ನವದೆಹಲಿ : ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ಕೊರೊನಾ ಆರ್ಭಟ ಜೋರಾಗಿದೆ. ಇದರ ನಡುವೆ ಇಂದಿಗೆ ಅನ್ ಲಾಕ್ 1.0 ಮುಕ್ತಾಯವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಜುಲೈನ 2ನೇ ಹಂತದ ಅನ್ ಲಾಕ್ 2.0 ಲೆಕ್ಕಚಾರದಲ್ಲಿದ್ದು, ಮೋದಿಯ ಹೊಸ ಅನ್ ಲಾಕ್ ಪ್ಲಾನ್ ಇಂದು ರಿವೀಲ್ ಆಗುತ್ತಾ..? ಎಂಬ ಕುತೂಹಲ ಮೂಡಿದೆ.
ಈಗಾಗಲೇ ಕೇಂದ್ರದ ಆರೋಗ್ಯ ಇಲಾಖೆ ಸೋಂಕು ಹೆಚ್ಚಿರುವ ರಾಜ್ಯಗಳಲ್ಲಿ ಅಧ್ಯಯನ ನಡೆಸಿ, ಒಂದು ವರದಿ ಸಿದ್ಧಪಡಿಸಿದೆ. ಇದರ ಆಧಾರವಾಗಿ ಪ್ರಧಾನಿ ನರೇಂದ್ರ ಮೋದಿ ಹೊಸ ಅನ್ ಲಾಕ್ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಥಾಸ್ಥಿತಿ ಮುಂದುರಿಸುವ ಸಾಧ್ಯತೆ
ಮೂಲಗಳ ಪ್ರಕಾರ ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಯಥಾಸ್ಥಿತಿ ಮುಂದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದಿನೇ ದಿನೇ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ, ಅನ್ ಲಾಕ್ 2.0 ಜಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಕೆಲ ವಿನಾಯಿತಿ..?
ಒಂದು ವೇಳೆ ಪ್ರಧಾನಿ ಮೋದಿ ಅನ್ ಲಾಕ್ 2.0 ಮಾಡಿದರೇ ಆರ್ಥಿಕತೆ ದೃಷ್ಠಿಯಿಂದ, ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಆರಂಭಕ್ಕೆ ಅವಕಾಶ ಮಾಡಿಕೊಡಬಹುದು.ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶದಲ್ಲಿ ಜಿಮ್, ಸಿನಿಮಾ ಮಂದಿರ ತೆರೆಯಲು ಅವಕಾಶ ಸಿಗಬಹುದು.
ಬೆಂಗಳೂರುನಂತಹ ದೊಡ್ಡ ನಗರಗಳಲ್ಲಿ ಮುನ್ನೆಚ್ಚರಿಕೆಯೊಂದಿಗೆ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು.








