ಬಿಗ್ ಬಾಸ್ ಮನೆಯಲ್ಲಿ ಫೈರ್ ಕ್ಯಾಂಪ್!: ಕಣ್ಣೀರು.. ಬಿಸಿಯುಸಿರು
ಬಿಗ್ ಬಾಸ್ ಮನೆಯಲ್ಲಿ ತಣ್ಣನೆಯ ರಾತ್ರಿ. ಆದರೆ ಎಲ್ಲರ ಕಣ್ಣಲ್ಲೂ ಕೋಡಿಯಾಗಿ ಹರಿಯುತ್ತಿದೆ ಬಿಸಿಯಾದ ಕಂಬನಿ! ಎದುರಲ್ಲಿ ಅಗ್ಗಷ್ಟಿಗೆ ಧಗಧಗ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಕರಗಿ ಕಣ್ಣೀರಾಗಿ ಹರಿಯುತ್ತಿದ್ದಾರೆ. ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು, ಈಡೇರದೇ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ… ಅಬ್ಬಬ್ಬಾ! ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿವೆಯಲ್ಲ ಎಷ್ಟೊಂದು ಕತೆ!!
ಮನುಷ್ಯ ಮನುಷ್ಯರ ನಡುವಿನ ಗೋಡೆ ಒಡೆಯಲು ನೋವಿಗಿಂತ ಬೇರೆ ಆಯುಧ ಬೇಕೆ? ಅಗ್ಗಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ವರೆಸಿದ್ದಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಹೆಗಲಾಗಿದ್ದಾರೆ. ಒಬ್ಬರಿಗೊಬ್ಬರು ಒದಗಿಬರುತ್ತ ಎಲ್ಲರೂ ಒಂದೇ ಆಗಿದ್ದಾರೆ.
JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಭಾವುಕ ಗಳಿಗೆಗಳು ಸೆರೆಯಾಗಿವೆ.
ಸರಿ… ಆದರೆ ಎಷ್ಟು ಕಾಲ? ಎಲ್ಲಿಯವರೆಗೆ? ಬಿಗ್ ಬಾಸ್ ಮನೆಯೊಳಗಿನ ಪ್ರತಿ ಗಳಿಗೆಯೂ ವ್ಯಕ್ತಿತ್ವ ಪರೀಕ್ಷೆಯ ಅಗ್ನಿದಿವ್ಯವೇ… ಈ ಆಟದಲ್ಲಿ ಒಂದಾಗಿರುವವರು ಮತ್ತೆ ಬೇರಾಗುತ್ತಾರಾ? ಪರಸ್ಪರ ಹೆಗಲುಕೊಟ್ಟವರು ತೊಡೆ ತಟ್ಟಿ ನಿಲ್ಲುತ್ತಾರಾ?
ತಿಳಿಯಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 24 ಗಂಟೆ ಉಚಿತ ನೇರಪ್ರಸಾರವನ್ನು ವೀಕ್ಷಿಸಿ.
ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada