ಶಿಲ್ಪ ಶೆಟ್ಟಿ ಕುಟುಂಬಕ್ಕೆ ನಿಲ್ಲದ ಸಂಕಷ್ಟ – ವಂಚನೆ ಆರೋಪದಲ್ಲಿ ಎಫ್ ಆರ್ ಐ ದಾಖಲು
ಬಾಲಿವುಡ್ ಬೆಡಗಿ ಶಿಲ್ಪಶೆಟ್ಟಿ ಮತ್ತು ರಾಜ್ ಕುಂದ್ರ ಅವರ ಸಂಕಷ್ಟಗಳು ಕೊನೆಗೊಳ್ಳುವಾಗೆ ಕಾಣುತ್ತಿಲ್ಲ. ಅವರಿಬ್ಬರ ಮೇಲೆ ಒಂದಾದ ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇದೆ. ಇದೀಗ ಈ ದಂಪತಿ 1.51 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಮುಂಬೈ ಮೂಲದ ಉದ್ಯಮಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಉದ್ಯಮಿ ನಿತಿನ್ ಬರಾದಯಿ ಅವರು, ಶಿಲ್ಪಾ ಶೇಟ್ಟಿ ದಂಪತಿ ಮತ್ತು ಎಸ್ ಎಲ್ ಎಫ್ ಫಿಟ್ ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್ ಸೇರಿ ಫಿಟ್ನೆಸ್ ಕಂಪನಿಗೆ ಪ್ರಾಂಚೈಸಿ ನೀಡುವುದಾಗಿ ಹೇಳಿ ಹಣ ತೆಗೆದುಕೊಂಡು ವಂಚಿಸಿದ್ದಾರೆ ಎಂದು ಬಾದ್ರಾ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾರೆ. ದೂರಿನ ಅನ್ವಯ ಪೊಲಿಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಪುಣೆ ಮತ್ತು ಕೊರೆಂಗಾವ್ ನಲ್ಲಿ ಜಿಮ್ ಮತ್ತು ಸ್ಪಾ ಸೆಂಟರ್ ಗಳನ್ನ ತೆರೆದು ಅದರ ಲಾಭಾಂಶ ನೀಡುವುದಾಗಿ 1.54 ಕೋಟಿಯನ್ನ ಹೂಡಿಕೆ ಮಾಡಿಸಿದ್ದರು. ಆದರೆ ಇದುವರೆಗೂ ಹಣ ಅಥವಾ ಲಾಭಂಶ ನೀಡಿಲ್ಲ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ದೂರಿನ ಪ್ರಕಾರ ಕಂಪನಿ ನಿರ್ದೇಶಕ ,ಮತ್ತು ಶಿಲ್ಪ ಶೆಟ್ಟಿ ದಂಪತಿಗಳ ಮೇಲೆ IPC section 420 120-ಬಿ 506 ಸೆಕ್ಷನ್ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ . ನೀಲಿ ಚಲನಚಿತ್ರ ನಿರ್ಮಾಣದ ಆರೋಪ ಹೊತ್ತಿರುವ ರಾಜ್ ಕುಂದ್ರ ಇತ್ತೀಚೆಗಷ್ಟೆ ಜಾಮಿನಿನ ಮೇಲೆ ಹೊರಬಂದಿದ್ದರು . ಹೊರಬಂದ ಕೆಲವೇ ದಿನಗಳಲ್ಲಿ ಮತ್ತೊಂದು ಪ್ರಕರಣ ಅವರ ಬೆನ್ನೇರಿದೆ.
ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲಿರುವ ಮೇಘಾ ಶೆಟ್ಟಿ- ಸಡಗರ ರಾಘವೇಂದ್ರ ನಿರ್ದೇಶನದ ಹೊಸ ಚಿತ್ರ








