ಗಾಜಿಪುರ ಲ್ಯಾಂಡ್ಫಿಲ್ ಗೆ ಬೆಂಕಿ | ಬೆಂಕಿ ನಂದಿಸಲು ಹರಸಾಹಸ
ನವದೆಹಲಿ: ಗಾಜಿಪುರ ಲ್ಯಾಂಡ್ಫಿಲ್ ಗೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ ಸಿಬ್ಬಂದಿ 48 ಗಂಟೆಗಳಿಂದ ಹರಸಾಹಸ ಪಡುತ್ತಿದ್ದಾರೆ.
ಈ ಕುರಿತು ಮಾಹಿರಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು 48 ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವಲ್ಲಿ ತೊಡಗಿದ್ದರೂ, ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿ ಅನಾಹುತದಲ್ಲಿ ಯಾವುದೇ ರೀತಿ ಅಪಾಯ ಸಂಭವಿಸಿಲ್ಲ. ಬೆಂಕಿಯನ್ನು ನಂದಿಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಕೂಲಿಂಗ್ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಬುಧವಾರ ಹೇಳಿದರು.
ಅಲ್ಲದೇ ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಕೊಳ್ಳಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 278(ವಾತಾವರಣದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮಾಡುವುದು), 285(ಬೆಂಕಿ ಅಥವಾ ದಹನಕಾರಿ ವಸ್ತುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಮತ್ತು 336(ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಉಪ ಆಯುಕ್ತರು ಪೊಲೀಸ್ ಪ್ರಿಯಾಂಕಾ ಕಶ್ಯಪ್ ಮಂಗಳವಾರ ತಿಳಿಸಿದ್ದಾರೆ.
ಈ ವರ್ಷವೇ ಭಾಲ್ಸ್ವಾ ಮತ್ತು ತುಘಲಕಾಬಾದ್ನಲ್ಲಿ ಒಟ್ಟು ನಾಲ್ಕು ಕಡೆ ಬೆಂಕಿ ಅನಾಹುತವಾಗಿದೆ. ಕಳೆದ ವರ್ಷ, ಇದೇ ಅವಧಿಯಲ್ಲಿ, 16 ಬೆಂಕಿ ಘಟನೆಗಳು ಭಾಲ್ಸ್ವಾದಲ್ಲಿ 12 ಮತ್ತು ಗಾಜಿಪುರದಲ್ಲಿ 04 ಘಟನೆಗಳು ಸಂಭವಿಸಿದ್ದವು. 2020 ರಲ್ಲಿ, ಅಂತಹ ಒಟ್ಟು 15 ಘಟನೆಗಳು ವರದಿಯಾಗಿದ್ದು, 2019 ರಲ್ಲಿ 37 ವರದಿಯಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.