ಬಸ್ ಟೈಮಿಂಗ್ಸ್ ವಿಚಾರವಾಗಿ ಕಂಡಕ್ಟರ್ ಗಳ ಪೈಟಿಂಗ್ – ವೀಡಿಯೋ ವೈರಲ್
ಉಡುಪಿ : ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ಸ್ ವಿಚಾರವಾಗಿ ಎರಡು ಬಸ್ಸಿನ ನಿರ್ವಾಹಕರ ಮಧ್ಯೆ ಬೀದಿ ಕಾಳಗ ನಡೆದಿದೆ. ಉಡುಪಿ ಹೂಡೆ ಮತ್ತು ಕೆಮ್ಮಣ್ಣು ಕಡೆಗೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ಗಳು ಟೈಮಿಂಗ್ಸ್ ವಿಚಾರದಲ್ಲಿ ಜಗಳ ಶುರು ಮಾಡಿಕೊಂಡಿದ್ದಾರೆ. ಜಗಳ ತಾರಕ್ಕೇರಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪ್ರಯಾಣಿಕರ ಎದುರೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
https://www.facebook.com/watch/?v=495116445428290&extid=CL-UNK-UNK-UNK-AN_GK0T-GK1C&ref=sharing
ಪ್ರಯಾಣಿಕರೊಬ್ಬರು ತೆಗೆದ ಜಗಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಖುವಂತೆ ಅಗ್ರಹ ವ್ಯಕ್ತವಾಗಿದೆ.
ಉಡುಪಿ, ಮಂಗಳೂರು ಹಾಗೂ ಕರಾವಳಿ ಭಾಗದ ಹಲವೆಡೆ ಖಾಸಗಿ ಬಸ್ಗಳ ಪ್ರಾಬಲ್ಯ ಇದೆ. ಈ ನಗರಗಳಲ್ಲಿ ಸೆಕೆಂಡ್ಗಳ ಲೆಕ್ಕದಲ್ಲಿಯೂ ಬಸ್ಗಳು ಸಂಚಾರ ಮಾಡುತ್ತವೆ. ಉಡುಪಿಯಲ್ಲಿ ಕೂಡ ಅದೇ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದೆ. ಇಬ್ಬರು ನಿರ್ವಾಹಕರ ನಡುವೆ ಬಸ್ ಸಮಯದ ವಿಷಯಕ್ಕೆ ಬೀದಿ ಜಗಳ ನಡೆದಿದೆ.








