ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup 2026 final – ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..?

admin by admin
July 19, 2026
in Newsbeat, Sports, ಕ್ರೀಡೆ
fifa world cup 2026 final match refree Slavko Vincic

fifa world cup 2026 final match refree Slavko Vincic

Share on FacebookShare on TwitterShare on WhatsappShare on Telegram

 

ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..?

Related posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

August 8, 2026
malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

August 8, 2026

ದಿನಾಂಕ – ಮೇ 30, 2020
ಸಮಯ – ಮಧ್ಯರಾತ್ರಿ.
ಸ್ಥಳ – ಬೋಸ್ನಿಯಾ ಮತ್ತು ಹೆರ್ಜೆಗೋವಿನಾದ ಬಿಜೆಲ್ಮಿನಾ ನಗದಲ್ಲಿರುವ ಒಂದು ಫಾರ್ಮ್ ಹೌಸ್..!

ಮಂದ ಬೆಳಕಿನಲ್ಲಿ ಮೋಜು -ಮಸ್ತಿಯ ರಂಗೀನಾಟ. ನಶೆಯ ಅಮಲು. ಮಾದಕ ದ್ರವ್ಯಗಳ ಘಾಟು. ಹುಚ್ಚೆದ್ದು ಕುಣಿಸುತ್ತಿದ್ದ ಡಿಜೆ ಸಾಂಗ್ಸ್. ಇತಿಮಿತಿ ಇಲ್ಲದ ಸರಸ ಸಲ್ಲಾಪಗಳು..!

ಆದ್ರೆ ಮಧ್ಯರಾತ್ರಿಯ ಈ ರಂಗೀಲಾದ ಹಿಂದೆ ಅಂತಾರಾಷ್ಟ್ರೀಯ ಅಪರಾಧ ಜಗತ್ತಿನ ಕರಾಳ ನೆರಳಿದೆ ಎಂಬ ಸಣ್ಣ ಸುಳಿವು ಅಲ್ಲಿದ್ದ ಬಹುತೇಕ ಮಂದಿಗೆ ಗೊತ್ತಿರಲಿಲ್ಲ.!

ಆದ್ರೂ ಈ ಬೃಹತ್ ಜಾಲದ ಖಚಿತ ಮಾಹಿತಿ ಸಂಗ್ರಹಿಸಿದ್ದ ಬೋಸ್ನಿಯಾ ಪೊಲೀಸರು ಫಾರ್ಮ್‍ಹೌಸ್ ಮೇಲೆ ದಾಳಿ ನಡೆಸಿದ್ರು. ಅಲ್ಲಿದ್ದ ಸುಖಿ ಜೀವಿಗಳು ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಪೊಲೀಸರನ್ನು ಕಂಡಾಗ ಕೆಲವರ ನಶೆ ಇಳಿದ್ರೂ ಮತ್ತಿನಲ್ಲಿ ತೇಲಾಡುತ್ತಿದ್ದರು. ರೇಡ್ ಮಾಡಿದ್ದ ಪೊಲೀಸರು, ಅಪಾರ ಪ್ರಮಾಣದ ಮಾದಕ ದ್ರವ್ಯ, 9 ಪಿಸ್ತೂಲ್, ಲಕ್ಷಾಂತರ ಮೌಲ್ಯದ ನಗದು ಸೇರಿದಂತೆ ಒಟ್ಟು 35 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ತಲೆ ತಗ್ಗಿಸಿಕೊಂಡು ಪೊಲೀಸರ ಮುಂದೆ ನಿಂತಿದ್ದ ಆ ವ್ಯಕ್ತಿ ಯಾರು..?

ಆದ್ರೆ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಮಾತ್ರ ತಲೆತಗ್ಗಿಸಿಕೊಂಡು ನಿಂತಿದ್ದ. ಮೈದಾನದಲ್ಲಿ ನ್ಯಾಯದ ತೀರ್ಪು ನೀಡುತ್ತಿದ್ದ ಆ ವ್ಯಕ್ತಿ, ಮಂದ ಬೆಳಕಿನಲ್ಲಿ ಡ್ರಗ್ಸ್ ಕೇಸ್ ಆರೋಪದ ಬಲೆಯೊಳಗೆ ಸಿಲುಕಿಕೊಂಡಿದ್ದ. ಸಾವಿರಾರು ಪ್ರೇಕ್ಷಕರ ಮುಂದೆ ಎದೆ ಉಬ್ಬಿಸಿಕೊಂಡು ಆಟಗಾರರನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿ, ಅವತ್ತು ಪೂರ್ತಿಯಾಗಿ ನಲುಗಿ ಹೋಗಿದ್ದ.

ಅಚ್ಚರಿ ಅಂದ್ರೆ ಇವತ್ತು ಆ ವ್ಯಕ್ತಿಯೇ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮುಖ್ಯ ರೆಫ್ರಿಯಾಗಿದ್ದಾನೆ. ಕೋಟ್ಯಂತರ ಜನರ ಮುಂದೆ ತನ್ನ ವಿದಾಯದ ಪಂದ್ಯಕ್ಕೆ ಕೊನೆಯ ವಿಸಿಲು ಊದುವ ಕ್ಷಣವನ್ನು ಎದುರು ನೋಡುತ್ತಿದ್ದಾನೆ.

ಹೌದು, ಆತನ ಹೆಸರು -ಸ್ಲಾವ್ಕೋ ವಿನ್ಸಿಕ್.

ಹಾಗೇ ನೋಡಿದ್ರೆ ಅವತ್ತಿನ ಪಾರ್ಟಿಗೂ ವಿನ್ಸಿಕ್‍ಗೂ ಸಂಬಂಧನೇ ಇರಲಿಲ್ಲ. ಮೈದಾನದಲ್ಲಿ ರೆಫ್ರಿಯಾಗಿದ್ರೂ ವಿನ್ಸಿಕ್, ಸ್ವಂತ ಟೆಲಿಕಾಂ ಕಂಪೆನಿಯ ಮಾಲೀಕನಾಗಿದ್ದ. ಹೀಗಾಗಿ ಬಿಸಿನೆಸ್ ಮೀಟಿಂಗ್‍ಗಾಗಿ ಬಂದಿದ್ದ ವಿನ್ಸಿಕ್ ತಡ ರಾತ್ರಿ ಆ ಫಾರ್ಮ್ ಹೌಸ್ ನಲ್ಲಿ ಊಟ ಮಾಡುತ್ತಿದ್ದ. ಅದೇ ವೇಳೆ ಪೊಲೀಸರ ಕೈಗೆ ಸಿಲುಕಿಕೊಂಡಿದ್ದ.

ಆದ್ರೆ ವಿನ್ಸಿಕ್ ಏನೇ ಸಮರ್ಥನೆ ಮಾಡಿಕೊಂಡ್ರೂ ಪೊಲೀಸರು ನಂಬುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರೊಳಗೆ ವಿನ್ಸಿಕ್ ಬಂಧನದ ಸುದ್ದಿ ಮಿಂಚಿನಂತೆ ಜಗತ್ತಿನೆಲ್ಲೆಡೆ ಪಸರಿಸಿತ್ತು. ಡ್ರಗ್ಸ್ ಹಾಗೂ ವೈಶ್ಯವಾಟಿಕೆ ದಂಧೆಯ ಕೇಸ್ ಆಗಿರುವುದರಿಂದ ವಿನ್ಸಿಕ್‍ಗೆ ಜೈಲೇ ಗತಿ ಅಂತ ಬಹುತೇಕ ಮಂದಿ ಅಂದುಕೊಂಡಿದ್ದರು. ಆದ್ರೆ ವಿನ್ಸಿಕ್‍ನ ಅದೃಷ್ಟ ಚೆನ್ನಾಗಿತ್ತು. ಸುಮಾರು 48 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಬೋಸ್ನಿಯಾ ಪೊಲೀಸರಿಗೆ, ವಿನ್ಸಿಕ್ ಅಪರಾಧಿಯಲ್ಲ ಎಂಬ ವಿಷ್ಯ ಗೊತ್ತಾಯ್ತು. ಹೀಗಾಗಿ ಆತನಿಗೆ ಪೊಲೀಸರು ಕ್ಲೀನ್ ಚಿಟ್ ಕೊಟ್ಟು ಬಿಡುಗಡೆಗೊಳಿಸಿದ್ದರು.

ಅಂದು ಪೊಲೀಸರ ಆತಿಥಿ.. ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ.!

ಆದ್ರೆ ಹೊರ ಜಗತ್ತು ಒಪ್ಪಬೇಕಾಗಲ್ಲ. ವಿನ್ಸಿಕ್ ಮೇಲೆ ಸಾಕಷ್ಟು ಟೀಕೆ, ನಿಂದನೆಗಳು ಕೇಳಿಬಂದಿದ್ದವು. ಆದ್ರೂ ವಿನ್ಸಿಕ್ ತಲೆಕೆಡಿಸಿಕೊಂಡಿರಲಿಲ್ಲ. ಅದೊಂದು ಕೆಟ್ಟ ಸಮಯ ಅಂತ ತಿಳಿದುಕೊಂಡು ಮತ್ತೆ ಫೀüನಿಕ್ಸ್ ಹಕ್ಕಿಯಂತೆ ಎದ್ದು ಬಂದಿದ್ದ. ಜೊತೆಗೆ ಫಿಫಾ ಮತ್ತು ಸ್ಲೋವೇನಿಯಾ ಫುಟ್‍ಬಾಲ್ ಸಂಸ್ಥೆಯೂ ಆತನ ಬೆನ್ನಿಗೆ ನಿಂತಿತ್ತು.

ಹೀಗಾಗಿ ಈ ಕಳಂಕ ವಿನ್ಸಿಕ್ ಬದುಕಿಗೆ ಗಾಢವಾದ ಪರಿಣಾಮವನ್ನು ಬೀರಲಿಲ್ಲ. ವಿಸಿಲ್ ಹಿಡಿದುಕೊಂಡು ಮತ್ತೆ ಅಂಗಣಕ್ಕಿಳಿದಿದ್ದ. 2022ರ ಕತಾರ್ ಫಿಫಾ ವಿಶ್ವಕಪ್‍ನಲ್ಲೂ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದ. ಲೀಗ್‍ನಲ್ಲಿ ಸೌದಿ ವಿರುದ್ದ ಅರ್ಜೆಂಟಿನಾದ ಆಘಾತಕಾರಿ ಸೋಲಿಗೂ ವಿನ್ಸಿಕ್ ಮೈದಾನದಲ್ಲೇ ಸಾಕ್ಷಿಯಾಗಿದ್ದ.

ನಂತರ ಪ್ರಮುಖ ಕ್ಲಬ್ ಟೂರ್ನಿಗಳಲ್ಲೂ ರೆಫ್ರಿಯಾಗಿ ತನ್ನ ಘನತೆ, ಗೌರವವನ್ನು ಮತ್ತೆ ಪಡೆದುಕೊಂಡಿದ್ದ. ಅಲ್ಲದೆ 2024ರ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವನ್ನು ಅದ್ಭುತವಾಗಿ ನಿಭಾಯಿಸಿದ್ದ. ಇದೀಗ 2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶನಾಗಿದ್ದಾನೆ..

ಶಿಸ್ತಿನ ಸಿಪಾಯಿ.. ಮುಲಾಜಿಲ್ಲದ ನಿರ್ಧಾರ.. ನೋ ಕಾಂಪ್ರಮೈಸ್ ವ್ಯಕ್ತಿತ್ವ..!

ರೆಫ್ರಿ ಸ್ಲಾವ್ಕೋ ವಿನ್ಸಿಕ್ ಅಂದ್ರೆ ಶಿಸ್ತಿನ ಸಿಪಾಯಿ. ಆಟಗಾರರ ಪ್ರತಿ ಚಲನೆಯ ಮೇಲೂ ಆತನದ್ದು ಹದ್ದಿನ ಕಣ್ಣು. ವಿನ್ಸಿಕ್ ಮುಂದೆ ಯಾವುದೇ ಆಟಗಾರನÀ ನಾಟಕಗಳು ನಡೆಯುವುದಿಲ್ಲ. ಆತನ ಒಂದು ತೀಕ್ಷ್ಣ ನೋಟಕ್ಕೆ ಶ್ರೇಷ್ಠ ಆಟಗಾರನು ಕೂಡ ಸೈಲೆಂಟ್ ಆಗುತ್ತಾನೆ. ಯಾಕಂದ್ರೆ ಆತನ ತೀರ್ಪು, ನಿರ್ಧಾರ ಅಷ್ಟೇ ನಿಖರವಾಗಿರುತ್ತಿತ್ತು.

ಅದೇ ರೀತಿ ತಪ್ಪು ನಿರ್ಧಾರಗಳನ್ನ ನೀಡುವುದು ತುಂಬಾನೇ ವಿರಳ. ಶಾಂತ ಹಾಗೂ ತಾಳ್ಮೆಯಿಂದಲೇ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾನೆ. ಅನಗತ್ಯವಾಗಿ ಹಳದಿ ಮತ್ತು ರೆಡ್ ಕಾರ್ಡ್À ನೀಡುವ ಜಾಯಮಾನದವನಲ್ಲ. ಆದ್ರೆ ಆಟಗಾರರ ತಪ್ಪುಗಳಿಗೆ ಮಾತ್ರ ಅಲ್ಲೇ ಶಿಕ್ಷೆ ನೀಡ್ತಾನೆ. ಇದು ಆತನ ಸ್ವಭಾವವೂ ಹೌದು.. ವ್ಯಕ್ತಿತ್ವವೂ ಹೌದು.

