Fifa Worldcup : ಕ್ವಾರ್ಟರ್ನಲ್ಲಿ ಹಾಲಿ ಚಾಂಪಿಯನ್ಸ್ ಎದುರಿಸಲಿರುವ ಇಂಗ್ಲೆಂಡ್
ಅಮೋಘ ಆಟ ಪ್ರದರ್ಶಿಸಿದ ಬಲಿಷ್ಠ ಇಂಗ್ಲೆಂಡ್ ತಂಡ ಸೆನೆಗಲ್ ವಿರುದ್ಧ 3-0 ಗೋಲುಗಳಿಂದ ಗೆಲುವು ದಾಖಲಿಸಿ ಕ್ವಾರ್ಟರ್ ಪ್ರವೇಶಿಸಿತು. ಕ್ವಾರ್ಟರ್ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಆಫ್ರಿಕಾ ತಂಡಗಳ ವಿರುದ್ಧ ಸೋಲಿಲ್ಲದ ದಾಖಲೆಯನ್ನು ಮುಂದುವರೆಸಿತು. ಪಂದ್ಯದ ಆರಂಭದಲ್ಲಿ ಸೆನೆಗಲ್ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು.
ಬೌಲಾಯೆ ಡಿಯಾ ಹೊಡೆದ ಚೆಂಡನ್ನು ಇಂಗ್ಲೆಂಡ್ ತಂಡದ ಗೋಲ್ ಕೀಪರ್ ಜೋರ್ಡನ್ ಪಿಕ್ ಪೋರ್ಡ್ ಆಕರ್ಷಕವಾಗಿ ಒಂದೇ ಕೈಯಲ್ಲಿ ಹಿಡಿದರು.
38ನೇ ನಿಮಿಷದಲ್ಲಿ ಜೋರ್ಡನ್ ಹೆಂಡರ್ಸನ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ನಂತರ (45+3ನಿಮಿಷದಲ್ಲಿ) ತಾರಾ ಆಟಗಾರ ಹ್ಯಾರಿ ಕೇನ್ ಗೋಲು ಹೊಡೆದು ಎದುರಾಳಿ ಮೇಲೆ ಒತ್ತಡ ಹೇರಿದರು.
ಎದುರಾಳಿ ತಂಡದ ರಕ್ಷಣಾ ಕ್ಷೇತ್ರದ ದೌರ್ಬಲ್ಯ ಅರಿತ ಇಂಗ್ಲೆಂಡ್ ಮತ್ತೆ ದಾಳಿ ನಡೆಸಿತು. 57ನೇ ನಿಮಿಷದಲ್ಲಿ ಸಾಕಾ ಗೋಲು ಹೊಡೆದು ತಂಡದ ಸಂಭ್ರಮವನ್ನು ಹೆಚ್ಚಿಸಿದರು.
ಈ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಒಟ್ಟು 12 ಗೋಲುಗಳನ್ನು ಹೊಡದು ಕಳೆದ ಬಾರಿಯ ದಾಖಲೆಯನ್ನು ಸರಿಗಟ್ಟಿದೆ. 1966ರಲ್ಲಿ ವಿಶ್ವಕಪ್ ಗೆದ್ದಾಗ ಆಂಗ್ಲರು 11 ಗೋಲುಗಳನ್ನು ಹೊಡೆದಿದ್ದರು.