Kamal Hassan
ಕಮಲ್ ಹಾಸನ್.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಕಮಲ್ ಹಾಸನ್ ದಕ್ಷಿಣ ಭಾರತದ ಖ್ಯಾತ ಸ್ಟಾರ್ ನಟ. ನಟನೆ ಅಷ್ಟೇ ಅಲ್ಲದೇ ಪ್ರಸ್ತುತ ರಾಜಕೀಯವಾಗಿಯೂ ಗುರುತಿಸಿಕೊಂಡಿರುವ ಕಮಲ್ ಹಾಸನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕೇವಲ ನಟನೆ ಅಷ್ಟೇ ಅಲ್ಲದೇ ನಿರ್ದೇಶಕನಾಗಿಯೂ, ಡ್ಯಾನ್ಸರ್ ಆಗಿಯೂ, ಗಾಯಕನಾಗಿಯೂ, ಸಾಹಿತ್ಯಕಾರನಾಗಿ ಹೀಗೆ ಸಕಲ ಕಲಾವಲ್ಲಭನಾಗಿರುವ ಕಮಲ್ ಹಾಸನ್ ಸಿನಿಮಾ ಬರುತ್ತಿದೆ ಅಂದ್ರೇನೆ ಎಲ್ಲಾ ಭಾಷೆಯ ಜನರಿಗೆ ಕುತೂಹಲ ಶಿಖರಕ್ಕೇರಿರುತ್ತೆ. ಎಂತಹ ಪಾತ್ರಗಳಿಗೂ ಕಮಲ್ ಹೊಂದಿಕೊಳ್ತಾರೆ. ಇಂತಹ ಮೇರು ನಟ ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹೀಗಾಗಿ ಕಮಲ್ ಹಾಸನ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ದೇಶಾದ್ಯಂತದ ಅಭಿಮಾನಿಗಳು ಶುಭಾಶಷ ಕೋರುತ್ತಿದ್ದಾರೆ. ಅಷ್ಟೇ ಅಲ್ಲದೇ ಎಲ್ಲ ಸಿನಿಮಾರಂಗದ ತಾರೆಗರು, ಗಣ್ಯರು ಕಮಲ್ ಅವರಿಗೆ ವಿಷ್ ಮಾಡ್ತಾಯಿದ್ದಾರೆ. ಕಮಲ್ ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಹಬ್ಬವನ್ನೇ ಆಚರಣೆ ಮಾಡ್ತಿದ್ದಾರೆ.
ಸಾಧನೆ
ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಕಮಲ್ ಅವರ ನಟನೆಯ ಛಾಪು ಸಾಗರದಾಚೆಗೂ ಭಾರೀ ಸದ್ದು ಮಾಡಿದೆ. ಅವರ ನಟನೆಯನ್ನ ಹಾಡಿ ಒಗಳಿ ಮೆಚ್ಚಿಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ, ಹಿಂದಿ, ಮಳಯಾಳಂ, ಬೆಂಗಾಳಿ ಹೀಗೆ ಹಲವು ಭಾಷೆಗಳಲ್ಲಿ ನಟಿಸಿರುವ ಕೀರ್ತಿ ಕಮಲ್ ಹಾಸನ್ ಅವರದ್ದು.
ಕಮಲ್ ಹಾಸನ್ ತಮ್ಮ ಅತ್ಯದ್ಭುತ ನಟನೆಯಿಂದಾಗಿ 4 ರಾಷ್ಟ್ರೀಯ ಪ್ರಶಸ್ತಿ 19 ಫಿಲ್ಮ್ ಫೇರ್ ಅವಾರ್ಡ್ಸ್. , ಕಲೈಮಣಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ಪಡೆದಿದ್ದಾರೆ.
