Fifa Worldcup : ಕ್ವಾರ್ಟರ್ ಫಿನಲ್ಸ್ ತಲುಪಿದ ಹಾಲಿ ಚಾಂಪಿಯನ್ಸ್ ಫ್ರಾನ್ಸ್..!!
ಹಾಲಿ ಚಾಂಪಿಯನ್ ಫ್ರಾನ್ಸ್ ಫಿಫಾ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿಣಾರ್ಯಕ ಪ್ರಿಕ್ವಾರ್ಟರ್ ನಲ್ಲಿ ಪೋಲೆಂಡ್ ವಿರುದ್ದ 3-1 ಗೋಲುಗಳಿಂದ ಗೆದ್ದು ಬೀಗಿತು.
ಜೊತೆಗೆ ಹಲವಾರು ದಾಖಲೆಗಳನ್ನು ಬರೆಯಿತು.
ಪೋಲೆಂಡ್ ವಿರುದ್ಧ 8ನೇ ಗೆಲುವು ದಾಖಲಿಸಿತು.
ಪಂದ್ಯದ ಮೊದಲ ಅವಧಿಯಲ್ಲಿ ಪೋಲೆಂಡ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು.ಗೋಲ್ ಕೀಪರ್ ಲೋರಿಸ್ ಅವರ ಪ್ರದರ್ಶನ ಪೋಲೆಂಡ್ ಗೋಲ್ ಅನ್ನು ಮಿಸ್ ಮಾಡಿಕೊಂಡಿತು.
44ನೇ ನಿಮಿಷದಲ್ಲಿ ಫ್ರಾನ್ಸ್ನ ಜಿರೊಡ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು.
ಎರಡನೆ ಅವಧಿಯಲ್ಲಿ ಪೋಲೆಂಡ್ ಒತ್ತಡದಲ್ಲಿ ಸಿಲುಕಿದಂತೆ ಆಡಿತು. ಕಿಲಿಯಾನ್ ಎಂಬಾಪೆ, ಫಾರ್ವರ್ಡ್ ಆಟಗಾರರು ಮತ್ತು ಮಿಡ್ ಫಿಲ್ಡರ್ಗಳ ವೇಗದ ಆಟದೆದುರು ಪೋಲೆಂಡ್ ಸುಸ್ತು ಹೊಡೆಯಿತು. 74ನೇ ನಿಮಿಷದಲ್ಲಿ ಎಂಬಾಪೆ ಗೋಲು ಹೊಡೆದರು.
91ನೇ ನಿಮಿಷದಲ್ಲಿ ಮತ್ತೆ ಎಂಬಾಪೆ ಗೋಲು ಹೊಡೆದು ತಂಡದ ಗೆಲುವನ್ನು ಖಚಿತಪಡಿಸಿದರು. 99ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದ ಲಾವಂಡೊವ್ಸ್ಕಿ ಗೋಲು ಹೊಡೆದು ಅಂತರ ತಗ್ಗಿಸಿದರು. 1982ರ ಬಳಿಕ ಕ್ವಾರ್ಟರ್ಗೇರುವ ಪೋಲೆಂಡ್ ಕನಸು ಹಾಗೆ ಉಳಿಯಿತು.