FIFA World Cup: ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಸಿದ್ಧವಾದ ಕತಾರ್…
ಫಿಫಾ ಫುಟ್ಬಾಲ್ ವಿಶ್ವಕಪ್ ಇಂದಿನಿಂದ ಕತಾರ್ ನಲ್ಲಿ ಆರಂಭವಾಗಲಿದೆ. ನವೆಂಬರ್ 20 ರಿಂದ ಡಿಸೆಂಬರ್ 18ರ ವರೆಗೆ ಪಂದ್ಯಗಳು ನಡೆಯಲಿದ್ದು, 32 ತಂಡಗಳ ನಡುವೆ ವಿಶ್ವಕಪ್ ಗಾಗಿ ಸೆಣಸಾಟ ನಡೆಯಲಿದೆ.
ಅರಬ್ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಗೆ ನವೆಂಬರ್ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಚಾಲನೆ ಸಿಗಲಿದೆ. ಡಿಸೆಂಬರ್ 18ರಂದು ಫುಟ್ಬಾಲ್ ವಿಶ್ವಕಪ್ ನ ಫೈನಲ್ ಪಂದ್ಯ ನಡೆಯಲಿದೆ.
ಇನ್ನು ಈ ಬಾರಿಯ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ವಿಜೇಯ ತಂಡ 42 ಮಿಲಿಯನ್ ಯುಎಸ್ ಡಾಲರ್ ಅಂದರೆ 342 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಿದೆ. ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಟೂರ್ನಿ 440 ಮಿಲಿಯನ್ ಯುಎಸ್ ಡಾಲರ್ ಅಂದರೆ 3585 ಕೋಟಿ ರೂಪಾಯಿಯಲ್ಲಿ ನಡೆಯಲಿದ್ದು, ಭಾಗವಹಿಸುವ ಎಲ್ಲಾ 32 ತಂಡಗಳಿಗೂ ಫಿಫಾ ವಿಶ್ವಕಪ್ ಟೂರ್ನಿಯಿಂದ ಹಣ ಸಿಗಲಿದೆ.
FIFA World Cup: Qatar ready for FIFA World Cup








