು. ಇನ್ನೊಂದೆಡೆ ಮೆಸ್ಸಿಗೆ ಗೋಲು ಗಳಿಸುವ ಅವಕಾಶವನ್ನು ಇಂಗ್ಲೆಂಡ್‍ನ ಚೌಕಿದಾರರು ವಿಫಲಗೊಳಿಸುತ್ತಿದ್ದರು. ಮೂರು ನಾಲ್ಕು ಆಟಗಾರರು ಮೆಸ್ಸಿಯ ಸುತ್ತ ಚಕ್ರವ್ಯೂಹ ರಚಿಸಿ ಕಟ್ಟಿ ಹಾಕಿದ್ರು. ಇದನ್ನು ಅರಿತುಕೊಂಡ ಮೆಸ್ಸಿ ಪ್ಲ್ಯಾನ್ “ಬಿ”ಯತ್ತ ಹೆಜ್ಜೆಯನ್ನಿಟ್ಟ. ಹಾಗಾಗಿ ಸಹ ಆಟಗಾರರಿಗೆ ಗೋಲು ದಾಖಲಿಸುವ ಅವಕಾಶ ಕಲ್ಪಿಸಲು ಮುಂದಾದ. ಹೀಗೆ ಹಲವು ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿದ್ರೂ ಪ್ರಯೋಜನವಾಗಲಿಲ್ಲ.

ಆದ್ರೆ 85ನೇ ನಿಮಿಷದಲ್ಲಿ ಮೆಸ್ಸಿಯ ಊಹೆ ತಪ್ಪಾಗಲಿಲ್ಲ. ಇಂಗ್ಲೆಂಡ್‍ನ ಕಾವಲುಗಾರರ ಜೊತೆ ಗುದ್ದಾಡಿಕೊಂಡು ನೀಡಿದ್ದ, ಅದ್ಭುತ ಪಾಸ್ ಅನ್ನು ಎನ್ಝೊ ಫೆರ್ನಾಂಡಿಸ್ ಗೋಲಾಗಿ ಪರಿವರ್ತಿಸಿದ್ದ. ಅಲ್ಲಿಗೆ ಅಂತರ 1-1ರಿಂದ ಸಮಬಲಗೊಂಡಿತ್ತು.

ನಂತರ ಶುರುವಾಗಿದ್ದು ಹೆಚ್ಚುವರಿ ಸಮಯದ ಆಟದ ಸಂಘರ್ಷ. ಒಂದು ಕಡೆ, ಮೈದಾನದಲ್ಲಿ ಮೆಸ್ಸಿಯ ಹೆಸರು ಝೆಂಕಾರದಂತೆ ಪ್ರತಿಧ್ವನಿಸುತ್ತಿತ್ತು. ಇನ್ನೊಂದೆಡೆ ಮೆಸ್ಸಿಗಾಗಿ ಮತ್ತೊಂದು ವಿಶ್ವಕಪ್ ಗೆಲ್ಲಬೇಕು ಎಂಬ ಅರ್ಜೆಂಟಿನಾ ಆಟಗಾರರ ಕೊನೆ ಕ್ಷಣದ ಆರ್ಭಟ ನಡೆಯುತ್ತಿತ್ತು.

ಪರಿಣಾಮ 92ನೇ ನಿಮಿಷದಲ್ಲಿ ಮೆಸ್ಸಿಯ ದುಬಾರಿ ಕಾಲಿನಿಂದ ಬಂದ ಮತ್ತೊಂದು ಅದ್ಭುತ ಪಾಸ್. ಈ ಬಾರಿ ಲೌಟಾರೊ ಮಾರ್ಟಿನೆಝ್ ಮಿಂಚಿನಂತೆ ನುಗ್ಗಿ ಎರಡನೇ ಗೋಲು ದಾಖಲಿಸಿ ಗೋಲಿನ ಅಂತರವನ್ನು 2-1ಕ್ಕೇರಿಸಿದ್ದ. ಆಗಲೇ ಅರ್ಜೆಂಟಿನಾದ ಗೆಲುವು ಕೂಡ ಖಚಿತವಾಯ್ತು.

ಕೊನೆಯ ಗಳಿಗೆಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ರೂ ಅರ್ಜೆಂಟಿನಾದ ಸಂಘಟಿತ ಆಟದ ಮುಂದೆ ಇಂಗ್ಲೆಂಡ್ ತಲೆಬಾಗಲೇಬೇಕಾಯ್ತು.

ಈ ಮೂಲಕ ಅರ್ಜೆಂಟಿನಾ ಏಳನೇ ಬಾರಿ ಫಿಫಾ ವಿಶ್ವಕಪ್‍ನಲ್ಲಿ ಫೈನಲ್ ಪ್ರವೇಶಿಸಿದ್ದ ಸಾಧನೆ ಮಾಡಿದೆ. ಈಗಾಗಲೇ ಮೂರು ಬಾರಿ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಅರ್ಜೆಂಟಿನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದೆ. ಅಷ್ಟೇ ಅಲ್ಲ, ಮೆಸ್ಸಿ ನಾಯಕತ್ವದಲ್ಲಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಉಮೇದಿನಲ್ಲಿದೆ.