ಖ್ಯಾತ ರೆಫ್ರಿ ದಾಮೀರ್ ಸ್ಕೋಮಿನಾ ಶಿಷ್ಯ ವಿನ್ಸಿಕ್..!

ವಿನ್ಸಿಕ್‍ಗೆ ಮೊದಲು ಫುಟ್‍ಬಾಲ್ ಆಟಗಾರನಾಗಬೇಕು ಎಂಬ ಕನಸಿತ್ತು. ಆದ್ರೆ ಸ್ಲೋವೆನಿಯಾದಲ್ಲಿ ಆಟಗಾರರಿಗಿಂತ ರೆಫ್ರಿಗಳಿಗೆ ಹೆಚ್ಚಿನ ಗೌರವ ಸಿಗುತ್ತಿತ್ತು. ಹೀಗಾಗಿ ರೆಫ್ರಿ ಕೋರ್ಸ್‍ಗಳನ್ನು ಮುಗಿಸಿ ವೃತ್ತಿ ಜೀವನ ಆರಂಭಿಸಿದ್ದ.

ನಂತರ ಖ್ಯಾತ ರೆಫ್ರಿ ದಾಮೀರ್ ಸ್ಕೋಮಿನಾ ಗರಡಿಯಲ್ಲಿ ಪಳಗಿ ಹಂತ ಹಂತವಾಗಿ ತನ್ನ ಭವಿಷ್ಯವನ್ನು ರೂಪಿಸಿಕೊಂಡಿದ್ದ. ಹಾಗೇ ಫುಟ್‍ಬಾಲ್ ಜಗತ್ತಿನ ಆಧುನಿಕ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಂಡಿದ್ದ. ಅದರಲ್ಲೂ ಫಿಫಾದ ಆಧುನಿಕವಿಎಆರ್ ತಂತ್ರಜ್ಞಾನವನ್ನು ಬಳಸುವುದರಲ್ಲಿ ತುಂಬಾನೇ ಬುದ್ಧಿವಂತನಾಗಿದ್ದಾನೆÀ. ಹೀಗಾಗಿಯೇ ಫಿಫಾದ ಅತ್ಯುತ್ತಮ ರೆಫ್ರಿಯಾಗಿ ಹೊರಹೊಮ್ಮಿದ್ದಾನೆ.

2010ರಿಂದ 2026ರವರೆಗೆ ಅಂತಾರಾಷ್ಟೀಯ ರೆಫ್ರಿಯಾಗಿರುವ ವಿನ್ಸಿಕ್, ತನ್ನ ವೃತ್ತಿ ಬದುಕಿನಲ್ಲಿ ಸುಮಾರು 420ಕ್ಕೂ ಅಧಿಕ ಪಂದ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾನೆ. ಶಿಸ್ತು ಉಲ್ಲಂಘನೆ ಮಾಡಿದ್ದ ಸುಮಾರು 1600ಕ್ಕೂ ಹೆಚ್ಚು ಆಟಗಾರರಿಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ಕೊಟ್ಟಿದ್ದಾನೆ. ಅಪಾಯಕಾರಿ ಆಟವನ್ನಾಡಿದ್ದ 50ಕ್ಕೂ ಹೆಚ್ಚು ಆಟಗಾರರಿಗೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರದಬ್ಬಿದ್ದಾನೆ. .

ಫಿಫಾ ಫೈನಲ್ ಮ್ಯಾಚ್ ಮುಗಿಸಿ ವೃತ್ತಿ ಬದುಕಿಗೆ ವಿದಾಯ..!

2007ರಲ್ಲಿ ಸ್ಲೋವೆನಿಯಾದ ಸಣ್ಣ ಮೈದಾನದಲ್ಲಿ ಶುರುವಾದ ವಿನ್ಸಿಕ್ ವೃತ್ತಿ ಬದುಕಿನ ಪಯಣ 2026ರ ಫಿಫಾ ವಿಶ್ವಕಪ್ ಫೈನಲ್‍ನಲ್ಲಿ ಕೊನೆಯಾಗುತ್ತದೆ. ನ್ಯೂಜೆರ್ಸಿಯ ಮೆಟ್‍ಲೈಫ್ ಮೈದಾನÀವೇ ವೃತ್ತಿ ಬದುಕಿನ ಕೊನೆಯ ನಿಲ್ದಾಣವಾಗಲಿದೆ. ಪ್ರತಿಷ್ಠಿತ ಟೂರ್ನಿಯ ಫೈನಲ್ ಮ್ಯಾಚ್‍ನ ಅಂತಿಮ ಗಳಿಗೆಯಲ್ಲಿ ವಿಸಿಲ್ ಊದುವ ಮೂಲಕ ತನ್ನ ವರ್ಣರಂಜಿತ ಬದುಕಿಗೆ ವಿದಾಯ ಹೇಳಲಿದ್ದಾನೆ.

ಒಂದು ಸಾಮಾನ್ಯ ಕುಟುಂಬದಿಂದ ಬಂದಿರುವ ವಿನ್ಸಿಕ್ ಒಬ್ಬ ರೆಫ್ರಿಯಾಗಿ ಫಿಫಾ ಜಗತ್ತಿನಲ್ಲಿ ತನ್ನದೇ ಆದ ಹಿರಿಮೆಯನ್ನು ಗಳಿಸಿಕೊಂಡಿದ್ದಾನೆ. ರೆವೋ ಪಾರ್ಟಿಯ ಕಳಂಕ ತನ್ನ ಹೆಸರಿಗೆ ಅಂಟಿಕೊಂಡಿದ್ರೂ ಅದು ಅಷ್ಟೇ ಸಲೀಸಾಗಿ ಅಳಿಸಿ ಹೋಗಿದೆ.

ಐತಿಹಾಸಿಕ ಪಂದ್ಯದಲ್ಲಿ ವರ್ಣರಂಜಿತ ವಿದಾಯ..!

ಒಂದಂತು ಸತ್ಯ. ವಿದಾಯದ ವೇಳೆ ಬೇಸರ, ಭಾವುಕದ ಕಣ್ಣೀರು ಸಹಜ. ಆದ್ರೆ ಅದೇ ಕಣ್ಣೀರಿನಲ್ಲಿ ತಾನು ನಡೆದು ಬಂದ ಹಾದಿಯ ಸಾಧನೆ ಮತ್ತು ಯಶಸ್ಸಿನ ಆನಂದಬಾಷ್ಪವೂ ಇರುತ್ತದೆ.

ಒಟ್ಟಿನಲ್ಲಿ ಫೈನಲ್ ಮ್ಯಾಚ್‍ನಲ್ಲಿ ಯಾರು ಗೆಲ್ತಾರೆ ಅನ್ನೋದು ಮುಖ್ಯವಲ್ಲ. ಯಾಕಂದ್ರೆ 2026ರ ಫಿಫಾ ವಿಶ್ವಕಪ್‍ನ ಅಂತಿಮ ಪಂದ್ಯದಲ್ಲಿ ಮಹಾರಾಜನ ಕಿರೀಟಕ್ಕೆ ಮತ್ತೊಂದು ಫಿಫಾ ಗರಿಯೂ ಸೇರಿಕೊಳ್ಳಬಹುದು. ಹಾಗೇ ಯುವರಾಜನ ಪಟ್ಟಾಭಿಷೇಕವೂ ನಡೆಯಬಹುದು. ಒಂದೇ ಮಾತಿನಲ್ಲಿ ಹೇಳುವುದಾದ್ರೆ, ಅದು, ವಿಶ್ವ ಫುಟ್‍ಬಾಲ್ ಪರಂಪರೆಯನ್ನು ಹಸ್ತಾಂತರಿಸುವ ಐತಿಹಾಸಿಕ ಮಹಾ ವೇದಿಕೆ.

ಈಗಾಗಲೇ ಬಾರ್ಸಿಲೋನಾ ಕ್ಲಬ್‍ಗೆ ಮೆಸ್ಸಿಯ ಉತ್ತರಾಧಿಕಾರಿಯಾಗಿ ಯಮಲ್ ನೇಮಕಗೊಂಡಿದ್ದಾನೆ. ಇದೀಗ ಜಾಗತಿಕ ಫುಟ್‍ಬಾಲ್ ನಲ್ಲಿ ಮೆಸ್ಸಿಯ ವಾರಸುದಾರನಾಗಿ ಯಮಲ್ ರೂಪುಗೊಳ್ಳುತ್ತಾನೋ ಅನ್ನೋದನ್ನು ಕಾದು ನೋಡಬೇಕು. ಆದ್ರೆ ಈ ಐತಿಹಾಸಿಕ ಕ್ಷಣಕ್ಕೆ ರೆಫ್ರಿ ಸ್ಲಾವ್ಕೋ ವಿನ್ಸಿಕ್ ಪ್ರತ್ಯಕ್ಷದರ್ಶಿಯಾಗಲಿದ್ದಾನೆ.

ವಿಧಿಯಾಟ ಹೇಗೆಲ್ಲಾ ಇರುತ್ತೆ ಅಲ್ವಾ..? ಆರು ವರ್ಷಗಳ ಹಿಂದೆ ಪೊಲೀಸರ ಎದುರು ಮೌನವಾಗಿ ತಲೆತಗ್ಗಿಸಿಕೊಂಡು ನಿಂತಿದ್ದ ವಿನ್ಸಿಕ್, ಇಂದು ಕೋಟ್ಯಂತರ ಕಂಗಳ ಮುಂದೆ ವಿಶ್ವಕಪ್‍ನ ಫೈನಲ್ ಪಂದ್ಯಕ್ಕೆ ಅಂತಿಮ ವಿಸಿಲ್ ಹೊಡೆಯಲಿದ್ದಾನೆ. ಅದುವೇ ತನ್ನ ವೃತ್ತಿ ಬದುಕಿನಲ್ಲಿ ಊದುವ ಕೊನೆಯ ವಿಸಿಲ್. ಲೈಫ್ ಈಸ್ ಬ್ಯೂಟಿಫುಲ್ ಅಲ್ವಾ..!

ಸನತ್ ರೈ

ShareTweetSendShare
Join us on:

Related Posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

by admin
August 8, 2026
0

'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ 'ದಿ ಪ್ಯಾರಡೈಸ್' ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ! ಹೈದರಾಬಾದ್: 'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್...

malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

by admin
August 8, 2026
0

ಮುಂಬೈ: ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ವ್ಯಾಂಪೈರ್ ಆಕ್ಷನ್ ಥ್ರಿಲ್ಲರ್ ‘ಹಾಫ್’ (HALF) ಸಿನಿಮಾವು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. 'ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್'...

jio-new-long-term-ott-pass-plans-kannada

ಜಿಯೋ ಒಟಿಟಿ-ಪಾಸ್ ವ್ಯಾಪ್ತಿ ವಿಸ್ತರಣೆ: 3 ತಿಂಗಳಿಗೆ 550 ರೂ., ವರ್ಷಪೂರ್ತಿ ಮನರಂಜನೆಗೆ 2000 ರೂ.

by admin
August 8, 2026
0

- 15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್ ಮತ್ತು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು - ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G - ವರ್ಷಪೂರ್ತಿ...

dr-vidyabhushana-bhaja-mana-workshop-kannada

Bengaluru – ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ!

by admin
August 8, 2026
0

• ಜಯನಗರದಲ್ಲಿ ಯಶಸ್ವಿಯಾಗಿ ಜರುಗಿದ 'ಭಜ ಮನ' ಗಾಯನ ಕಾರ್ಯಾಗಾರ • ವಿದ್ಯಾಭೂಷಣ್ - ಮೇಧಾ ಅವರಿಂದ ಹೊಸ ತಲೆಮಾರಿಗೆ ದಾಸ ಸಾಹಿತ್ಯದ ಮಾರ್ಗದರ್ಶನ • ಸಂಗೀತಾಸಕ್ತರಿಗೆ...

nagara-panchami-2026-history-significance-kannada

Astro- ನಾಗರ ಪಂಚಮಿ: ಪ್ರಾಚೀನ ನಾಗಾರಾಧನೆ, ಮಹತ್ವ ಮತ್ತು ವಿಶೇಷ ಆಚರಣೆಗಳು

by admin
August 8, 2026
0

ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯನ್ನು ದೈವಸ್ವರೂಪವೆಂದು ಭಾವಿಸಿ ಆರಾಧಿಸುವ ವಿಶಿಷ್ಟ ಹಾಗೂ ಅನಾದಿ ಪರಂಪರೆಯನ್ನು ಹೊಂದಿದೆ. ಪ್ರಕೃತಿ ಆರಾಧನೆಯಲ್ಲಿ 'ನಾಗಾರಾಧನೆ'ಯು ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ಸ್ಥಾನವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram