film news
ಸಿನಿಮ್ಯಾಕ್ಸ್ ಟಾಪ್ – 5 ನ್ಯೂಸ್
ಕಡಲ ನಡುವೆ ಮಕ್ಕಳೊಂದಿಗೆ ಯಶ್ ದಂಪತಿಯ ಮೋಜು ಮಸ್ತಿ : ಮಗನ ಅದ್ಧೂರಿ ಬರ್ತ್ ಡೇ ಸಂಭ್ರಮ
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಧಿಕಾ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿ ಕಡಲ ತೀರದಲ್ಲಿ ತಮ್ಮ ಮುದ್ದು ಮಕ್ಕಳು ಹಾಗೂ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಮುದ್ದು ಮಗ ಯಥರ್ವ್ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿದೆ. ಕೊರೊನಾ ಸಮಯವಾದ ಹಿನ್ನೆಲೆ ಅತ್ಯಂತ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಿದ್ದ ಯಶ್ ದಂಪತಿ ಇದೀಗ ಸಮುದ್ರದ ನಡುವೆ ಅದ್ಧೂರಿಯಾಗಿ ಮಗನ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪರಿವಾರದವರು ಆಪ್ತ ಸ್ನೇಹಿತರು ಸಂಭ್ರಮದಲ್ಲಿ ಭಾಗಿಯಾಗಿದ್ರು. 
‘ದಶಾವತಾರ’ನ ಹುಟ್ಟಹಬ್ಬಕ್ಕೆ ಶುಭಾಷಯ ತಿಳಿಸಿದ ‘ಸ್ಯಾಂಡಲ್ ವುಡ್ ‘ಕಿಚ್ಚ’..!
ಬಹುಭಾಷಾ ನಟ ಕಮ್ ರಾಜಕಾರಣಿಯಾಗಿರುವ ಕಮಲ್ ಹಾಸನ್ ಅವರು ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಮಲ್ ಹಾಸನ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಹಾರೈಸುತ್ತಿದ್ದಾರೆ. ವಿಶೇಷ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಲೆಜೆಂಡರಿ ನಟನ ಬರ್ತ್ ಡೇ ಗೆ ಶುಭಕೋರಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಕಮಲ್ ಹಾಸನ್ ಸರ್’ ಎಂದು ವಿಶ್ ಮಾಡುವ ಜೊತೆಗೆ ಕಮಲ್ ಹಾಸನ್ ಫೋಟೋವನ್ನು ಶೇರ್ ಮಾಡಿದ್ದಾರೆ.
‘ದಶಾವತಾರ’ನ ಹುಟ್ಟಹಬ್ಬಕ್ಕೆ ಶುಭಾಷಯ ತಿಳಿಸಿದ ‘ಸ್ಯಾಂಡಲ್ ವುಡ್ ‘ಕಿಚ್ಚ’..!
‘ಡಾರ್ಲಿಂಗ್’ ಜೋಡಿಗೆ’ ಕಿಚ್ಚ ಸುದೀಪ್ ವಿಶ್ ಮಾಡಿದ್ದೇ ವಿಶೇಷ…!
ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ತಾಯಿರುವ ಜೋಡಿ ಅಂದ್ರೆ ಅದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಲವ್ ಮಾಕ್ಟೇಲ್ ನಲ್ಲಿ ಒಟ್ಟಾಗಿ ನಟಿಸಿ ಜನಮನಗೆದ್ದಿರುವ ಈ ಜೋಡಿ ಮದುವೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ತೆರ ಎಳೆದಿದ್ದಾರೆ. ವಿಶೇಷ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಜೋಡಿಗೆ ಶುಭಹಾರೈಸಿರೋದು. ಹೌದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿರುವ ಸುದೀಪ್, ‘ಫೆಬ್ರವರಿ 14ಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮಬ್ಬರಿಗೂ ಶುಭಹಾರೈಕೆಗಳು. ನೀವು ಯಾವಾಗಲು ಹೀಗೆ ಖುಷಿಯಾಗಿ ಜೊತೆಯಾಗಿರಿ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಬ್ಬರ ಫೋಟೋವನ್ನು ಶೇರ್ ಮಾಡಿದ್ದಾರೆ.
ಅಪ್ಪ ಕಮಲ್ ಹಾಸನ್ ಬರ್ತ್ ಡೇ ಗೆ ವಿಶೇಷವಾಗಿ ವಿಷ್ ಮಾಡಿದ ಪುತ್ರಿ ಶ್ರುತಿ ಹಾಸನ್..!
ಹಾರರ್ “ಕಲಿಯುಗಂ” ನಲ್ಲಿ ಬರುತ್ತಿದ್ದಾರೆ ನಮ್ಮ “ಯೂಟರ್ನ್” ಸುಂದರಿ..!
ಯು ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಹಿಂದಿ, ಮಳಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರದ್ಧಾ ಇದೀಗ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಹೌದು ಪ್ರಸ್ತುತ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರದ್ಧಾ ಇದೀಗ ಯುಟರ್ನ್ ನಂತರ ಮತ್ತೊಂದು ಹಾರರ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಶ್ರದ್ಧಾ ಅವರ ನಟನೆಯ ಮಳಯಾಳಂ ಚಿತ್ರವೊಂದು ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಹೊಸ ಚಿತ್ರಕ್ಕೆ ನಟಿ ಸಹಿ ಹಾಕಿದ್ದಾರೆ. ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಇಂದೊಂದು 2050ರ ಕಾಲಘಟ್ಟದ ಕಥಾಹಂದರ ಸಿನಿಮಾವಾಗಿದೆ. ಆದ್ರೆ ಸಿನಿಮಾದಲ್ಲಿ ಟ್ವಿಸ್ಟ್ ಗಳು ಇವೆ. ಅಂದ್ಹಾಗೆ ಟೈಮ್ ಟ್ರಾವೆಲ್ ಕಥೆ ಸಹ ಇರಬಹುದು ಎನ್ನಲಾಗಿದೆ. ಚಿತ್ರಕ್ಕೆ ಕಲಿಯುಗಂ ಎಂದು ಶೀರ್ಷಿಕೆ ಇಡಲಾಗಿದೆ.
ಕಮಲ್ ಹಾಸನ್ ಬರ್ತ್ ಡೇ ಗೆ ವಿಷ್ ಮಾಡಿದ ಪುತ್ರಿ ಶ್ರುತಿ ಹಾಸನ್..!
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಇಂದು ಹುಬ್ಬದ ಸಂಭ್ರಮದಲ್ಲಿದ್ದಾರೆ. ಪ್ರೀತಿಯ ತಂದೆಗೆ ಪುತ್ರಿ ಶ್ರುತಿ ಹಾಸನ್ ವಿಶೇಷವಾಗಿ ಕಮಲ್ ಹಾಸನ್ ಅವರಿಗೆ ವಿಷ್ ಹಾಡಿ ಹಳೆಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ನನ್ನ ಪ್ರೀತಿಯ ಬಾಪುಜಿ, ಅಪ್ಪಾ, ಡ್ಯಾಡಿ ಜನ್ಮ ದಿನದ ಶುಭಾಶಯಗಳು. ಈ ವರ್ಷ ನಿಮ್ಮ ಭವ್ಯವಾದ ವರ್ಷಗಳ ಗ್ರಂಥಾಲಯದಲ್ಲಿ ಮತ್ತೊಂದು ಸ್ಮರಣೀಯ ವರ್ಷವಾಗಿರಲಿ. ಜಗತ್ತಿಗೆ ನೀವು ಏನೆಲ್ಲ ಕೊಡುಬೇಕು ಎಂದು ಸಂಗ್ರಹಿಸಿದ್ದೀರೋ ಎಲ್ಲವನ್ನೂ ನೋಡಲು ಕಾತರಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಶ್ರುತಿ ಹಾಸನ್ ಅವರ ಪೋಸ್ಟ್ ಗೆ ಲೈಕ್ ಗಳು ಕಮೆಂಟ್ ಗಳು ಹರಿದುಬರುತ್ತಿವೆ.
film news
‘ಡಾರ್ಲಿಂಗ್’ ಜೋಡಿಗೆ’ ಕಿಚ್ಚ ಸುದೀಪ್ ವಿಶ್ ಮಾಡಿದ್ದೇ ವಿಶೇಷ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








