ಕ್ರಿಪ್ಟೋ ಕುರಿತು RBI ಜೊತೆ ಮಾತುಕತೆ – ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋ ಕರೆನ್ಸಿ ಮತ್ತು ಬಡ್ಜೆಟ್ ಕುರಿತು ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದರು. ಬಜೆಟ್ ಮಂಡನೆ ಬಳಿಕ ಇದೇ ಮೊದಲ ಬಾರಿಗೆ ನಡೆದ ಸಭೆಯಲ್ಲಿ ಪ್ರಮುಖ ಯೋಜನೆಗಳ ಕುರಿತು ಮಾತುಕತೆ ನಡೆಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್, ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೆ ಚರ್ಚೆ ನಡೆಸಲಾಗುತ್ತಿದ್ದು, ವಿಸ್ತೃತ ಪರಾಮರ್ಶೆಯ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕ್ರಿಪ್ಟೊ ಕರೆನ್ಸಿ ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ರಿಸರ್ವ್ ಬ್ಯಾಂಕ್ ಜತೆಗೆ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೇಂದ್ರ, ಬ್ಯಾಂಕ್ ನೊಂದಿಗೆ ಉತ್ತಮ ಸಾಮರಸ್ಯ ಹೊಂದಿದ್ದು, ನಮ್ಮ ಕಾರ್ಯವ್ಯಾಪ್ತಿ ಹಾಗೂ ಆದ್ಯತೆಗೆ ಪರಸ್ಪರ ಗೌರವ ನೀಡುತ್ತ, ದೇಶದ ಹಿತಕ್ಕಾಗಿ ಜತೆಗೂಡಿ ಕೆಲಸ ಮಾಡಲಾಗುತ್ತಿದೆ ಎಂದರು.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡಿ ಹಣದುಬ್ಬರ ಪ್ರಮಾಣ ಕಳೆದ ಅಕ್ಟೋಬರ್ ನಿಂದ ಇಳಿಕೆಯಾಗುತ್ತಿದೆ. ಇಂದಿನ ಹಣದುಬ್ಬರದ ದರ ಶೇಕಡ 6ಕ್ಕೆ ಸ್ಥಿರವಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರ ದರದಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ ಎಂದರು.
Finance Minister Nirmala Sitharaman held discussions with Reserve Bank of India on Crypto Currency and Budget.