ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್‌ ಕಟ್ಟಡದಲ್ಲಿ ಬೆಂಕಿ

1 min read
south-african saaksha tv

ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್‌ ಕಟ್ಟಡದಲ್ಲಿ ಬೆಂಕಿ south-african

ಕೇಪ್‌ ಟೌನ್ : ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಸ್ಥಳಕ್ಕೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಆದರೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿಲ್ಲ ಎಂದು ನಗರ ತುರ್ತು ಸೇವೆಗಳ ವಕ್ತಾರ ತಿಳಿಸಿದ್ದಾರೆ.

ಮೊದಲು ಪಾರ್ಲಿಮೆಂಟ್ ನ ಮೇಲ್ಚಾವಣೆಯಲ್ಲಿ  ಕಾಣಿಸಿಕೊಂಡ ಬೆಂಕಿ ತದನಂತರ ಅಸೆಂಬ್ಲಿ ಕಟ್ಟಡಕ್ಕೂ ವಿಸ್ತರಿಸಿದೆ.ಇದರಿಂದ ಕಟ್ಟಡದಲ್ಲಿ ಹೊಗೆ ಆವರಿಸಿಕೊಂಡಿದೆ.

ಇತ್ತ ಸಿಬ್ಬಂದಿ ಬೆಂಕಿಯನ್ನ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಅಂದಹಾಗೆ ಪಾರ್ಲಿಮೆಂಟ್ ನಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd