Fifa WorldCup : ಪ್ರಿಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ರೊನಾಲ್ಡೊ ನೇತೃತ್ವದ ಪೋರ್ಚುಗಲ್
ಮಿಡ್ಫೀಲ್ಡರ್ ಬ್ರುನೊ ಫರ್ನಾಂಡೀಸ್ ಹೊಡೆದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಉರುಗ್ವೆ ವಿರುದ್ಧ 2-0 ಗೋಲುಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಪೋರ್ಚುಗಲ್ ಪ್ರಿಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ.
ಮಂಗಳವಾರ ತಡ ರಾತ್ರಿ ಲೂಸೈಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ಕಠಿಣ ಸವಾಲು ಎದುರಿಸಿ ಗೆದ್ದುಕೊಂಡಿತು. ಗುಂಪು ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದು ಎರಡನೆ ಬಾರಿಯಾಗಿದೆ.
ಮೊದಲಾರ್ಧದಲ್ಲಿ ಪೋರ್ಚುಗಲ್ ಚೆಂಡನ ಮೇಲೆ ಹಿಡಿತ ಸಾಸಿತ್ತಾದರೂ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಆದರೆ ಎರಡನೆ ಅವಯ 54ನೇ ನಿಮಿಷದಲ್ಲಿ ಬ್ರೂನೊ ಫಾರ್ನಾಂಡಿಸ್ ಆಕರ್ಷಕವಾಗಿ ಹೊಡೆದರು.
ನಂತರ ಹೆಚ್ಚುವರಿ ನಿಮಿಷದಲ್ಲಿ ಬ್ರೂನೊ ಫರ್ನಾಂಡಿಸ್ (90 +3 ನಿಮಿಷ)ಮತ್ತೆ ಗೋಲು ಹೊಡೆದ ತಂಡದ ಸಂಭ್ರಮವನ್ನು ಹೆಚ್ಚಿಸಿದರು.
ಫರ್ನಾಂಡಿಸ್ ಗೋಲಿನ ಬಳಿಕ ಉರುಗ್ವೆ ವೇಗದ ಆಟಕ್ಕೆ ಮೊರೆ ಹೋಯಿತು.ಮ್ಯಾಕ್ಸಿ ಗೋಮೆಜ್ ನೀಡಿದ ಚೆಂಡನ್ನು ಲೂಹಿಸ್ ಸ್ವಾರೇಜ್ ಗೋಲು ಹೊಡೆಯುವಲ್ಲಿ ವಿಫಲರಾದರು.
ಈ ಗೆಲುವಿನೊಂದಿಗೆ ಪೋರ್ಚುಗಲ್ ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪೋರ್ಚುಗಲ್ ವಿರುದ್ಧ ಸೋತರೂ ನಾಕೌಟ್ ಹಂತಕ್ಕೆ ಹೋಗಲು ಇನ್ನು ಅವಕಾಶವಿದೆ. ತನ್ನ ಕೊನೆಯ ಪಂದ್ಯದಲ್ಲಿ ಘಾನಾ ವಿರುದ್ಧ ಉರುಗ್ವೆ ಗೆಲ್ಲಬೇಕಿದೆ.
2018ರ ವಿಶ್ವಕಪ್ನ ನಾಕೌಟ್ ಹಂತದಲ್ಲಿ ಉರುಗ್ವೆ ತಂಡ ಪೋರ್ಚುಗಲ್ ತಂಡವನ್ನು ಮಣಿಸಿತ್ತು. ಅಂದಿನ ಇತಿಹಾಸವನ್ನು ಮತ್ತೆ ಮರುಸೃಷ್ಟಿಸಲಿಲ್ಲ.
fifa worldcup