ವಿಶ್ವಕಪ್ ಫೈನಲ್ ಗು ಮುನ್ನ ವೈರಸ್ ಗೆ ತುತ್ತಾದ ಪ್ರಾನ್ಸ್ ಹಲವು ಆಟಗಾರರು…
ಕತಾರ್ ನಲ್ಲಿ ನಡೆಯುತ್ತಿರು ಪುಟ್ಬಾಲ್ ವಿಶ್ವಕಪ್ ಪೈನಲ್ ಪಂದ್ಯ ಹತ್ತಿರವಾಗುತ್ತಿರುವಂತೆ ಹಲವು ಆಟಗಾರರು ವೈರಸ್ ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮೊರೊಕ್ಕೋ ವಿರುದ್ಧದ ಸೆಮಿಪೈನಲ್ ಪಂದ್ಯಕ್ಕೂ ಮುನ್ನ ಪ್ರಾನ್ಸ್ ಐದು ಆಟಗಾರರು ವೈರಸ್ ಗೆ ತುತ್ತಾಗಿದ್ದು, ಜ್ವರದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದ ದಯೋಟ್ ಉಪಮೆಕಾನೋ ಮತ್ತು ಆಡ್ರಿಯನ್ ರಾಬಿಯೋಟ್ ಆರಂಭಿಕ ಲೈನ್ ಆಪ್ ನಿಂದ ಹೊರಗುಳಿದಿದ್ದರು.
ಕತಾರ್ ಕ್ರೀಡಾಂಗಣದಲ್ಲಿ ಹವಾ ನಿಯಂತ್ರಣ ಎ ಸಿ ಯನ್ನ ನಿರಂತರವಾಗಿ ಬಳಸುತ್ತಿರುವುದರಿಂದ ಅನಾರೋಗ್ಯಕ್ಕೀಡಾಗಿರುವುದಾಗಿ ಡಿಡಿಯರ್ ಡೆಶಾಂಪ್ಸ್ ದೂರಿದ್ದಾರೆ. ಅನಾರೋಗ್ಯಕ್ಕೀಡಾದವರ ಪಟ್ಟಿಯಲ್ಲಿ ಕಿಂಗ್ಸ್ಲಿ ಕೋಮನ್ ರಾಫೆಲ್ ವರಾನೆ ಇಬ್ರಾಹಿಮಾ ಕೊನಾಟೆ ಅವರು ಸೇರಿದ್ದಾರೆ.
ಸದ್ಯ ಮುನ್ನೆಚ್ಚರಿಕೆಯಿಂದಾಗಿ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಸೋಶಿಯಲ್ ಡಿಸ್ಟೆನ್ಸ್ ಅನುಸರಿಸಲು ಕೋರಲಾಗಿದೆ. ಇದೆಲ್ಲದರ ನಡುವೆ ವಿಶ್ವಕಪ್ ನಲ್ಲಿ ಟೋಫ್ರಿಗಾಗಿ ಹೋರಾಡಲು ಡೆಸ್ಚಾಂಪ್ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.
fifa world cup : France squad hit by illness ahead of World Cup final as five players contract virus