ಬಿಜಿಪಿ ಶಾಸಕರ ಕುಟುಂಬದ ವಿರುದ್ಧ FIR ದಾಖಲು
ಚಿತ್ರದುರ್ಗ: ಮೃತ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಲಪಟಾಯಿಸಿದ ಆರೋಪದ ಹಿನ್ನಲೆ ಶಾಸಕ, ಶಾಸಕನ ಪತ್ನಿ, ಪುತ್ರರ ವಿರುದ್ಧ FIR ದಾಖಲಾಗಿದೆ.
ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಎಂ ಚಂದ್ರಪ್ಪ, ಪತ್ನಿ ಚಂದ್ರಕಲಾ, ಪುತ್ರರಾದ ರಘುನಂದನ್, ದೀಪ ಚಂದನ್ ವಿರುದ್ಧ FIR ದಾಖಲಾಗಿದೆ. ಈ ಮೂವರು ಶ್ರೀಧರ್ ಎಂಬುವರಿಗೆ ಸೇರಿದ ನಿವೇಶನಗಳನ್ನು ಕಬಳಿಸಿದ್ದಾರೆ ಎಂಬ ಆರೋಪದಡಿ FIR ದಾಖಲಾಗಿದೆ.
ಇನ್ನೂ ಈ ಸಂಬಂಧ ಮೃತರಾದ ಶ್ರೀಧರ್ ಸಹೋದರಿ, ಶ್ರೀಧರ್ ಬಳಿ ಜಿಪಿಎ ಪಡೆದಿದ್ದ ನಾಗರಾಜ್ ರಿಂದ ಆಸ್ತಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಶ್ರೀಧರ್ ಮೃತರಾದ ಬಳಿಕ ಜಿಪಿಎ ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಕೆ ಮಾಡಿದ್ದಾರೆ ಅಂತ ನಾಗರಾಜ್ ಮತ್ತು ಎಂ ಚಂದ್ರಪ್ಪ ಕುಟುಂಬದ ವಿರುದ್ಧ ಶ್ರೀಧರ್ ಸಹೋದರಿ ಲತಾ ಮತ್ತು ಮತ್ತಿತರರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಪೊಲೀಸ್ ಠಾಣೆಗೆ ಸೂಚನೆ ನೀಡಿದ ಹಿನ್ನಲೆ ಏಪ್ರಿಲ್ 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಕೇಸ್ ದಾಖಲಾಗಿದೆ.