shruthi hassan
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಇಂದು ಹುಬ್ಬದ ಸಂಭ್ರಮದಲ್ಲಿದ್ದಾರೆ. ಪ್ರೀತಿಯ ತಂದೆಗೆ ಪುತ್ರಿ ಶ್ರುತಿ ಹಾಸನ್ ವಿಶೇಷವಾಗಿ ಕಮಲ್ ಹಾಸನ್ ಅವರಿಗೆ ವಿಷ್ ಹಾಡಿ ಹಳೆಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ನನ್ನ ಪ್ರೀತಿಯ ಬಾಪುಜಿ, ಅಪ್ಪಾ, ಡ್ಯಾಡಿ ಜನ್ಮ ದಿನದ ಶುಭಾಶಯಗಳು. ಈ ವರ್ಷ ನಿಮ್ಮ ಭವ್ಯವಾದ ವರ್ಷಗಳ ಗ್ರಂಥಾಲಯದಲ್ಲಿ ಮತ್ತೊಂದು ಸ್ಮರಣೀಯ ವರ್ಷವಾಗಿರಲಿ. ಜಗತ್ತಿಗೆ ನೀವು ಏನೆಲ್ಲ ಕೊಡುಬೇಕು ಎಂದು ಸಂಗ್ರಹಿಸಿದ್ದೀರೋ ಎಲ್ಲವನ್ನೂ ನೋಡಲು ಕಾತರಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಶ್ರುತಿ ಹಾಸನ್ ಅವರ ಪೋಸ್ಟ್ ಗೆ ಲೈಕ್ ಗಳು ಕಮೆಂಟ್ ಗಳು ಹರಿದುಬರುತ್ತಿವೆ.
ಪ್ರಸ್ತುತ ನಟನೆ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಕಮಲ್ ಹಾಸನ್ ಅವರು ಬಹುನಿರೀಕ್ಷಿತ ಇಂಡಿಯನ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸದ್ಯ ತಮಿಳು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಕಮಲ್ ಹಾಸನ್ ಕೊನೆಯದಾಗಿ 2018ರಲ್ಲಿ ವಿಶ್ವರೂಪಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ದಕ್ಷಿಣಭಾರತ ಚಿತ್ರರಂಗದ ಮೇರುನಟ ಕಮಲ್ ಹಾಸನ್ ಅವರಿಗೆ ಬರ್ತ್ ಡೇ ಸಂಭ್ರಮ..!
ಇನ್ನೂ ಕಮಲ್ ಹಾಸನ್ ಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಭಾರತೀಯ ಸಿನಿಮಾರಂಗದ ಪ್ರತಿಭಾವಂತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್ ತಮಿಳು ಸಿನಿಮಾರಂಗಲ್ಲಿ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ.
shruthi hassan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel