ಗಣೇಶ ಮಾಡಿ ಅಂದ್ರೆ ಅವರಪ್ಪನ್ನ ಮಾಡಿದ್ರು ಅನ್ನೋ ಗಾದೆ ಈ ಸ್ಟೋರಿಗೆ ಸೂಕ್ತ ಅನಿಸುತ್ತೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಲು ಹಾಗೂ ಜನರ ಆತ್ಮಸ್ಥೈರ್ಯ ಹೆಚ್ಚಿಸಲು ನಿನ್ನೆ ಹಣತೆ ಹಚ್ಚಿ ಎಂದು ಕರೆಕೊಟ್ಟಿದ್ದರು. ಪ್ರಧಾನಿ ಅವರ ಮಾತಿನಂತೆ ದೇಶದ ಜನತೆ ನಿನ್ನೆ ರಾತ್ರಿ 9 ಗಂಟೆಗೆ ದೀಪ ಬೆಳಗಿ ಕೊರೊನಾ ಕಗತ್ತಲಿನಿಂದ ಭಾರತ ಹೊರಬರುವಂತೆ ಪ್ರಾರ್ಥನೆ ಮಾಡಿದ್ರು.

ಉತ್ತರ ಪ್ರದೇಶದ ಬಿಜೆಪಿ ನಾಯಕಿ ಮಂಜು ತಿವಾರಿ ಪ್ರಧಾನಿಯವರ 9ಗಂಟೆ 9ನಿಮಿಷದ ಅಭಿಯಾನವನ್ನ ತಪ್ಪಾಗಿ ಅರ್ಥೈಸಿಕೊಂಡ್ರೋ ಏನೋ ಗೊತ್ತಿಲ್ಲ. 9 ಗಂಟೆಯಾಗುತ್ತಿದ್ದಂತೆ ಗನ್ ತೆಗೆದುಕೊಂಡು ಆಚೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷೆ ಗಾಳಿಯಲ್ಲಿ ಗುಂಡು ಹಾರಿಸೇ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಫೈರಿಂಗ್ ವಿಡಿಯೋವನ್ನ ತಾವೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದಾರೆ. ಇನ್ನು ವಿಡಿಯೋವನ್ನು ನೋಡಿದ ನೆಟ್ಟಿಗರು ಮಂಜು ತಿವಾರಿ ವಿರುದ್ಧ ಕಿಡಿಕಾರುತ್ತಿದ್ದಾರೆ.








