Fifa Worldcup : ಬಲಿಷ್ಠ ತಂಡಗಳ ನಡುವೆ ಸೆಣಸಾಟ
ಫಿಪಾ ವಿಶ್ವಕಪ್ನಲ್ಲಿ ಇಂದು ಬಲಿಷ್ಠ ತಂಡಗಳು ಕದಾಟ ನಡೆಸಲಿವೆ. ಪೋರ್ಚುಗಲ್, ಬ್ರೆಜಿಲ್ ಉರುಗ್ವೆ ತಂಡಗಳು ಸೆಣಸಲಿವೆ. ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಬ್ರೆಜಿಲ್ ತಂಡದಿಂದ ನೇಮರ್ ಕಣಕ್ಕಿಳಿಯಲಿದ್ದಾರೆ.
ಸ್ವೀಟ್ಜರ್ಲೆಂಡ್, ಕ್ಯಾಮರೂನ್ ಮುಖಾಮುಖಿ
ಜಿ ಗುಂಪಿನಲ್ಲಿ ಇಂದು ಸ್ವೀಟ್ಜರ್ಲೆಂಡ್ ಮತ್ತು ಕ್ಯಾಮರೂನ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳಿ ನಾಕೌಟ್ಗೆ ಹೋಗುವ ಕನಸು ಕಾಣುತ್ತಿವೆ. ಕಳೆದ 2 ವಿಶ್ವಕಪ್ಗಳಲ್ಲೂ ಸ್ವೀಟ್ಜರ್ಲೆಂಡ್ ಗ್ರೂಪ್ ಹಂತದಲ್ಲೆ ಟೂರ್ನಿಯಿಂದ ಹೊರಬಿದ್ದಿದೆ. ಕ್ಯಾಮರೂನ್ ತಂಡ ಆರು ವಿಶ್ವಕಪ್ಗಳಲ್ಲಿ ಕೈಚೆಲ್ಲಿಕೊಂಡಿದೆ. 2010 ಮತ್ತು 2014ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. 2018ರ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಉರುಗ್ವೆಗೆ ಶಾಕ್ ಕೊಡುತ್ತಾ ದ.ಕೊರಿಯಾ ?
ಎಚ್ ಗುಂಪಿನಲ್ಲಿ ಉರುಗ್ವೆ ತಂಡ ದ.ಕೊರಿಯಾ ತಂಡವನ್ನು ಎದುರಿಸಲಿದೆ. ನಾಕೌಟ್ ಹಂತಕ್ಕೆ ಹೋಗು ರೇಸ್ನಲ್ಲಿ ಉರುಗ್ವೆ ತಂಡ ಇದೆ. ಇನ್ನು ದಕ್ಷಿಣ ಕೊರಿಯಾ 2018ರ ವಿಶ್ವಕಪ್ನಲ್ಲಿ ಬಲಿಷ್ಠ ಜರ್ಮನಿಯನ್ನು ಸೋಲಿಸಿ ಅಚ್ಚರಿ ಫಲಿತಾಂಶ ನೀಡಿತ್ತು. ಉರುಗ್ವೆ ಮತ್ತು ಪೋರ್ಚುಗಲ್ ತಂಡಕ್ಕೆ ಕಠಿಣ ಸವಾಲು ನೀಡಲಿದೆ.
ಪೋರ್ಚುಗಲ್ಗೆ ಘಾನ ಸವಾಲು
ಪೋರ್ಚುಗಲ್ ತಂಡ ಎಂಟನೆ ಬಾರಿಗೆ ವಿಶ್ವಕಪ್ಗೆ ಅರ್ಹತೆ ಪಡೆದಿದೆ. ಅರ್ಹತಾ ಸುತ್ತಿನಲ್ಲಿ ಎರಡನೆ ಸ್ಥಾನ ಪಡೆದಿದೆ. 1966ರಲ್ಲಿ ಮೂರನೆ ಸ್ಥಾನದೊಂದಿಗೆ ವಿಶ್ವಕಪ್ ಅನ್ನು ಪೂರ್ಣಗೊಳಿಸಿತ್ತು. ಕಳೆದ ಬಾರಿ 16ರ ಸುತ್ತಿನಲ್ಲಿ ನಿರ್ಗಮಿಸಿತ್ತು. ಘಾನ ತಂಡ ನಾಲ್ಕನೆ ಬಾರಿಗೆ ಅರ್ಹತೆ ಪಡೆದಿದೆ. ಘಾನ ತಂಡ 2010ರಲ್ಲಿ ಕ್ವಾರ್ಟರ್ ಫೈನಲ್ವರೆಗೂ ಪ್ರವೇಶಿಸಿತ್ತು. 2014ರಲ್ಲಿ ಕೊನೆಯ ಬಾರಿಗೆ ವಿಶ್ವಕಪ್ ಆಡಿತ್ತು.