36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟೀನಾ ; ಮೆಸ್ಸಿ ಕನಸ್ಸು ನನಸು….
ಕತಾರ್‌ನಲ್ಲಿ ನಡೆದ ಫಿಫಾ ಪುಟ್ಬಾಲ್ ವಿಶ್ವಕಪ್ ನಲ್ಲಿ 36 ವರ್ಷಗಳ ಬಳಿಕ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ಮೂಲಕ 4-2 ರಿಂದ ಗೋಲುಗಳಿಂದ ಫ್ರಾನ್ಸ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಪುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಗೆ ಅರ್ಜೆಂಟೀನಾ ಗೆಲುವಿನ ವಿದಾಯ ಹೇಳಿದೆ. ತಂಡವನ್ನ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸುವ ಮೆಸ್ಸಿಯ ಕನಸು ಕೊನೆಗೂ ನನಸಾಗಿದೆ.
ನಿಗದಿತ 90 ನಿಮಿಷಗಳಲ್ಲಿ ಎರಡೂ ತಂಡಗಳು ಸಮಬಲ ಹೋರಾಟ ನಡೆಸಿ 2-2 ಗೋಲು ಗಳಿಸಿದ್ದವು. ಹೆಚ್ಚುವರಿ ಸಮಯ ನಂತರವೂ 3-3 ಅಂತರದಲ್ಲಿ ಪಂದ್ಯ ಸಮಬಲಗೊಂಡಿದ್ದರಿಂದ ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧಾರಕ್ಕೆ ಮುಂದಾಗಲಾಯಿತು. ಪೈನಲ್ ನಲ್ಲಿ ಮೆಸ್ಸಿ ಎರಡು ಗೋಲು ಗಳಿಸಿದರೆ ಫ್ರಾನ್ಸ್ ಪರ ಕೈಲಿಯನ್ ಎಂಬಪ್ಪೆ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಪುಟ್ಬಾಲ್ ಲೋಕದಲ್ಲಿ ಹೊಸ ತಾರೆಯ ಉದಯವಾಗಿದೆ.
ಅರ್ಜೆಂಟೀನಾ 36 ವರ್ಷಗಳ ನಂತರ ವಿಶ್ವಕಪ್ ಗೆ ಮುತ್ತಿಟ್ಟಿದೆ. ಇದಕ್ಕೂ ಮೊದಲು 1978 ಮತ್ತು 1986 ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಯಿತು.
ಪೆನಾಲ್ಟಿ ಶೂಟೌಟ್‌ನ ರೋಚಕತೆ ಹೀಗಿದೆ….
1-0: ಫ್ರಾನ್ಸ್ ಪರ ಕೈಲಿಯನ್ ಎಂಬಾಪೆಲ್ಲೆ ಎಡ ಮೂಲೆಯಲ್ಲಿ ಗೋಲು
1-1: ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಎಡಭಾಗದಲ್ಲಿ ಗೋಲು
1-1: ಫ್ರಾನ್ಸ್‌ನ ಕಿಂಗ್ಸ್ಲಿ ಕೋಮನ್ ಹೊಡೆತ ತಡೆದ ಅರ್ಜೆಂಟೀನಾದ ಗೋಲ್‌ಕೀಪರ್ ಮಾರ್ಟಿನೆಜ್
2-1: ಅರ್ಜೆಂಟೀನಾದ ಪಾಲೊ ಡಿಬಾಲಾ ಗೋಲು
2-1: ಪೆನಾಲ್ಟಿ ತಪ್ಪಿದ ಫ್ರಾನ್ಸ್‌ನ ಔರೆಲಿಯನ್ ಚೌಮೇನಿ
3-1: ಅರ್ಜೆಂಟೀನಾದ ಲಿಯಾಂಡ್ರೊ ಪರೆಡೆಸ್ ಗೋಲು
3-2: ಫ್ರಾನ್ಸ್‌ನ ರಾಂಡಲ್ ಕೊಲೊ ಮುವಾನಿ ಗೋಲು
4-2: ಅರ್ಜೆಂಟೀನಾದ ಗೊಂಜಾಲೊ ಮೊಂಟಿಯೆಲ್ ಗೋಲು ಬಾರಿಸುವ ಮೂಲಕ 36 ವರ್ಷಗಳ ನಂತರ ಅರ್ಜೆಂಟೀನಾ ಫಿಫಾ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವಂತೆ ಮಾಡಿದ್ದಾರೆ.
fifa world cup: Argentina became the champion after 36 years; Messi’s dream come true…