ಒಟ್ಟಿನಲ್ಲಿ ಮೆಸ್ಸಿಯ ಫಿಫಾ ವಿಶ್ವಕಪ್ ಪ್ರಯಾಣ ಯಾವುದೇ ಕೊರತೆಗಳಿಲ್ಲದೆ ಅರ್ಥಪೂರ್ಣವಾಗಿ ಸಾಗುವ ಹಾದಿಯಲ್ಲಿದೆ. ಆದ್ರೆ ಯಮಲ್ ಎಂಬ ಸ್ಪೇನ್‍ನ ಅಪ್ರತಿಮ ಪ್ರತಿಭೆ ಮೆಸ್ಸಿಯ ಕಿರೀಟದ ಮೇಲೆ ಕಣ್ಣಿಟ್ಟಿದ್ದಾನೆ. ಯಾವುದಕ್ಕೂ ಫಿಫಾ ವಿಶ್ವಕಪ್ ಟ್ರೋಫಿ ಯಾರ ಮುಡಿಗೆ ಸೇರಿಕೊಳ್ಳುತ್ತೆ ಅನ್ನೋದು ಜುಲೈ 20ರಂದು ನಿರ್ಧಾರವಾಗಲಿದೆ. ಕಾದು ನೋಡೋಣ..!

ಸನತ್ ರೈ

 

Tags: #FIFAWorldCup2026 #MessiVsYamal #ArgentinaVsSpain #LionelMessi #LamineYamal #SanathRai#saakshatv
ShareTweetSendShare
Join us on:

Related Posts

saakshatv-coursera-project-helix-ai-job-skills-iimb-bengaluru

ಎಐ ಆಧಾರಿತ ಉದ್ಯೋಗ ಕೌಶಲ್ಯ: ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್ ಹೆಲಿಕ್ಸ್’ ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಒಪ್ಪಂದ

by admin
October 15, 2026
0

ಬೆಂಗಳೂರು: ಜಾಗತಿಕ ಆನ್‌ಲೈನ್ ಕಲಿಕಾ ವೇದಿಕೆಯಾದ 'ಕೋರ್ಸೆರಾ' ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ತನ್ನ ಹೊಸ ವೇದಿಕೆಯಾದ 'ಪ್ರಾಜೆಕ್ಟ್...

saakshatv-hubballi-hunters-kannada-movie-release-december-11

ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ ಬರಲಿದೆ ‘ಬೆಲ್‌ ಬಾಟಮ್’ ನಿರ್ಮಾಪಕರ ‘ಹುಬ್ಬಳ್ಳಿ ಹಂಟರ್ಸ್’!

by admin
October 15, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿಟ್ ಚಿತ್ರ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ದಿನಾಂಕ...

saakshatv-jio-platforms-growth-roadmap-indias-largest-ipo

ಭಾರತದ ಅತಿ ದೊಡ್ಡ ಐಪಿಒ ಆಗುವ ಮುಂಚೆ ಜಿಯೋದ ಮುಂದಿನ ಮಾರ್ಗನಕ್ಷೆ ಅನಾವರಣ

by admin
October 15, 2026
0

ಮುಂಬೈ, ಅಕ್ಟೋಬರ್ 15: ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒಗೂ ಮುನ್ನ ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಯ ಮಾರ್ಗನಕ್ಷೆ (ರೋಡ್‌ಮ್ಯಾಪ್) ಅನ್ನು ಬಹಿರಂಗಪಡಿಸಿದೆ. ಮುಂಬೈನಲ್ಲಿ...

saakshatv-java-yezdi-diwali-festival-bike-finance-offers

ಹಬ್ಬಕ್ಕೆ ‘ಜಾವಾ ಯೆಜ್ಡಿ’ ಬಂಪರ್ ಆಫರ್: ಶೂನ್ಯ ಡೌನ್‌ಪೇಮೆಂಟ್, 5.99% ಬಡ್ಡಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಹೊಸ ಬೈಕ್!

by admin
October 15, 2026
0

ದೀಪಾವಳಿ ಹಾಗೂ ಹಬ್ಬದ ಸೀಸನ್ ಶುರುವಾಗುತ್ತಲೇ ಬೈಕ್ ಪ್ರಿಯರಿಗೆ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ಭರ್ಜರಿ ಸಿಹಿಸುದ್ದಿ ನೀಡಿದೆ. ಗ್ರಾಹಕರು ತಮ್ಮ ನೆಚ್ಚಿನ ಬೈಕ್ ಅನ್ನು ಸುಲಭವಾಗಿ ಖರೀದಿಸಲು...

ಸ್ಟಿಂಗ್ ಆಪರೇಷನ್ ಸುಳಿಯಲ್ಲಿ ಸಿಲುಕಿದ ಕರ್ನಾಟಕ ಕಾಂಗ್ರೆಸ್: ಕೈ ನಾಯಕರ ನಡುವೆ ಸೃಷ್ಟಿಯಾದ ನಂಬಿಕೆಯ ಮಹಾ ಕಂದಕ,ಹೈಕಮಾಂಡ್ ಎಂಟ್ರಿ ಕೊಡುತ್ತಾ

ಸ್ಟಿಂಗ್ ಆಪರೇಷನ್ ಸುಳಿಯಲ್ಲಿ ಸಿಲುಕಿದ ಕರ್ನಾಟಕ ಕಾಂಗ್ರೆಸ್: ಕೈ ನಾಯಕರ ನಡುವೆ ಸೃಷ್ಟಿಯಾದ ನಂಬಿಕೆಯ ಮಹಾ ಕಂದಕ,ಹೈಕಮಾಂಡ್ ಎಂಟ್ರಿ ಕೊಡುತ್ತಾ

by Shwetha
October 15, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ಸ್ಟಿಂಗ್ ಆಪರೇಷನ್ ಎನ್ನುವ ಭೂತ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆಲ್ಲಲು ಹೊರಟಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram