fifa world cup: ಸರ್ಬಿಯಾ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದ ಬ್ರೆಜಿಲ್…
ಪ್ರಶಸ್ತಿ ಫೇವರಿಟ್ ಬ್ರೆಜಿಲ್ ಪುಟ್ಬಾಲ್ ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಶುಕ್ರವಾರ ಲುಸಿಲ್ಲೆ ಕ್ರೀಡಾಂಗಣದಲ್ಲಿ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ನೇಮಾರ್ ನೇತೃತ್ವದ ಸಾಂಬಾ ತಂಡ 2-0 ಗೋಲುಗಳಿಂದ ಸರ್ಬಿಯಾ ವಿರುದ್ಧ ಗೆದ್ದು ಬೀಗಿದೆ. ರಿಚಾರ್ಲಿಸನ್ ಎರಡು ಗೋಲುಗಳನ್ನ ಗಳಿಸಿದರು.
ಮೊದಲಾರ್ಧ ಗೋಲು ರಹಿತವಾಗಿ ಸಾಗಿದರೂ, ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ದ್ವಿತೀಯಾರ್ಧದಲ್ಲಿ ಸಿಡಿದೇಳಿತು. ಮತ್ತೊಂದೆಡೆ ಮೊದಲಾರ್ಧದಲ್ಲಿ ಉತ್ತಮ ಆಟವಾಡಿದ ಸರ್ಬಿಯಾ ದ್ವಿತೀಯಾರ್ಧದಲ್ಲಿ ನೆಲಕಚ್ಚಿತು. 62 ನೇ ನಿಮಿಷದಲ್ಲಿ ಡ್ರಾ ಅನಿವಾರ್ಯ ಎನಿಸಿದಾಗ ಟೊಟೆನ್‌ಹ್ಯಾಮ್‌ನ ಸ್ಟಾರ್ ಫಾರ್ವರ್ಡ್ ಆಟಗಾರ ರಿಚಾರ್ಲಿಸನ್ ಬೈಸಿಕಲ್ ಕಿಕ್ ಮೂಲಕ ಅದ್ಭುತ ಗೋಲು ಬಾರಿಸಿ ಬ್ರೆಜಿಲ್‌ಗೆ ಮುನ್ನಡೆ ತಂದುಕೊಟ್ಟರು. ನಂತರದ 11 ನಿಮಿಷಗಳಲ್ಲಿ ಎರಡನೇ ಗೋಲಿ ಭಾರಿಸಿ ತಂಡದ ಮುನ್ನಡೆಯನ್ನ ವಿಸ್ತರಿಸಿದರು.
ಯಶಸ್ವಿ ತಂತ್ರ: ನಾಲ್ವರು ಫಾರ್ವರ್ಡ್ ಆಟಗಾರರಾದ ನೇಮಾರ್, ವಿನಿಸಿಯಸ್ ಜೂನಿಯರ್, ರಪಿನಾ ಮತ್ತು ರಿಚಾರ್ಲಿಸನ್ ಅವರೊಂದಿಗೆ ಸಾಗಿದ ಬ್ರೆಜಿಲ್ ಮ್ಯಾನೇಜರ್ ಟೈಟ್ ಅವರ ತಂತ್ರವು ಉತ್ತಮ ಫಲ ನೀಡಿದೆ. ಈ ನಾಲ್ವರನ್ನ ಕಟ್ಟಿಹಾಕಲು ಸೆರ್ಬಿಯಾ ಹರಸಾಹಸಪಟ್ಟಿತು.
ಮತ್ತೊಂದೆಡೆ, ಸರ್ಬಿಯಾ ತಮ್ಮ ತಂಡದ ಸಾರ್ವಕಾಲಿಕ ಗೋಲು ಗಳಿಸಿದ ಅಲೆಕ್ಸಾಂಡರ್ ಮಿಟ್ರೋವಿಕ್ ಅವರನ್ನ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೂ ಫೀಲ್ಡಿಂಗ್ ಇಳಿಸಿದ ಕಾರಣ ಕಾರಣ ಬೆಲೆ ತೆರಬೇಕಾಯಿತು. ಬ್ರೆಜಿಲ್‌ನ ಫಾರ್ವರ್ಡ್‌ಗಳು ಪಾದರಸದಂತೆ ಚಲಿಸುತ್ತಿದ್ದರೆ, ಸರ್ಬಿಯಾದ ಫಾರ್ವರ್ಡ್ ಆಟಗಾರ ಮಿಟ್ರೋವಿಕ್ ಶಾಂತವಾಗಿದ್ದರು.
ದ್ವಿತೀಯಾರ್ಧದಲ್ಲಿ ಬ್ರೆಜಿಲ್ ಗೇರ್ ಬದಲಾಯಿಸಿತು ಮತ್ತು ಪಂದ್ಯವು ಸಂಪೂರ್ಣವಾಗಿ ಏಕಪಕ್ಷೀಯವಾಯಿತು.
ಬೈಸಿಕಲ್ ಕಿಕ್
ರಿಚರ್ಲಿಸನ್ ತನ್ನ ಎಡಗಾಲಿನಿಂದ ವಿನಿಶಿಯಸ್ ನೀಡಿದ ಕ್ರಾಸ್ ಪಾಸ್ ನಿಯಂತ್ರಿಸಿ ಮತ್ತು ಅದನ್ನು ತಮ್ಮ ಬಲಗಾಲಿನಿಂದ ‘ಬೈಸಿಕಲ್ ಕಿಕ್’ ಮೂಲಕ ಗೋಲ್ ಪೋಸ್ಟ್‌ಗೆ ಕಳುಹಿಸಿದರು. ಆ ಮೂಲಕ ವಿಶ್ವ ನಂ.1 ಬ್ರೆಜಿಲ್ ತಂಡದ ಸಂತಸಕ್ಕೆ ಪಾರವೇ ಇರಲಿಲ್ಲ. ಒಂದೇ ಬಾರಿಗೆ 22 ಬಾರಿ ಎದುರಾಳಿಯ ಗೋಲ್‌ಪೋಸ್ಟ್ ಮೇಲೆ ದಾಳಿ ಮಾಡಿರುವುದು ಬ್ರೆಜಿಲ್ ಎಷ್ಟು ಚೆನ್ನಾಗಿ ಆಡಿದೆ ಎಂಬುದನ್ನು ತೋರಿಸುತ್ತದೆ. ಸರ್ಬಿಯಾ ಕೇವಲ ಐದು ಬಾರಿ ದಾಳಿ ನಡೆಸಿರುವುದು ತಂಡದ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.