ಮೈಸೂರಿನ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ

1 min read
Fire Saaksha tv

ಮೈಸೂರಿನ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ Saaksha Tv

ಮೈಸೂರು: ಅರಮನೆ ನಗರಿಯ ಥರ್ಮೋಕೋಲ್ ಫ್ಯಾಕ್ಟರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಥರ್ಮಕೋಲ್ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಲ್ಲ ಎಂದು ಹೇಳಲಾಗಿದೆ.

ಮೈಸೂರಿನ ಅಶೋಕ ಪುರಂ ರೈಲು ನಿಲ್ದಾಣದ ಬಳಿ ಇರುವ  ಈ ಕಾರ್ಖನೆ ಎಂದಿನಂತೆ ಬುಧವಾರ ತನ್ನ ಕಾರ್ಯ ಪ್ರಾರಂಭಿಸಿತ್ತು. ಸಂಜೆ 5 ಗಂಟೆ ಸುಮಾರಿಗೆ ಕಾರ್ಖಾನೆ ಒಳಗಡೆ  ಶಾರ್ಟ್‌ ಸರ್ಕ್ಯೂಟ್‌ ನಿಂದ ಬೆಂಕಿ ಹತ್ತಿಕೊಂಡಿದೆ. ಘಟನೆ ನಡೆದ 20 ನಿಮಿಷಗಳಲ್ಲಿ ಬೆಂಕಿ ಎಲ್ಲ ಕಡೆ ಆವರಿಸಿಕೊಂಡಿದ್ದು ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

ತಕ್ಷಣವೇ ಅಗ್ನಿಶಾಮಕ ದಳದ 4 ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಜನರ ಗುಂಪನ್ನು ಚದುರಿಸಲು ಪೊಲೀಸರು ಹರಸಾಪಟ್ಟರು. ಘಟನೆಯಲ್ಲಿ ಯವುದೇ ಸಾವು ನೋವು ಸಂಭವಿಸಿಲ್ಲ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd