fighting for seats
- ಮುಂಬೈನ ಥಾಣೆ-ಪನ್ವೇಲ್ ಲೋಕಲ್ ಟ್ರೈನ್ನಲ್ಲಿ ಘಟನೆ.
- ಜಗಳ ಕಂಡು ಪೋಲಿಸರಿಗೆ ಮಾಹಿತಿ ನೀಡಿದ ಸ್ಥಳಿಯರು
- ಜಗಳ ಬಿಡಿಸಲು ಬಂದ ಪೋಲಿಸ್ ಮೇಲೆ
ಮುಂಬೈ: ಗುರುವಾರ ಸಂಜೆ 7:45ಕ್ಕೆ ಸೀಟಿನ ವಿಚಾರವಾಗಿ ಗಲಾಟೆ ನಡೆದಿದ್ದು
ಸೆಂಟ್ರಲ್ ರೈಲ್ವೇ ವ್ಯಾಪ್ತಿಯ ಥಾಣೆ ಮತ್ತು ಪನ್ವೇಲ್ ನಡುವಿನ ಲೋಕಲ್ ರೈಲಿನಲ್ಲಿ ಕೆಲ ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಮಹಿಳಾ ಕಂಪಾರ್ಟ್ಮೆಂಟ್ನಲ್ಲಿ ಸೀಟ್ ವಿಚಾರವಾಗಿ ಮೂವರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ವಿಷಯ ದೊಡ್ಡದಾಗುತ್ತಿದ್ದಂತೆ ಉಳಿದ ಇತರ ಕೆಲವು ಮಹಿಳೆಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ್ದ ಕರ್ತವ್ಯ ನಿರತರಾಗಿದ್ದ ಮಹಿಳಾ ಪೊಲೀಸರೊಬ್ಬರು ಜಗಳ ಬಿಡಿಸಲು ಹೋಗಿ ಗಾಯಗೊಂಡಿದ್ದಾರೆ. ವಾಶಿ ಸರ್ಕಾರಿ ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಸಂಭಾಜಿ ಕಟಾರೆ ಪ್ರಕಾರ, ರೈಲಿನೊಳಗಿನ ಸೀಟುಗಳಿಗಾಗಿ ಮೂವರು ಮಹಿಳಾ ಪ್ರಯಾಣಿಕರ ಮಧ್ಯೆ ಜಗಳ ಶುರುವಾಗಿದೆ. ನಂತರ ಈ ಜಗಳದಲ್ಲಿ ಉಳಿದ ಮಹಿಳೆಯರೂ ತೊಡಗಿಕೊಂಡಾಗ ಅದು ತೀವ್ರ ಹೊಡೆದಾಟಕ್ಕೆ ತಿರುಗಿಕೊಂಡು ಇಡೀ ಕಂಪಾರ್ಟ್ಮೆಂಟ್ನಲ್ಲಿ ಭಯಾನಕ ದೃಶ್ಯ ನಿರ್ಮಾಣವಾಗಿದೆ
Women’s maniyas are fighting for seats
‘Women Wrestling’ in Mumbai’s Train for Seat 😂
Spectators enjoyed the performance 😂#Mumbai pic.twitter.com/vVupFi5jEC
— Pooja Singh 🇮🇳 (@1994PoojaSingh) October 7, 2022