ವೃತ್ತಿ ಜೀವನ
1960ರಲ್ಲಿ ತಮಿಳು ಚಿತ್ರರಂಗದಲ್ಲಿ ಬಾಲನಟನಾಗಿ ವೃತ್ತಿ ಜೀವನ ಆರಂಭಿಸಿದ ಕಮಲ್ ಹಾಸನ್ ಕಾಲತೂರ್ ಕನ್ನಮ್ಮದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ರು. ಈ ಸಿನಿಮಾಗಾಗಿ ಕಮಲ್ ಹಾಸನ್ ಅವರಿಗೆ ಗೋಲ್ಡ್ ಮೆಡಲ್ ಸಿಕ್ಕಿತ್ತು. ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ , ಕೆಲವರಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಮಲ್ ಹಾಸನ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಸಸಿನಿಮಾ ಅಂದ್ರೆ 1975ರಲ್ಲಿ ಮೂಡಿಬಂದ ಡ್ರಾಮಾ ಅಪೂರ್ವ ರಾಗಗಂಗಳ್. ಈ ಸಿನಿಮಾದಲ್ಲಿ ಕಮಲ್ ಹಾಸನ್ ಅವರು ನಾಯಕನಾಗಿ ಮಿಂಚಿ ಅಭಿಮಾನಿಗಳನ್ನ ತಮ್ಮ ನಟನೆಗೆ ಮೂಕವಿಸ್ಮಿತರಾಗುವಂತೆ ಮಾಡಿದ್ರು. ನಂತರದಲ್ಲಿ ಮಟ್ಟೋರು ಸೀತಾ, ಅಂಧರಾಗಂ, ತಿರುವೋನಂ, ರಾಸಲೀಲ,ಕುಮಾರ ವಿಜಯಂ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಕಮಲ್ ಅವರ ಯಶಸ್ಸು ದಿನಗಳೆದಂತೆಲ್ಲಾ ಶಿಖರಕ್ಕೆ ಏರುತ್ತಾ ಹೋಯ್ತು. ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂ, ರಾಮ ಶಾಮ ಭಾಮ ಹೀಗೆ ಕೆಲವು ಸಿನಿಮಾಗಳಲ್ಲಿಯೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಸನ್. ಇನ್ನೂ 2000 ದ ನಂತರದ ಸಿನಿಮಾಗಳನ್ನ ತೆಗೆದುಕೊಂಡರೆ ಪಂಚತಂತ್ರ್ಯಮ್, ಅನ್ ಬೆ ಶಿವಮ್, ಮುಂಬೈ ಎಕ್ಸ್ ಪ್ರೆಸ್, 2008 ರ ಸೂಪರ್ ಹಿಟ್ ಸಿನಿಮಾ ದಶಾವತಾರಂ, ವಿಶ್ವರೂಪಂ ನಲ್ಲಿ ಕಮಲ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಸ್ತುತ ಇಂಡಿಯನ್ -2 ನಲ್ಲಿ ಬ್ಯುಸಿ.
ಇನ್ನೂ 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಅವರು ಇತ್ತೀಚೆಗಷ್ಟೇ 232ನೇ ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಇಡೀ ದೇಶದ ಚಿತ್ರರಂಗವೇ ಎದುರು ನೋಡ್ತಿರುವ ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲಗ, ಸಿದ್ಧಾರ್ಥ್, ಬಾಬಿ ಸಿಂಹ, ರಕಲು ಪ್ರೀತ್ ಸೇರಿಸದಂತೆ ದೊಡ್ಡ ತಾರಾಬಳಗವೇ ಇದೆ.
ಪರ್ಸನಲ್ ಲೈಫ್
ಕಮಲ್ ಹಾಸನ್ ಅವರು ತಮಿಳು ಮಾತನಾಡುವ ಅಯ್ಯಂಗಾರ್ ಕುಟುಂಬದಲ್ಲಿ 1954ರಲ್ಲಿ ಜನಿಸಿದ್ರು. ತಮಿಳುನಾಡಿನ ರಾಮನಾಥಪುರಂನ ಮೂಲದವರು ಕಮಲ್. 1978ರಲ್ಲಿ ಅಂದ್ರೆ 24ನೇ ವಯಸ್ಸಿನಲ್ಲಿ ಕಮಲ್ ಹಾಸನ್ ಅವರು ನೃತ್ಯಗಾರ್ತಿ ವಾಣಿ ಪತಿ ಅವರನ್ನ ವರಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ 10 ವರ್ಷಗಳ ಬಳಿಕ ಇಬ್ಬರು ವಿಚ್ಛೇಧನ ಪಡೆದುಕೊಂಡಿದ್ದರು. ಬಳಿಕ ನಂತರ 1988ರ ವೇಳೆ ನಟಿ ಸಾರಿಕಾ ಅವರೊಂದಿಗೆ ಕಮಲ್ ಹಾಸನ್ ಮದುವೆಯಾದ್ರು. ಕಮಲ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಪುತ್ರಿ ಶ್ರುತಿ ಹಾಸನ್. ಶ್ರುತಿ ಹಾಸನ್ ಕೂಡ ಬಹುಬಾಷಾ ನಟಿ. ತಮಿಳು, ಬಾಲಿವುಡ್ ನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ. 2ನೇ ಪುತ್ರಿ ಅಕ್ಷರಾ.
Kamal Hassan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel