ಚಾಮರಾಜನಗರ: 3 ವರ್ಷದ ಹುಲಿಯೊಂದು ವನ್ಯ ಪ್ರಾಣಿಗಳ ಕಾದಾಟದಲ್ಲಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಮದ್ದೂರು ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯದ ಡಿ ಲೈನ್ ದೊಡ್ಡ ಕರಿಯಯ್ಯ ಎಂಬುವವರ ಜಮೀನಿನಲ್ಲಿ ಈ ಹುಲಿ ಪತ್ತೆಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಿಂದ ಬಂದಿದ್ದ ಹುಲಿ ನಿತ್ರಾಣಗೊಂಡಿದ್ದ ಕುರಿತು ಬೆಳಿಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ತಿಳಿಸಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ನಡೆಯಲು ಆಗದ ಪರಿಸ್ಥಿತಿಯಲ್ಲಿದ್ದ ಹುಲಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹಿಡಿಯಲು ಮುಂದಾಗಿದ್ದರು. ಆದರೆ, ಹುಲಿ ಸಂಜೆಯ ವೇಳೆಗೆ ಸಾವನ್ನಪ್ಪಿದೆ ಎನ್ನಲಾಗಿದೆ.
ವನ್ಯ ಪ್ರಾಣಿ ಜೊತೆಗೆ ಕಾದಾಟದಲ್ಲಿ ಕತ್ತು, ಮೈ ಮೇಲೆ ಗಾಯಗಳಾಗಿವೆ. ಹುಲಿಯ ಅಂತ್ಯಕ್ರಿಯೆ ನಡೆಸಲು ಬಂಡೀಪುರದ ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.